ಐದು ಲಕ್ಷಕ್ಕಿಂತ ಕಡಿಮೆ ಬೆಲೆಯ 7 ಸೀಟರ್ ಕಾರು.! CNGನಲ್ಲಿ ಕೂಡಾ ನೀಡುವುದು ಭರ್ಜರಿ ಮೈಲೇಜ್

Mon, 28 Nov 2022-4:17 pm,

ಮಾರುತಿ ಸುಜುಕಿ ಇತ್ತೀಚೆಗೆ Eecoವನ್ನು ಹೊಸ ರೂಪದಲ್ಲಿ ಬಿಡುಗಡೆ ಮಾಡಿದೆ.   ಈ ಕಾರಿನಲ್ಲಿ ಹೆಚ್ಚು ಶಕ್ತಿಶಾಲಿ ಎಂಜಿನ್, ಹೊಸ ಬಣ್ಣ ಮತ್ತು ಉತ್ತಮ ವೈಶಿಷ್ಟ್ಯಗಳನ್ನು ನೀಡಲಾಗಿದೆ. ಭಾರತದಲ್ಲಿ ಈ ವಾಹನದ ಬೆಲೆ .5.10 ಲಕ್ಷಗಳಿಂದ ಪ್ರಾರಂಭವಾಗಿ 6.44 ಲಕ್ಷಗಳವರೆಗೆ ಇರುತ್ತದೆ.   

ಮಾರುತಿ ಇಕೋ 5 ಸೀಟರ್ ಮತ್ತು 7 ಸೀಟರ್ ರೂಪಾಂತರಗಳಲ್ಲಿ ಬರುತ್ತದೆ. ಇದನ್ನು ನಾಲ್ಕು ರೂಪಾಂತರಗಳಲ್ಲಿ ಹೊರ ತರಲಾಗಿದೆ. ಇದರಲ್ಲಿ 5-ಸೀಟರ್ ಸ್ಟ್ಯಾಂಡರ್ಡ್ (O), 5-ಸೀಟರ್ AC (O), 5-ಸೀಟರ್ AC CNG (O) ಮತ್ತು 7-ಸೀಟರ್ ಸ್ಟ್ಯಾಂಡರ್ಡ್ (O).

ಹೊಸ ಮಾರುತಿ ಇಕೋ ಈಗ 1.2-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ. ಇದು 81PS ಪವರ್ ಮತ್ತು 104.4Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲ್ಪಟ್ಟಿದೆ. CNG ರೂಪಾಂತರದಲ್ಲಿ ಎಂಜಿನ್‌ನ ಔಟ್‌ಪುಟ್ 72PS ಮತ್ತು 95Nm ಗೆ ಇಳಿಯುತ್ತದೆ. CNG ರೂಪಾಂತರದ ಮೈಲೇಜ್ 27.05km/kg ವರೆಗೆ ಇರುತ್ತದೆ. 

ಮಾರುತಿ ಇಕೋದಲ್ಲಿ ಡಿಜಿಟಲ್ ಸ್ಪೀಡೋಮೀಟರ್, ರಿಕ್ಲೈನಿಂಗ್ ಫ್ರಂಟ್ ಸೀಟ್, ಮ್ಯಾನುವಲ್ ಎಸಿ ನೀಡಲಾಗಿದೆ. ಸುರಕ್ಷತೆಗಾಗಿ, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಇಬಿಡಿಯೊಂದಿಗೆ ಎಬಿಎಸ್, ಸೀಟ್‌ಬೆಲ್ಟ್ ರಿಮೈಂಡರ್, ಸ್ಪೀಡ್ ಅಲರ್ಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳು ಲಭ್ಯವಿದೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link