Shadow Planet Ketu Transit 2022: ಇದೇ ತಿಂಗಳು ಸಂಭವಿಸಲಿದೆ ಛಾಯಾಗ್ರಹ ಕೇತು ಗೋಚರ, ಈ 3 ರಾಶಿಯ ಜನರಿಗೆ ನೌಕರಿಯಲ್ಲಿ ಪ್ರಮೋಶನ್ ಯೋಗ
ಜ್ಯೋತಿಷ್ಯ ಶಾಸ್ತ್ರದ(Astrology) ಪ್ರಕಾರ ಯಾವುದೇ ಒಂದು ಗ್ರಹ ಗೋಚರಿಸಿದರೆ (Planatary Transit) ಅಥವಾ ಉದಯವಾದರೆ ಅಥವಾ ಅಸ್ತಮಿಸಿದರೆ, ಜನರ ಜೀವನದ ಮೇಲೆ ಆಧಾರ ನೇರ ಪ್ರಭಾವ ಉಂಟಾಗುತ್ತದೆ. ಏಪ್ರಿಲ್ 12, 2022 ರಂದು ಬೆಳಗ್ಗೆ 11.18ಕ್ಕೆ ಛಾಯಾಗ್ರಹ ಕೇತು (Ketu Rashi Parivartan 2022) ಮಂಗಳನ ಅಧಿಪತ್ಯವಿರುವ ವೃಶ್ಚಿಕ ರಾಶಿಯಿಂದ ಶುಕ್ರನ ಅಧಿಪತ್ಯವಿರುವ ತುಲಾ ರಾಶಿಯಲ್ಲಿ ಗೋಚರಿಸಲಿದೆ. ಕೇತುವಿನ ಈ ರಾಶಿ ಪರಿವರ್ತನೆ ಎಲ್ಲಾ 12 ರಾಶಿಗಳ ಜನರ ಜೀವನದ ಮೇಲೆ ಉಂಟಾಗಲಿದೆ. ಇದರಿಂದ ಯಾವ ರಾಶಿಯ ಜನರಿಗೆ ಜಬರ್ದಸ್ತ್ ಲಾಭ ಉಂಟಾಗಲಿದೆ ತಿಳಿದುಕೊಳ್ಳೋಣ ಬನ್ನಿ.
ಮಕರ ರಾಶಿ- ಕೇತುವಿನ ಈ ಗೋಚರದಿಂದ ಮಕರ ರಾಶಿಗಳ ಜನರ 'ಅಚ್ಚೆ ದೀನ್' (ಒಳ್ಳೆಯ ದಿನಗಳು) ಆರಂಭವಾಗಲಿವೆ . ಮಕರ ರಾಶಿಯ 11ನೇ ಭಾವದಲ್ಲಿ ಕೇತುವಿನ ಈ ಗೋಚರ ಸಂಭವಿಸಲಿದೆ. ಸಾಮಾನ್ಯವಾಗಿ ಇದನ್ನು ಆದಾಯ ಮತ್ತು ಲಾಭದ ಸ್ಥಾನ ಎಂದೇ ಪರಿಗಣಿಸಲಾಗುತ್ತದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಹಲವು ಮೂಲಗಳಿಂದ ಆದಾಯ ಅಥವಾ ಲಾಭ ಹರಿದು ಬರಲಿದೆ. ಅಂದರೆ, ನಿಮ್ಮ ಜೀವನದಲ್ಲಿ ಆಕಸ್ಮಿಕ ಧನಲಾಭದ ಸಂಕೇತಗಳು ಗೋಚರಿಸುತ್ತಿವೆ. ವ್ಯಾಪಾರಿಗಳಿಗೆ ಈ ಕೇತು ಗೋಚರ ಲಾಭಕಾರಿ ಸಾಬೀತಾಗಲಿದೆ.
ಕರ್ಕ ರಾಶಿ - ಕೇತುವಿನ ಈ ಸ್ಥಾನಪಲ್ಲಟ ಕರ್ಕ ರಾಶಿಯ ಜನರ ಪಾಲಿಗೂ ಕೂಡ ಲಾಭಕಾರಿ ಸಾಬೀತಾಗಲಿದೆ. ಕೇತುವಿನ ಈ ಗೋಚರ ಕರ್ಕ ರಾಶಿಯ ಚತುರ್ಥ ಅಂದರೆ 4ನೇ ಭಾವದಲ್ಲಿ ಸಂಭವಿಸುತ್ತಿದೆ. ಈ ಸ್ಥಾನವನ್ನು ಸುಖ ಹಾಗೂ ತಾಯಿಯ ಸ್ಥಾನ ಎಂದೇ ಪರಿಗಣಿಸಲಾಗುತ್ತದೆ. ಹಲವು ಭಾಷೆಗಳನ್ನು ಕಲಿಯುವ ಹವ್ಯಾಸಿಗಳಿಗೆ ಇದರಿಂದ ವಿಶೇಷ ಲಾಭ ಪ್ರಾಪ್ತಿಯಾಗಲಿದೆ. ನೌಕರಿಯಲ್ಲಿ ತೊಡಗಿದವರಿಗೆ ಹೊಸ ಪ್ರಸ್ತಾವನೆಗಳು ಸಿಗಲಿವೆ. ಅದರಲ್ಲೂ ವಿಶೇಷವಾಗಿ ಸಿಂಗಲ್ ಆಗಿ ಇರುವವರ ಜೀವನದಲ್ಲಿ ವಿಶೇಷ ವ್ಯಕ್ತಿಯ ಎಂಟ್ರಿ ಆಗಲಿದೆ.
ಕುಂಭ ರಾಶಿ - ಕುಂಭ ರಾಶಿಯ ನವಮ ಅಂದರೆ ಒಂಭತ್ತನೇ ಭಾವದಲ್ಲಿ ಕೇತುಗೋಚರ ನೆರವೇರಲಿದೆ. ಸಾಮಾನ್ಯವಾಗಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಂಭತ್ತನೇ ಭಾವವನ್ನು ಭಾಗ್ಯದ ಭಾವ ಎಂದೇ ಪರಿಗಣಿಸಲಾಗುತ್ತದೆ. ಈ ಅವಧಿಯಲ್ಲಿ ಕುಂಭರಾಶಿಯ ಜಾತಕದ ಜನರಿಗೆ ಭಾಗ್ಯದ ಸಕತ್ ಸಾಥ್ ಸಿಗಲಿದೆ. ಅಂದರೆ, ನೀವು ಕೈಗೊಂಡ ಕೆಲಸದಲ್ಲಿ ನಿಮಗೆ ಕಾರ್ಯಸಿದ್ಧಿ ಪ್ರಾಪ್ತಿಯಾಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಾಗಿ ಸಿದ್ಧತೆಯಲ್ಲಿ ತೊಡಗಿದವರಿಗೆ ಈ ಸಮಯ ತುಂಬಾ ಶುಭವಾಗಿದೆ. ಈ ಅವಧಿಯಲ್ಲಿ ನಿಮಗೆ ನೌಕರಿಯಲ್ಲಿ ಬಡ್ತಿ ಪ್ರಾಪ್ತಿಯಾಗುವ ಸಂಕೇತಗಳು ಗೋಚರಿಸುತ್ತಿವೆ.