ಸೋಲುಗಳನ್ನು ಮೆಟ್ಟಿನಿಂತು ಸವಾಲುಗಳಿಗೆ ಸೆಡ್ಡು ಹೊಡೆದ ಈಕೆ ಯಾರು ಗೊತ್ತಾ..? ಇನ್ಸ್ಟಾಗ್ರಾಂನಲ್ಲಿ ಇವರದ್ದೇ ಫುಲ್‌ ಹವಾ..!

Wed, 07 Aug 2024-8:05 am,

 ಚಿನ್ನದ ಪದಕ ಗೆದ್ದವರನ್ನು ಕೊಂಡಾಡುವುದು ಸರ್ವೇ ಸಾಮಾನ್ಯ. ಆದರೆ ಒಲಿಂಪಿಕ್ಸ್‌ನಲ್ಲಿ ಚಿನ್ನ ಅಲ್ಲದೆ ಬೆಳ್ಳಿ ಪದಕ ಗೆದ್ದ ಈ ಹುಡುಗಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾಳೆ. ಅಷ್ಟಕ್ಕೂ ಈ ಹುಡುಗಿ ಈ ಮಟ್ಟಿಗೆ ಫೇಮಸ್‌ ಆಗಲು ಕಾರಣ ಏನು..?  ತಿಳಿಯಲು ಮುಂದೆ ಓದಿ...

ಇಪ್ಪತ್ನಾಲ್ಕು ವರ್ಷದ ಈ ಹುಡುಗಿ ಒಲಂಪಿಕ್ಸ್‌ನಲ್ಲಿ ನೂರು ಮೀಟರ್‌ ಓಟದಲ್ಲಿ ಭಾಗವಹಿಸಿದ್ದರು, ಸೇಂಟ್ ಲೂಸಿಯಾದ  ಜೂಲಿಯನ್ ಆಲ್ಫ್ರೆಡ್ ಚಿನ್ನದ ಪದಕ ಮುಡಿಗೇರಿಸಿಕೊಂಡರು. ಆದರೆ ಚಿನ್ನ ಗೆದ್ದ ಹುಡುಗಿ ಬದಿಗಿಟ್ಟು ಬೆಳ್ಳಿ ಪದಕ ಗೆದ್ದ ಹುಡುಗಿ ಶಾ ಕೆರ್ರಿ ರಿಚರ್ಡ್ ಸನ್ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದಾರೆ.  

ಒಲಂಪಿಕ್ಸ್‌ನಲ್ಲಿ ಭಾಗವಹಿಸುವವರಾರು ಸುಭವಾಗಿ ಆ ಸ್ಥಾನಕ್ಕೆ ಬಂದು ತಲುಪಲು ಸಾದ್ಯವಾಗುವಿದಿಲ್ಲ. ಅದರ ಹಿಂದೆ ಅವರ ಹಲವು ವರ್ಷಗಳ ತಪಸ್ಸು ಇರುತ್ತೆ, ಕೆಲವರಂತೂ ಒಲಂಪಿಕ್ಸ್‌ನಲ್ಲಿ ಒಂದು ಅವಕಾಶ ಪಡೆಯಲೆಂದು ತಮ್ಮ ಜೀವನವನ್ನು ಸವಿಸಿಬಿಟ್ಟಿರುತ್ತಾರೆ. ಅಷ್ಟಕ್ಕೂ ಈ ಬಗ್ಗೆ ಯಾಕೆ ಹೇಳುತ್ತಿದ್ದೀವಿ ಎಂದರೆ, ಕಾರಣ ಇದೆ. ರಿಚರ್ಡ್ ಸನ್ ಸದ್ದು ಮಾಡುತ್ತಿರುವುದಕ್ಕೆ ಕಾರಣವಿದೆ. ಬಾಲ್ಯದಿಂದಲೂ ರಿಚರ್ಡ್ ಸನ್ ಅಜ್ಜಿ ಚಿಕ್ಕಮ್ಮನ ಆಸರೆಯಲ್ಲಿ ಈ ಹುಡುಗಿ ಬೆಳೆದು ದೊಡ್ಡವಳಾಗುತ್ತಾಳೆ. ಹೈಸ್ಕೂಲ್‌ನಲ್ಲಿ ಅವಳ ತಾಯಿ ತೀರಿ ಹೋಗುತ್ತಾರೆ, ಈ ಅಘಾತ ತಾಲಲಾರದೆ ರಿಚರ್ಡ್ ಆತ್ಮಹತ್ಯೆಗೆ ಯತ್ನಿಸುತ್ತಾಳೆ. ಮೊಮ್ಮಗಳ ನೋವು ನೋಡಲಾರದೆ ಅಜ್ಜಿ ಅವಳನ್ನು ಹೇಗೋ ಉಳಿಸಿಕೊಂಡು ಬರುತ್ತಾರೆ, ಮನೋವೈದ್ಯರ ಬಳಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸುತ್ತಾರೆ.  

