Namratha Gowda: ಮದುವೆ ಪ್ಲ್ಯಾನಿಂಗ್‌ ಬಗ್ಗೆ ಮನಬಿಚ್ಚಿ ಮಾತನಾಡಿದ ನಾಗಿಣಿ ಬೆಡಗಿ!

Fri, 26 Jan 2024-12:25 pm,

ಕಿರುತೆರೆ ನಟಿ ನಮ್ರತಾ ಗೌಡ ಆಕಾಶದೀಪ, ಪುಟ್ಟಗೌರಿ ಮದುವೆ, ನಾಗಿಣಿ 2  ಸೀರಿಯಲ್‌ಗಳ ಮೂಲಕ ಮೋಡಿ ಮಾಡಿ ಕನ್ನಡಿಗರ ಮನಗೆದ್ದ ನಟಿ,  ಇದೀಗ ತಮ್ಮ ಮದುವೆ ಪ್ಲ್ಯಾನಿಂಗ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. 

ನಟಿ ನಮತ್ರಾ ಕಿರುತೆರೆಯಲ್ಲಿ ಮೋಡಿ ಮಾಡಿದ ಬಳಿಕ ಬಿಗ್ ಬಾಸ್‌ಗೆ ಎಂಟ್ರೀಯಾಗಿ ಇನ್ನೇನು ಫಿನಾಲೆಗೆ ಕಾಲಿಡಬೇಕು  ಎನ್ನುವರಷ್ಟರಲ್ಲಿ 15ನೇ ವಾರ ನಮ್ರತಾ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. 

ಕಿರುತೆರೆ ಚೆಲುವೆ ನಮತ್ರಾ ಬಿಗ್‌ ಬಾಸ್‌ ಮನೆಯಿಂದ ಹೊರ ಬಂದ ಮೇಲೆ, ಸದ್ಯ ಹಲವು ಸಂದರ್ಶನ ಕೊಡುವಲ್ಲಿ  ಬ್ಯುಸಿಯಾಗಿದ್ದಾರೆ. ಅದೇ ಸಂದರ್ಭದಲ್ಲಿ ಕನಸಿನ ಮನೆ ಮತ್ತು ಮದುವೆ ಕುರಿತು ಮಾತನಾಡಿದ್ದಾರೆ.

ನಮ್ರತಾ ಗೌಡ ಮದುವೆ ಬಗ್ಗೆ ಮೊದಲು ಸಿಕ್ಕಾಪಟ್ಟೆ ಆಸೆ ಇಟ್ಟುಕೊಂಡಿದ್ದೆ, ಆದರೆ ನಾನು ಈಗ  ಈ ವಿಚಾರದಲ್ಲಿ ಆಸಕ್ತಿ ಕಳೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ.  

 ನಟಿ ನಮತ್ರಾ ಇನ್ನೂ ಸಾಧನೆ ಮಾಡಬೇಕು, ದೇಶ ಸುತ್ತಬೇಕು, ಅಪ್ಪ-ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಮದುವೆ ಬಗ್ಗೆ ನಂಬಿಕೆ ತರಿಸುವವರು ಸಿಕ್ಕರೆ ಯೋಚನೆ ಮಾಡ್ತೀನಿ ಎಂದು  ತಿಳಿಸಿದ್ದಾರೆ.

ನಾಗಿಣಿ ಬೆಡಗಿ ನಮ್ರತಾ ಮನೆ ಗೃಹಪ್ರವೇಶ ಕುಟುಂಬಸ್ಥರು ಹಾಗೂ ಸಂಬಂಧಿಕರು, ಎಲ್ಲಿಂದ ಹಣ ಬರುತ್ತೆ ಅಂತ ಮಾತಾಡಿದ್ರು ಎಂದು ಹೇಳುತ್ತಾ ಬೇಸರ ಹೊರಹಾಕಿದ್ದಾರೆ.

ಸೀರಿಯಲ್‌ ನಟಿ ನಮ್ರತಾ "ನಾನು ಮನೆಗೆ ಬರದೆ ಶೂಟಿಂಗ್ ಸೆಟ್‌ನಲ್ಲಿಯೇ ಇದ್ದು, ಅಲ್ಲಿಯೇ ಸ್ನಾನ ಮಾಡಿಕೊಂಡು ಮತ್ತೆ ಶೂಟಿಂಗ್‌ನಲ್ಲಿ ಭಾಗವಹಿಸಿದ್ದೂ ಇದೆ. ನಾನು ಬಸ್‌ನಲ್ಲಿ ಓಡಾಡುತ್ತಿದ್ದೆ. ನನ್ನ ಕೆಲಸ ನನ್ನ ತಂದೆ-ತಾಯಿಗೆ ಮಾತ್ರ ಗೊತ್ತಿದೆ." ಎಂದು ಹೇಳಿದ್ದಾರೆ. 

ಸೀರಿಯಲ್‌ ನಟಿ ನಮ್ರತಾ "ನಾನು ಮನೆಗೆ ಬರದೆ ಶೂಟಿಂಗ್ ಸೆಟ್‌ನಲ್ಲಿಯೇ ಇದ್ದು, ಅಲ್ಲಿಯೇ ಸ್ನಾನ ಮಾಡಿಕೊಂಡು ಮತ್ತೆ ಶೂಟಿಂಗ್‌ನಲ್ಲಿ ಭಾಗವಹಿಸಿದ್ದೂ ಇದೆ. ನಾನು ಬಸ್‌ನಲ್ಲಿ ಓಡಾಡುತ್ತಿದ್ದೆ. ನನ್ನ ಕೆಲಸ ನನ್ನ ತಂದೆ-ತಾಯಿಗೆ ಮಾತ್ರ ಗೊತ್ತಿದೆ." ಎಂದು ಹೇಳಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link