ಸೀತಾ ರಾಮ ಸೀರಿಯಲ್ ಖ್ಯಾತ ನಟಿ ಸಿಂಧು ರಾವ್ ಪತಿ ಇವರೇ! ಮಗ ಎಷ್ಟು ಮುದ್ದಾಗಿದ್ದಾನೆ ಗೊತ್ತಾ?
ಸೀತಾ ರಾಮ ಧಾರವಾಹಿ ಸದ್ಯ ಪ್ರೇಕ್ಷಕರ ನೆಚ್ಚಿನ ಸಿರೀಯಲ್ ಎಂದರೇ ತಪ್ಪಾಗುವುದಿಲ್ಲ.. ಸೀತಾ ರಾಮ ಕಲ್ಯಾಣದ ಎಪಿಸೋಡ್ ಅಂತೂ ಸಖತ್ ಆಗಿ ಸೌಂಡ್ ಮಾಡಿತ್ತು..
ಈ ಸೀತಾ ರಾಮ ಸೀರಿಯಲ್ನಲ್ಲಿ ಕನ್ನಡ ಸಿನಿಮಾರಂಗದಲ್ಲಿ ಬಾಲನಟಿಯಾಗಿ ಮಿಂಚಿದ್ದ ಸಿಂಧು ಅವರು ನಟಿಸಿದ್ದಾರೆ.. ಇದೀಗ ಈ ಚೆಂದುಳ್ಳ ಚೆಲುವೆಯ ನಿಜ ಜೀವನ ಹೇಗಿದೆ? ಅವರ ಪತಿ ಯಾರು? ಎನ್ನುವ ಸಣ್ಣ ಮಾಹಿತಿಯನ್ನು ತಿಳಿಯೋಣ..
ವಿಷ್ಣುವರ್ಧನ್, ಶಿವರಾಜ್ಕುಮಾರ್ ಹೀಗೆ ಕನ್ನಡದ ದಿಗ್ಗಜ ನಟರೊಂದಿಗೆ ತೆರೆ ಹಂಚಿಕೊಂಡ ನಟಿ ಸಿಂಧು ೨೦೦೭ ರಲ್ಲಿ ಮಹೇಶ್ ಎನ್ನುವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು..ಈ ಜೋಡಿಗೆ ಒಂದು ಮುದ್ದಾದ ಗಂಡು ಮಗನಿದ್ದಾನೆ.
ನಟಿ ಸಿಂಧು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದು, ಇನ್ಸ್ಟಾಗ್ರಾಂನಲ್ಲಿ ರೀಲ್ಸ್ಗಳನ್ನು ಮಾಡುತ್ತಿರುತ್ತಾರೆ.. ಇತ್ತೀಚೆಗೆ ನಟಿ ಪತಿಯೊಂದಿಗಿನ ಪೋಟೋಗಳನ್ನು ಹಂಚಿಕೊಂಡಿದ್ದರು..
ಇನ್ನು ಸದ್ಯ ನಟಿ ಸಿಂಧು ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರವಾಹಿ ಸೀತಾರಾಮದಲ್ಲಿ ರಾಮನ ಚಿಕ್ಕಮ್ಮನಾಗಿ ಕಾಣಿಸಿಕೊಂಡಿದ್ದಾರೆ.. ಇವರ ಅದ್ಭುತ ಅಭಿನಯ ಎಲ್ಲರಿಗೂ ಸಖತ್ ಇಷ್ಟವಾಗಿದೆ ಎಂದರೇ ಅತಿಶಯೋಕ್ತಿಯಲ್ಲ..
ಈ ಸೀತಾ ರಾಮ ಸೀರಿಯಲ್ ಮೂಲಕ ನಟಿ ಸಿಂಧು ಮತ್ತೆ ಕಿರುತೆರೆಗೆ ರಿ ಎಂಟ್ರಿ ಕೊಟ್ಟಿದ್ದು ಅವರ ಅಭಿಮಾನಿಗಳಿಗೆ ಖುಷಿಯಾಗಿದೆ.. ಜೊತೆಗೆ ಅವರು ಹೀಗೆ ಸಾಕಷ್ಟು ಸೀರೀಯಲ್ಗಳನ್ನು ಮಾಡಲಿ ಎನ್ನುವುದು ಅವರೆಲ್ಲರ ಆಶಯ..