Bhoomi Shetty: ಟಾಲಿವುಡ್‌ ಚಿತ್ರರಂಗಕ್ಕೆ ಪಾದಾರ್ಮಣೆ ಮಾಡಿದ ಕನ್ನಡ ಕಿರುತೆರೆಯ ಕಿನ್ನರಿ!

Mon, 05 Feb 2024-12:56 pm,

ಕನ್ನಡ ಕಿರುತೆರೆಯ ನಟಿ  ಭೂಮಿ ಶೆಟ್ಟಿ 'ಕಿನ್ನರಿ' ಧಾರವಾಹಿಯ ಮೂಲಕ ನಾಯಕಿಯಾಗಿ ನಟಿಸಿ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದಾರೆ.  

ನಟಿ ಭೂಮಿ ಶೆಟ್ಟಿ ಕನ್ನಡದ ಜೊತೆಗೆ ಪರಭಾಷೆಯ ಕಿರುತೆರೆಯಲ್ಲಿ ಮೋಡಿ ಮಾಡಿರುವ ಭೂಮಿ ಶೆಟ್ಟಿ ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್‌ನಲ್ಲಿಯೂ ಬಹಳಷ್ಟು ಖ್ಯಾತಿಯನ್ನು ಗಳಿಸಿದರು.

ಕಿರುತೆರೆ ನಟಿ ಭೂಮಿ ಶೆಟ್ಟಿ ತಮಿಳು ಸಿನಿಮಾವೊಂದರಲ್ಲಿ ನಟಿಸುತ್ತಿದ್ದು, ಈಗಾಗಲೇ ಚಿತ್ರದ ಪೋಸ್ಟರ್ ಕೂಡಾ ಬಿಡುಗಡೆಯಾಗಿ, ಸಿನಿ ಪ್ರಿಯರು ಮೆಚ್ಚಿಕೊಂಡಿದ್ದಾರೆ. ಇದೀಗ ಈ ನಟಿ ತಮಿಳು ಸಿನಿಮಾದಲ್ಲಿ ನಟಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸುತ್ತಾರೆ.

ಕರಾವಳಿ ಸುಂದರಿ ಭೂಮಿ ಒಂದು ಭಾಷೆಯಲ್ಲಿ ನಮ್ಮನ್ನು ನಾವು ಕಲಾವಿದರಾಗಿ, ಒಳ್ಳೆಯ ನಟರಾಗಿ ಸಾಬೀತು ಮಾಡಿದಾಗಲೇ ಬೇರೆ ಭಾಷೆಯಲ್ಲಿ ಅವಕಾಶ ಸಿಗುವುದು ಎಂದು  ಅಭಿಪ್ರಾಯ ಪಟ್ಟಿದ್ದಾರೆ.

ಕುಂದಾಪುರ ಬೆಡಗಿ ಭೂಮಿ ಶೆಟ್ಟಿ ʻಭಾಷೆ ಯಾವುದೇ ಇರಲಿ, ಒಳ್ಳೆಯ ಪಾತ್ರಗಳು ಸಿಕ್ಕರೆ ನಾನು ನಟಿಸಲು ಸಿದ್ಧ.ಆದರೆ, ಆದಷ್ಟು ಬೇಗ ಭಾಷೆಯನ್ನು ಸುಲಲಿತವಾಗಿ ಕಲಿಯುತ್ತೇನೆ ʼ ಎಂಬ ಆತ್ಮವಿಶ್ವಾಸವನ್ನು ಆಕೆ ಬೆಳೆಸಿಕೊಂಡಿದ್ದಾರೆ.

ನಟಿ ಭೂಮಿ ಶೆಟ್ಟಿ ಕನ್ನಡದ ಕಿನ್ನರಿ ಧಾರವಾಹಿಯ ಬಳಿಕ, ತೆಲುಗಿನ 'ನಿನ್ನೆ ಪೆಳ್ಳಾಡಾತಾ' ಹಾಗೂ 'ಅಕ್ಕ ಚೆಲುಲು' ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದರು. 

ಭೂಮಿ ಶೆಟ್ಟಿ ಕೊರೊನಾ ಲಾಕ್ ಡೌನ್ ಸಮಯದಲ್ಲಿ ಬಿಡುಗಡೆಯಾದ 'ಇಕ್ಕಟ್' ಸಿನಿಮಾದಲ್ಲಿ ಈಕೆ ನಾಯಕಿಯಾಗಿ ನಟಿಸಿದ್ದು, ನಾಗಭೂಷಣ್‌ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.

ಕಿನ್ನರಿ ಭೂಮಿ ಶೆಟ್ಟಿ 'ವಾಸಂತಿ' ಎನ್ನುವ ಕಲಾತ್ಮಕ ಸಿನಿಮಾದಲ್ಲಿ ಭೂಮಿ ಬಣ್ಣ ಹಚ್ಚಿದ್ದು, ವೆಬ್ ಸಿರೀಸ್‌ನಲ್ಲಿಯೂ ಕಾಣಿಸಿಕೊಂಡಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link