Senior Citizensರಿಗೊಂದು ಸಂತಸಸ ಸುದ್ದಿ! ಶೀಘ್ರವೇ ಸರ್ಕಾರದಿಂದ ಈ ನಿರ್ಣಯ ಸಾಧ್ಯತೆ
1. ಯೋಜನೆ ಏನು? - ಪೆನ್ಷನ್ ಫಂಡ್ ನಿಯಂತ್ರಣ ಮತ್ತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ಸರ್ಕಾರದ ಬಳಿ ಪ್ರಸ್ತಾವನೆಯೊಂದನ್ನು ಕಳುಹಿಸಿ ಒಪ್ಪಿಗೆ ಸೂಚಿಸುವಂತೆ ಕೋರಿದೆ. ಈ ಪ್ರಸ್ತಾವನೆಯ ಪ್ರಕಾರ NPS ಖಾತೆ ತೆರೆಯಲು ಈ ಮೊದಲು ನಿಗದಿಪಡಿಸಲಾಗಿರುವ ಗರಿಷ್ಠ ವಯೋಮಿತಿಯನ್ನು 65 ರಿಂದ 70ಕ್ಕೆ ಹೆಚ್ಚಿಸಲು ಕೋರಿದೆ. ಇದಲ್ಲದೆ ಯಾವುದೇ ಓರ್ವ ವ್ಯಕ್ತಿ ತನ್ನ ವಯಸ್ಸಿನ 60ನೇ ವಯಸ್ಸನ್ನು ದಾಟಿಗ ಬಳಿಕವೂ ಕೂಡ ಒಂದು ವೇಳೆ ಪೆನ್ಷನ್ ಯೋಜನೆಯನ್ನು ಸೇರಲು ಬಯಸಿದರೆ, ಅಂತಹ ವ್ಯಕ್ತಿಗಳಿಗೆ 75ನೇ ವಯಸ್ಸಿನವರೆಗೆ ಖಾತೆ ತೆರೆಯಲು ಹಾಗೂ ರಿಟರ್ನ್ ಪಡೆಯಲು ಅನುಮತಿಸಬೇಕು ಎಂದೂ ಕೂಡ ಈ ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ.
2. PFRDA ಪ್ರಸ್ತಾವನೆ ಏನು? - ಈ ಕುರಿತು ಮಾತನಾಡಿರುವ ಪ್ರಾಧಿಕಾರದ ಅಧ್ಯಕ್ಷ ಸುಪ್ರತೀಮ್ ಬಂಡೋಪಾಧ್ಯಾಯ್, ಕಳೆದ 3.5 ವರ್ಷಗಳಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟ ಸುಮಾರು 15 ಸಾವಿರ ಜನರು NPS ನಲ್ಲಿ ಖಾತೆ ತೆರೆದಿದ್ದಾರೆ. ಇದನ್ನೇ ಗಮನದಲ್ಲಿಟ್ಟುಕೊಂಡು ಯೋಜನೆಗೆ ಸೇರಲು ಈ ಮೊದಲು ನಿಗದಿಪಡಿಸಿರುವ 60 ವರ್ಷ ಗರಿಷ್ಠ ವಯೋಮಿತಿಯನ್ನು 15 ವರ್ಷಗಳವರೆಗೆ ಹೆಚ್ಚಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದಿದ್ದಾರೆ.
3. NPSನಲ್ಲಿ ಪೆನ್ಷನ್ ಪಡೆಯಲು ವಯಸ್ಸು ಎಷ್ಟಿರಬೇಕು? - NPS ಯೋಜನೆಯಲ್ಲಿ 60 ವರ್ಷ ವಯಸ್ಸಿನವರೆಗೆ ಜಮೆಯಾಗಿರುವ ರಾಶಿಯ (Pension Fund) ಆಧಾರದ ಮೇಲೆ ಪೆನ್ಷನ್ ನಿಗದಿಪಡಿಸಲಾಗುತ್ತದೆ. ಇನ್ನೊಂದೆಡೆ APY ಯೋಜನೆಯಲ್ಲಿ ಪೆನ್ಷನ್ 1000 ರೂ.ಗಳಿಂದ 5000 ರೂಗಳಿಗೆ ನಿಗದಿಯಾಗುತ್ತದೆ. ಅಂದರೆ, ನೀವು ಪ್ರತಿ ತಿಂಗಳು ತುಂಬುವ ಹಣದ ಆಧಾರದ ಮೇಲೆ ನಿಮ್ಮ ಪೆನ್ಷನ್ ನಿಗದಿಯಾಗಲಿದೆ.