Seetha Raama Serial: ʻಐ ಲವ್ ಯೂ ಸೀತೆʼ ಎಂದೇ ಬಿಟ್ಟ ರಾಮ.. ಚಾಂದಿನಿ ಜೊತೆ ಮದುವೆ ಮಾಡುವ ಆಲೋಚನೆಯಲ್ಲಿ ತಾತ! ‘ಸೀತಾ ರಾಮ’ ಒಂದಾಗ್ತಾರಾ?
ಸೀತಾ ಬದುಕಲ್ಲಿ ಮಗಳು ಸಿಹಿಯೇ ಎಲ್ಲ. ಸಿಹಿಗೈ ರಾಮ್ ಎಂದರೆ ಅಚ್ಚುಮೆಚ್ಚು. ಆದರೆ ಸೀತಾಗೆ ತನಗೂ ರಾಮ್ ಮೇಲೆ ಪ್ರೀತಿ ಮೂಡಿದೆ ಎಂಬುದು ಅರ್ಥವಾಗಿದೆ.
ಇತ್ತ ರಾಮನ ತಾತ ಚಾಂದಿನಿ ಜೊತೆಗೆ ಮೊಮ್ಮಗನ ಮದುವೆಯನ್ನು ಮಾಡುವ ಆಲೋಚನೆಯಲ್ಲಿದ್ದಾರೆ. ಆದರೆ ರಾಮನಿಗೆ ಇದು ಕೊಂಚವೂ ಇಷ್ಟವಿಲ್ಲ.
ಸೀತಾ ಕೂಡ ರಾಮ್ ಬಳಿ ಓಡೋಡಿ ಬಂದು ತನ್ನ ಪ್ರೀತಿಯ ನಿವೇದನೆ ಮಾಡಿದ್ದಾಳೆ. ವೀರಾಂಜನೇಯ ಗುಡ್ಡದಲ್ಲಿ ಈಗ ಸೀತಾ ರಾಮ ಒಂದಾಗಾಯ್ತು.
ಆದರೆ ಸೀತಾಗೆ ಮಗು ಇರುವ ಕಾರಣ ತಾತ ಈ ಪ್ರೀತಿ ಒಪ್ಪುತ್ತಾರೋ ಇಲ್ಲವೋ? ಭಾರ್ಗವಿ, ಚಾಂದಿನಿ ಯೋಜನೆಯಿಂದ ಸೀತಾ-ರಾಮ್ ಒಂದಾಗುತ್ತಾರೋ ಇಲ್ಲವೋ?
ಎಲ್ಲ ಸಮಸ್ಯೆಗಳನ್ನು ಒಟ್ಟಾಗಿ ಎದುರಿಸಿ ಇವರಿಬ್ಬರು ಒಂದಾಗ್ತಾರಾ? ಕಾದು ನೋಡಬೇಕಿದೆ.