Cows Luxury Life: ಹಸುಗಳಿಗೆ ಪ್ರತ್ಯೇಕ ಬೆಡ್ ರೂಂ, ಮಲಗಲು ಹಾಸಿಗೆ ವ್ಯವಸ್ಥೆ!
ಮನೆಯಲ್ಲಿ ಹಸುಗಳನ್ನು ಮಕ್ಕಳಂತೆ ಸಾಕಲಾಗಿದೆ: ಸಾಮಾನ್ಯವಾಗಿ ಹಳ್ಳಿಗಳಲ್ಲಿ ಹಸುಗಳನ್ನು ಸಾಕುತ್ತಾರೆ. ಹಸುಗಳಿಗಾಗಿಯೇ ಪ್ರತ್ಯೇಕ ಕೊಟ್ಟಿಗೆಯನ್ನೂ ನಿರ್ಮಿಸುತ್ತಾರೆ. ಗೋಮಾತೆ, ಕಾಮಧೇನು ಎಂದು ಪೂಜಿಸುವ ಹಸುವನ್ನು ಮನೆಯೊಳಗೆ ಕರೆತರುತ್ತೇವಾದರೂ ಬೆಡ್ ರೂಂಗಾಗಲಿ, ಹಾಸಿಗೆಯ ಮೇಲಾಗಲಿ ಹಸುವನ್ನು ಬಿಡುವುದಿಲ್ಲ. ಆದರೆ, ರಾಜಸ್ಥಾನದ ಜೋಧಪುರದ ಸುಭಾಷ್ ನಗರದ ಮಹಿಳೆಯೊಬ್ಬರು ತಮ್ಮ ಮನೆಯಲ್ಲಿ ಹಸು, ಕರುಗಳನ್ನು ಮಗುವಿನಂತೆ ಸಾಕುತ್ತಿದ್ದಾರೆ. ಅವರ ಮನೆ ಸಾಮಾಜಿಕ ಜಾಲತಾಣಗಳಲ್ಲಿ ‘ಕೌ ಹೌಸ್’ ಎಂದೇ ಫೇಮಸ್ ಆಗಿದೆ.
ಜೋಧಪುರದಲ್ಲಿ ಇಂತಹದೊಂದು ದೃಶ್ಯ ಕಂಡು ಬಂದಿದೆ: ಜೋಧಪುರದ ಈ ಮಹಿಳೆಯ ಹೆಸರು ಸಂಜು ಕನ್ವರ್.
ಮಕ್ಕಳಂತೆ ಹಸುಗಳನ್ನು ಸಾಕಿರುವ ಮಹಿಳೆ ಹಸುಗಳ ಬಗ್ಗೆ ಮಾತನಾಡುತ್ತಾ, ಹಸುಗಳು ಸಾಕುಪ್ರಾಣಿಗಳು ಮತ್ತು ಯಾರಿಗೂ ಹಾನಿ ಮಾಡುವುದಿಲ್ಲ ಎಂದು ಹೇಳಿದರು. ಮತ್ತೊಂದೆಡೆ, ಮನೆಯಲ್ಲಿ ಹಸುಗಳನ್ನು ಸಾಕಿದರೆ, ಹಸುಗಳಿಗೆ ಪ್ರೀತಿ, ಗೌರವವನ್ನು ನೀಡುವುದರಿಂದ ಯಾವುದೇ ಕಷ್ಟದ ಪರಿಸ್ಥಿತಿಯು ಮಂಜಿನಂತೆ ಕರಗುತ್ತದೆ ಎಂದವರು ಹೇಳಿದರು.
ಇಂದಿನ ಕಾಲದಲ್ಲಿ ಅನೇಕರು ತಮ್ಮ ಮನೆಯಲ್ಲಿ ಹಸುಗಳನ್ನು ಸಾಕುತ್ತಾರೆ. ಆದರೂ, ಅವುಗಳನ್ನು ಕೊಟ್ಟಿಗೆಗಳಲ್ಲಿ ಅಥವಾ ಲಾಯಗಳಲ್ಲಿ ಇರಿಸಲಾಗುತ್ತದೆ, ಆದರೆ ರಾಜಸ್ಥಾನದ ಈ ಮಹಿಳೆ ಹಸುಗಳು ಮತ್ತು ಕರುಗಳನ್ನು ಮಾನವ ಮಕ್ಕಳಂತೆ ಸಾಕುತ್ತಿದ್ದಾರೆ. ಇವುಗಳ ಮೋಜು-ಮಸ್ತಿ ಏನಿದ್ದರೂ ಅದು ಮಲಗುವ ಕೋಣೆಯಲ್ಲಿಯೇ ಹೊರತು ಕೊಟ್ಟಿಗೆಯಲ್ಲಿ ಅಲ್ಲ ಎಂಬುದೇ ವಿಶೇಷ.
ಈ ಮಹಿಳೆ ಕಳೆದ ಒಂದು ದಶಕದಿಂದ ಹಸುಗಳಿಗೆ ಈ ರೀತಿ ಆರೈಕೆ ಮಾಡುತ್ತಿದ್ದಾರೆ ಎನ್ನಲಾಗಿದೆ.