Seetha Rama Kannada Serial: `ಸೀತಾ ರಾಮ` ಧಾರಾವಾಹಿಯ ಸೀತಾ ಗೆಳತಿ ಪ್ರಿಯಾ ಪಾತ್ರಧಾರಿ ಯಾರು ಗೊತ್ತಾ?

Sat, 30 Mar 2024-3:54 pm,

 'ಸೀತಾರಾಮ' ಸೀರಿಯಲ್‌ನಲ್ಲಿ ಸೀತಾ ಬೆಸ್ಟ್ ಫ್ರೆಂಡ್ ಪಾತ್ರ ಪ್ರೇಕ್ಷಕರಿಗೆ ಸಖತ್‌ ಇಷ್ಟವಾಗಿದೆ.. ಇದಕ್ಕೆ ಕಾರಣ ಆ ಪಾತ್ರಕ್ಕೆ ಹೇಳಿ ಮಾಡಿಸಿದಂತೆ ನಟಿಸುತ್ತಿರುವ ಚೆಂದುಳ್ಳಿ ಚೆಲುವೆ ಮೇಘನಾ ಶಂಕರಪ್ಪ.   

ಮುದ್ದು ಮುದ್ದು ಮಾತು, ಖಡಕ್‌ ನೋಟದಿಂದಲೇ ಅಭಿಮಾನಿಗಳನ್ನು ಸೆಳೆದಿರುವ ಈ ಗೊಂಬೆ ಸೀತಾಳ ಜೊತೆಗೆ ರಾಮ್‌ನ ಆಫೀಸ್‌ನಲ್ಲಿ ಕೆಲಸ ಮಾಡುತ್ತಾಳೆ.. ಈಕೆಗೆ ಕೋಟ್ಯಾಧೀಶ ಹುಡುಗನ ಕೈ ಹಿಡಿಯುವ ಆಸೆ.. ಇದು ಪ್ರಿಯಾ ಪಾತ್ರದ ಕಥೆ..  

 'ಸೀತಾರಾಮ' ಸಿರೀಯಲ್‌ಗೂ ಮೊದಲು ನಟಿ ಮೇಘನಾ ಶಂಕರಪ್ಪ 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ಖಳನಾಯಕಿ ನೇತ್ರಾ ಪಾತ್ರದ ಮಿಂಚಿದ್ದರು..   

ನಿರೂಪಕಿಯಾಗಿ ಕಿರುತೆರೆಗೆ ಕಾಲಿಟ್ಟ ಈಕೆ ಮೊದಲು ನಟಿಸಿದ್ದು 'ಕಿನ್ನರಿ' ಧಾರಾವಾಹಿಯಲ್ಲಿ.. ನಂತರ ಕೃಷ್ಣ ತುಳಸಿ, ರತ್ನಗಿರಿ ರಹಸ್ಯ, ಸಿಂಧೂರ, ದೇವಯಾನಿ, ಹೀಗೆ ಹಲವಾರು ಧಾರಾವಾಹಿಗಳಲ್ಲಿ ನಟಿಸಿ ಗುರುತಿಸಿಕೊಂಡಿರುವ ಮೇಘನಾ ಸದ್ಯ ಸೀತಾರಾಮದಲ್ಲಿ ಪ್ರಿಯಾ ಆಗಿ ಕಣ್ಮನ ಸೆಳೆಯುತ್ತಿದ್ದಾರೆ..   

ಪಾತ್ರ ಪಾಸಿಟಿವ್‌ ಅಥವಾ ನೆಗೆಟಿವ್‌.. ಯಾವುದೇ ಆದರೂ ಅದಕ್ಕೆ ತಕ್ಕಂತೆ ಅಚ್ಚುಕಟ್ಟಾಗಿ ನಟನೆ ಮಾಡುವ ಮೇಘನಾ ವಿಭಿನ್ನವಾಗಿ ಗುರುತಿಸಿಕೊಂಡವರು..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link