ನಂತರ ಹೇಗೋ ನಡೆದಿದ್ದನೆಲ್ಲಾ ಮರೆಯುತ್ತಾ ಮುನ್ನಡೆದ ರಿಚರ್ಡ್ 2021ರಲ್ಲಿ ಒಲಿಂಪಿಕ್ಸ್ ಅರ್ಹತಾ ಸುತ್ತು ಆಡಲು ತಯಾರಿ ನಡೆಸಿದ್ದ ಸಮಯವದು, ಅವರ ಬಳಿ ಪತ್ರಕರ್ತರೊಬ್ಬರು ಆಕೆಯ ತಾಯಿ ಸಾವಿನ ಕುರಿತು ಪ್ರಶ್ನೆ ಕೇಳುತ್ತಾರೆ. ಇದನ್ನು ಕೇಲುತ್ತಿದ್ದಂತೆಯೇ ಹಳೆಯದೆಲ್ಲ ನೆನಪಾಗಿ ಆಕೆ ಸಂಕಟತಾಲಲಾರದೆ ಗಾಂಜಾ ಸೇವಿಸುತ್ತಾಳೆ. ಒಲಂಪಿಕ್ಸ್‌ ಅರ್ಹತಾ ಪರೀಕ್ಷಯಲ್ಲಿ ಗಾಂಜಾ ಸೇವಿಸಿದ್ದು ಪತ್ತೆಯಾಗಿ ಒಲಿಂಪಿಕ್ಸ್ ಆಡುವ ಅರ್ಹತೆಯನ್ನೇ ಕಳೆದುಕೊಳ್ಳುತ್ತಾಳೆ.  

2021 ಒಲಂಪಿಕ್ಸ್‌ನ ವೇಳೆ ಎಲ್ಲರ ಕಣ್ಣು ರಿಚರ್ಡ್‌ನತ್ತ ನೆಟ್ಟಿತ್ತು. 2019ಲ್ಲಿ  ಕೇವಲ 10.75 ಸೆಕೆಂಡ್ ಗಳಲ್ಲಿ 100 ಮೀಟರ್ ಓಡಿ  ಈ ದಾಖಲೆ ಸೃಷ್ಟಿಸಿದ ಮೊದಲ ಮಹಿಳೆಯಾಗಿ ಇಡೀ ದೇಶದ ಮೆಚ್ಚುಗೆ ಪಡೆದರು, ಆಗಿನ ದಿನಗಳಲ್ಲಿ ಎಲ್ಲೆಲ್ಲಿಯೂ ಈಕೆಯಾದ್ದೆ ಹೆಸರು ಕೇಲಿ ಬಂದಿತ್ತು. ಇನ್ನೂ ಈಕೆ ಈ ಭಾರಿ ಒಲಂಪಿಕ್ಸ್‌ನಲ್ಲಿ ಓಡಿದರೆ ಖಂಡಿತಾ ಈಕೆ ಚಿನ್ನದ ಪದಕ ಗೆಲ್ಲುತ್ತಾಳೆ ಎನ್ನುವ ವಿಶ್ವಸದಿಂದ ಇಡೀ ದೇಶವೇ ಅವಳ ಓಟ ನೋಡಲು ಎದುರು ನೋಡುತ್ತಿತ್ತು. ಈಗಿರುವಾಗಲೇ ಗಾಂಜಾ ಸೇವಿಸಿ ಈಕೆ 2021ರ ಒಲಂಪಿಕ್ಸ್‌ನಲ್ಲಿ ಅರ್ಹತೆ ಪಡೆಯದೆ ಹೊರಗುಳಿದಿದ್ದರು. ಆದರೆ ರಿಚರ್ಡ್ಗೆ ಜನರು ಸಪೋರ್ಟ್‌ ಮಾಡಿದ್ರು,  ಗಾಂಜಾವನ್ನು ಮಾದಕವಸ್ತುಗಳ ಪಟ್ಟಿಯಲ್ಲಿ ಸೇರಿಸಿರೋದೇ ತಪ್ಪು ಎಂದು ಹಲವರು ವಾದಿಸಿದರು. ರಿಚರ್ಡ್ ಸನ್ ಗೆ ಆಗಿದ್ದು ಅನ್ಯಾಯ ಎಂದು ಪ್ರತಿಭಟನೆಗಳನ್ನು ನಡೆಸಲಾಯಿತು, ಸಾಮಾನ್ಯ ಜನರಷ್ಟೆ ಅಲ್ಲ ಅಮೆರಿಕ ಅಧ್ಯಕ್ಷ ಜೋ ಬೈಡನ್ ಕೂಡ ಈಕೆಯ ಪರವಾಗಿ ಮಾತನಾಡಿದರು.  

