Share Market Update: ಮಾರುಕಟ್ಟೆಯಲ್ಲಿ ಕಾಣಿಸಿಕೊಂಡ ಹೊಸ ಹುಮ್ಮಸ್ಸು, 18300 ಗಡಿ ದಾಟಿದ ನಿಫ್ಟಿ

Wed, 10 May 2023-5:26 pm,

Stock Market Update: ಇತ್ತೀಚಿನ ದಿನಗಳಲ್ಲಿ ಷೇರು ಮಾರುಕಟ್ಟೆಯಲ್ಲಿ ಭಾರಿ ಹಲ್ಚಲ್ ಸೃಷ್ಟಿಯಾಗಿದೆ. ಕೆಲವೊಮ್ಮೆ ಮಾರುಕಟ್ಟೆ ಭಾರಿ ಕುಸಿತಕ್ಕೆ ಸಾಕ್ಷಿಯಾದರೆ, ಇನ್ನೊಂದೆಡೆ  ಮಾರುಕಟ್ಟೆ ದೊಡ್ಡ ಗೂಳಿ ಜಿಗಿತಕ್ಕೂ ಕೂಡ ಕಾರಣವಾಗುತ್ತಿದೆ. ಏತನ್ಮಧ್ಯೆ, ಬುಧವಾರ ಷೇರು ಮಾರುಕಟ್ಟೆಯಲ್ಲಿ ಭಾರಿ ಏರಿಳಿತ ಕಂಡುಬಂದಿದ್ದು, ಸೆನ್ಸೆಕ್ಸ್ ಮತ್ತು ನಿಫ್ಟಿ ಭಾರಿ ಅಬ್ಬರದ ವ್ಯಾಪಾರ ನಡೆಸುವ ಮೂಲಕ ತನ್ನ ವಹಿವಾಟನ್ನು ನಿಲ್ಲಿಸಿವೆ. ಇದೇ ವೇಳೆ, ಅನೇಕ ಷೇರುಗಳಲ್ಲಿ ಭಾರಿ ಬೂಮ್ ಕೂಡ ಕಂಡುಬಂದಿದೆ. ಇಂದು ಸೆನ್ಸೆಕ್ಸ್ 150ಕ್ಕೂ ಹೆಚ್ಚು ಅಂಕಗಳ ಏರಿಕೆ ಕಂಡು ತನ್ನ ವಹಿವಾಟನ್ನು ಮುಕ್ತಾಯಗೊಳಿಸಿದ್ದರೆ, ನಿಫ್ಟಿ ಕೂಡ 40ಕ್ಕೂ ಹೆಚ್ಚು ಅಂಕಗಳ ಜಿಗಿತ ಕಂಡು ತನ್ನ  ದಿನದ ವಹಿವಾಟನ್ನು ಅಂತ್ಯಗೊಳಿಸಿದೆ.   

ಸೆನ್ಸೆಕ್ಸ್ ಸಂವೇದಿ ಸೂಚ್ಯಂಕ ಕಳೆದ ದಿನದಾಂತ್ಯಕ್ಕೆ ಅಂದರೆ ಮಂಗಳವಾರ 61761 ಅಂಕಗಳಿಗೆ ತನ್ನ ವಹಿವಾಟನ್ನು ಅಂತ್ಯಗೊಳಿಸಿತ್ತು. ಇನ್ನೊಂದೆಡೆ ಇಂದು ಸೆನ್ಸೆಕ್ಸ್ ಸೂಚ್ಯಂಕದಲ್ಲಿ 178.87 ಅಂಕಗಳ (ಅಂದರೆ ಶೇ.0.29) ಏರಿಕೆಯನ್ನು ಗಮನಿಸಲಾಗಿದೆ. ಇದರಿಂದ ಸೆನ್ಸೆಕ್ಸ್  61940.20 ಮಟ್ಟದಲ್ಲಿ ತನ್ನ ದಿನದ ವಹಿವಾಟನ್ನು ಮುಗಿಸಿದೆ. ಇನ್ನೊಂದೆಡೆ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿಯಲ್ಲೂ ಕೂಡ ಜಿಗಿತ ಕಂಡು ಬಂದಿದೆ. ಮಂಗಳವಾರ ನಿಫ್ಟಿ 18265.95 ಅಂಕಗಳ ಮೇಲೆ ತನ್ನ ದಿನದ ವಹಿವಾಟನ್ನು ಕೊನೆಗೊಳಿಸಿತ್ತು.  ಇಂದು ನಿಫ್ಟಿಯಲ್ಲಿ 49.15 ಪಾಯಿಂಟ್‌ಗಳ (0.27%) ಏರಿಕೆ ಕಂಡುಬಂದಿದೆ, ಈ ಕಾರಣದಿಂದಾಗಿ ನಿಫ್ಟಿ ಸೂಚ್ಯಂಕ ಇಂದು 18315.10 ಅಂಕಗಳಿಗೆ ತಲುಪಿದೆ.   

