Tanvi Rao: ಬಹುಮುಖ ಪ್ರತಿಭೆ ಕನ್ನಡ ಕಿರುತೆರೆ ನಟಿ ತನ್ವಿ ರಾವ್ ಮುಡಿಗೆ ಮತ್ತೊಂದು ಪ್ರಶಸ್ತಿ!
ಕಿರುತೆರೆ ನಟಿ ತನ್ವಿ ರಾವ್ ಅಲಾಯ್ಸಿಯನ್ ಅಲುಮಿನಿ ಅವಾರ್ಡ್ ಅನ್ನು ತನ್ವಿ ಅವರು ಪಡೆದುಕೊಂಡಿದ್ದಾರೆ. ಕಲಾ ಕ್ಷೇತ್ರದಲ್ಲಿನ ತನ್ವಿ ಅವರ ಸಾಧನೆಯನ್ನು ಕಂಡು ಸೇಂಟ್ ಅಲೋಯ್ಸಿಯನ್ ಇನ್ಸ್ ಟಿಟ್ಯೂಚನ್ ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ನಟಿ ತನ್ವಿ ರಾವ್ ಉದಯ ಟಿವಿಯಲ್ಲಿ ಆಕೃತಿ ಎಂಬ ಧಾರಾವಾಹಿಯ ಮೂಲಕ ಮೊದಲ ಬಾರಿಗೆ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದರು.
ತನ್ವಿ ಮೊದಲು ಕ್ಯಾಮರಾವನ್ನು ಎದುರಿಸಿದ್ದು, ಬಾಲಿವುಡ್ ಸಿನಿಮಾ ಮೂಲಕ. ಈ ನಟಿ ಬಾಲಿವುಡ್ ಸಿನಿಮಾದಲ್ಲಿ ಮಾಧುರಿ ದೀಕ್ಷಿತ್ ನಟನೆಯ ಗುಲಾಬ್ ಗ್ಯಾಂಗ್ ಚಿತ್ರದಲ್ಲಿ ನಟಿಸಿದ್ದರು.
ಕನ್ನಡದ ನಟಿ ತನ್ವಿ ಸ್ಯಾಂಡಲ್‌ವುಡ್ ಗೆ ಎಂಟ್ರಿಕೊಟ್ಟ ತನ್ವಿ ರಂಗ್ ಬಿ ರಂಗಿ ಚಿತ್ರಕ್ಕೆ ಬಣ್ಣ ಹಚ್ಚಿದರು. ಇನ್ನೂ ಕೆಲ ಸಿನಿಮಾಗಳು ಕೈಯಲ್ಲಿದ್ದು, ಅಧಿಕೃತವಾಗಿ ಘೋಷಣೆಯಾಗಬೇಕಿದೆ.
ತನ್ವಿ ರಾವ್ ಆಕೃತಿ ಧಾರಾವಾಹಿ ಬಳಿಕ ಸ್ಟಾರ್ ಸುವರ್ಣವಾಹಿನಿಯಲ್ಲಿ ಮೂಡಿ ಬಂದ ರಾಧೆ ಶ್ಯಾಮ ಧಾರಾವಾಹಿಯಲ್ಲಿ ನಟಿಸಿದರು.
ನಟಿ ತನ್ವಿ ತಮಿಳಿನ ಜಮೀಲ ಎಂಬ ಸೀರಿಯಲ್ ನಲ್ಲಿ ನಾಯಕಿ ಪಾತ್ರದಲ್ಲಿ ಬಣ್ಣಹಚ್ಚಿದ್ದು, ಇದರಲ್ಲಿ ಮುಸ್ಲಿಂ ಹುಡುಗಿ ಪಾತ್ರದಲ್ಲಿ ನಟಿಸಿದ್ದು, ಸಿಂಗರ್ ಆಗಿ ಕಾಣಿಸಿಕೊಂಡಿದ್ದಾರೆ.
ಭಾಗ್ಯಲಕ್ಷ್ಮೀ ಧಾರಾವಾಹಿಯ ಖ್ಯಾತಿಯ ನಟಿ ತನ್ವಿ ರಾವ್ ಭರತನಾಟ್ಯ ಕಲಾವಿದೆಯಾಗಿದ್ದು, ಅದಾಗಲೇ 6ಕ್ಕಿಂತ ಹೆಚ್ಚು ಅಂತರಾಷ್ಟೀಯ ಕಾರ್ಯಕ್ರಮಗಳಲ್ಲಿ ನೃತ್ಯ ಪ್ರದರ್ಶಿಸಿದ್ದಾರೆ. ಭರತನಾಟ್ಯ ಜೊತೆಗೆ ತನ್ವಿ ರಾವ್ ಅವರು ಕಥಕ್, ಒಡಿಸಾ ಹಾಗೂ ಸೆಮಿ ಕ್ಸಾಸಿಕಲ್ ನೃತ್ಯವನ್ನೂ ಅಭ್ಯಾಸ ಮಾಡಿದ್ದಾರೆ.
ವಿವಿಧ ನೃತ್ಯ ಕಲಾವಿದೆ ತನ್ವಿ ರಾವ್ ಇಷ್ಟೇ ಅಲ್ಲದೇ, ಹಿಂದಿಯ ಗುಲ್ಮೊಹರ್ ಸಿನಿಮಾದಲ್ಲೂ ದೀಪಿಕಾ ಎಂಬ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.