ಒಂದು ತಿಂಗಳ ಬ್ಯಾನ್‌ನ ನಂತರ ರಿಚರ್ಡ್ ಸನ್ ಈ ಕಹಿ ಘಟನೆಯಿಂದ ಚೇತರಿಸಿಕೊಂಡು ಮತ್ತೆ ಒಲಂಪಿಕ್ಸ್‌ಗೆ ರೀ ಎಂಟ್ರಿ ಕೊಟ್ಟಿದ್ದರು. 2023ರ  ಅಥ್ಲೆಟಿಕ್ ವರ್ಲ್ಡ್ ಚಾಂಪಿಯನ್ ಶಿಪ್‌ನಲ್ಲಿ ನೂರು ಮೀಟರ್ ಓಟ ಹಾಗೂ ರಿಲೇ ಎರಡರಲ್ಲೂ ಚಿನ್ನ ಗೆದ್ದು, 200 ಮೀಟರ್‌ ಓಟದಲ್ಲಿ ಕಂಚು ಪದಕ ಮುಡಿಗೇರಿಕೊಂಡಳು.ಜೀವನದಲ್ಲಿ ಸಾಕಷ್ಟು ನೋವುಗಳನ್ನು ಅನುಭವಿಸಿದ್ದ ರಿಚರ್ಡ್ಸ್‌ ಬಹಳ ಬೋಲ್ಡ್‌ ಹುಡುಗಿ, ಇದ್ದದನ್ನು ಇದ್ದ ಹಾಗೆ ನೇರವಾಗಿ ಹೇಳುವ ಹುಡುಗಿ. ಹೀಗೆ ಒಂದು ದಿನ ಆಕೆ ನನಗೆ ಗರ್ಲ್‌ಫ್ರೆಂಡ್‌ ಇದ್ದಾಳೆ ಎಂದು ಹೇಳಿದ್ದಳು, ತಾನು ಬೈಸೆಕ್ಷುಯಲ್ ಎಂಬ ವಿಷಯವನ್ನು ಮುಚ್ಚು ಮರೆಯಿಲ್ಲದೆ ಜನರ ಮುಂದೆ ಹೇಳಿದ್ದಳು.   

ರಿಚರ್ಡ್ ಸನ್‌ಗೆ ಸಿಂಗಾರ ಮಾಡಿಕೊಳ್ಳುವುದು ಎಂದರೆ ತುಂಬಾ ಇಷ್ಟ. ಉದ್ದ ಉಗುರುಗಳನ್ನು ಬೆಳೆಸಿ, ಅದಕ್ಕೆ ಬಣ್ಣ ಬಣ್ಣದ ನೈಲ್‌ ಪಾಲಿಷ್‌ ಹಚ್ಚಿ ಸಿಂಗರಿಸುವುದು ಎಂದರೆ ಎನೋ ಆನಂದ, ಉದ್ದನೆಯ ಕೂದಲು ಬೆಳೆಸಿ ಕೂದಲಿನ ಮೇಲೆ ದಿನಕ್ಕೊಂದು ಹೇರ್‌ಸ್ಟೈಲ್‌ ಮಾಡುವ ಮೂಲಕ ಪ್ರಯೋಗಗಳನ್ನು ಮಾಡುವುದೆಂದರೆ ಆಕೆಗೆ ಎಲ್ಲಿಲ್ಲದ ಸಂತೋಷ. ಈಕೆ ಕೇವಲ ಒಲಂಪಿಕ್ಸ್‌ ಪದಕ ಗೆಲ್ಲುವ ಮೂಲಕ ಅಷ್ಟೆ ಅಲ್ಲ LGBTQ ಸಮುದಾಯದ ಹಕ್ಕುಗಳ ಕುರಿತು ಆಕೆ ಧ್ವನಿ ಎತ್ತುತ್ತಾ, Black Lives Matter ಆಂದೋಲನ ಶುರುವಾದಾಗ ರಿಚರ್ಡ್ ಸನ್ ಅದರಲ್ಲಿ ಭಾಗಿಯಾಗುತ್ತಾ ಎಲ್ಲರ ಮನ ಗೆದ್ದಿದ್ದಾಳೆ.   

ರಿಚರ್ಡ್ ಸನ್ ಓಡುವುದನ್ನು ನೀವಿನ್ನೂ ನೋಡಿಲ್ಲವಾದರೆ ಖಂಡಿತ ನೋಡಿ. ಆಕೆ ಕಣ್ಣಿಗೆ ಹಬ್ಬ. ಅವಳ ಕಾನ್ಫಿಡೆನ್ಸ್... ಗೆದ್ದ ಮೇಲೆ ಅವಳು ತೋರುವ ವಿಜಯದ ಎಕ್ಸ್ ಪ್ರೆಷನ್‌ಗಳಂತೂ ಅಬ್ಬಾ ಅನ್ನಿಸುತ್ತದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link