ಇಂದು ಮಾರುಕಟ್ಟೆಯಲ್ಲಿ ಹಲವು ಕಂಪನಿಗಳ ಷೇರುಗಳಲ್ಲಿ ಭಾರಿ ಜಿಗಿತ ಕಂಡುಬಂದಿದೆ. ಇಂಡಸ್‌ಇಂಡ್ ಬ್ಯಾಂಕ್, ಎಚ್‌ಡಿಎಫ್‌ಸಿ ಲೈಫ್, ಪವರ್ ಗ್ರಿಡ್ ಕಾರ್ಪ್, ಬಿಪಿಸಿಎಲ್, ಡಿವಿಸ್ ಲ್ಯಾಬ್ಸ್ ಇಂದಿನ ಮಾರುಕಟ್ಟೆಯಲ್ಲಿ ನಿಫ್ಟಿ ಗೇನರ್‌ಗಳಲ್ಲಿ ಅಗ್ರಸ್ಥಾನದಲ್ಲಿದ್ದರೆ, ಯುಪಿಎಲ್, ಡಾ ರೆಡ್ಡೀಸ್ ಲ್ಯಾಬ್ಸ್, ಹಿಂಡಾಲ್ಕೊ, ಇನ್ಫೋಸಿಸ್ ಮತ್ತು ಲಾರ್ಸೆನ್ ಆಂಡ್ ಟರ್ಬೋ ಟಾಪ್ ಲೂಸರ್‌ಗಳಾಗಿವೆ.  

ಇದರಿಂದಾಗಿ ಬೆಂಚ್ಮಾರ್ಕ್ ದಿನವಿಡೀ ಗಮನಾರ್ಹ ಏರಿಳಿತಕ್ಕೆ ಸಾಕ್ಷಿಯಾಗಿದೆ. ದಿನದ ಆರಂಭಿಕ ವಹಿವಾಟಿನಲ್ಲಿ ಕುಸಿತ ಕಂಡ ಅದು ನಂತರದ ವಹಿವಾಟಿನಲ್ಲಿ ಭಾರಿ ಜಿಗಿತ ದಾಖಲಿಸಿದೆ. ದೈನಂದಿನ ಚಾರ್ಟ್‌ನಲ್ಲಿ, ನಿಫ್ಟಿ ಒಂದು ಬುಲಿಶ್ ಡ್ರಾಗನ್‌ಫ್ಲೈ ಡೋಜಿ ಪ್ಯಾಟರ್ನ್ ರೂಪಿಸಿದೆ.  ಇದು ಮಾರುಕಟ್ಟೆಯ ಬುಲ್‌ಗಳಿಂದ ಬಲವಾದ ಖರೀದಿ ಚಟುವಟಿಕೆಯನ್ನು ಸೂಚಿಸುತ್ತದೆ. ಇದೇ ವೇಳೆ, US ಮಾರುಕಟ್ಟೆಯ ಅನಿಶ್ಚಿತತೆಯಿಂದಾಗಿ ಹೂಡಿಕೆದಾರರು ಒಂದು ನಿಶ್ಚಿತ ದಿಕ್ಕನ್ನು ತೆಗೆದುಕೊಲ್ಲುವುದಕ್ಕೆ ಹಿಂದೇಟು ಹಾಕಿದ್ದಾರೆ. ಜಾಗತಿಕವಾಗಿ, ಹೂಡಿಕೆದಾರರು US ಹಣದುಬ್ಬರ ದತ್ತಾಂಶದ ನಿರೀಕ್ಷೆಯಲ್ಲಿ ಸಾಕಷ್ಟು ಜಾಗರೂಕತೆಯನ್ನು ವಹಿಸಿದ್ದರು.  

ಇನ್ನೊಂದೆಡೆ ತೈಲ ಬೆಳೆಯಲ್ಲಿಯೂ ಕೂಡ ಭಾರಿ ಕುಸಿತ ಕಂಡುಬಂದಿದೆ. ಏಕೆಂದರೆ, ತೈಲೋದ್ಯಮದ ಅಂಕಿಗಳತ್ತ ಗಮನಹರಿಸಿದರೆ,  ಅಮೆರಿಕಾದ ಕಚ್ಚಾ ತೈಲ ಸಂಗ್ರಹದಲ್ಲಿ ಆಶ್ಚರ್ಯಜನಕ ಜಿಗಿತ ಕಂಡುಬಂದಿದ್ದು ಸ್ಪಷ್ಟವಾಗುತ್ತದೆ. ಇದು ಬೇಡಿಕೆಯಲ್ಲಿನ ಸಂಭಾವ್ಯ ಕುಸಿತವನ್ನು ಸಂಕೇತಿಸುತ್ತದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link