ʼಈʼ ಖ್ಯಾತ ನಟಿಯಿಂದ ಶಾರುಖ್-ಗೌರಿ ಫಸ್ಟ್ ನೈಟ್ ಹಾಳಾಗಿತ್ತಂತೆ!! ಬೇಸರಗೊಂಡ ಕಿಂಗ್ ಖಾನ್ ಪತ್ನಿ ಮಾಡಿದ್ದೇನು ಗೊತ್ತಾ?
ಶಾರುಖ್ ಖಾನ್ ಮತ್ತು ಅವರ ಪತ್ನಿ ಗೌರಿ ಲವ್ ಸ್ಟೋರಿ ಎಲ್ಲರಿಗೂ ಗೊತ್ತು.. ಇವರನ್ನು ಮದುವೆಯಾಗಲು ಶಾರುಖ್ ಖಾನ್ ಎಷ್ಟು ಸಾಹಸಗಳನ್ನು ಮಾಡಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತು..
ಏಕೆಂದರೆ ಆ ಸಮಯದಲ್ಲಿ ಶಾರುಖ್ ದೊಡ್ಡ ಸ್ಟಾರ್ ಆಗಿರಲಿಲ್ಲ ಅಥವಾ ಯಾವುದೇ ವಿಶೇಷ ಕೆಲಸಗಳನ್ನು ಹೊಂದಿರಲಿಲ್ಲ ಅಲ್ಲದೇ ಅವರ ಧರ್ಮವೂ ವಿಭಿನ್ನವಾಗಿತ್ತು, ಆದರೂ ಕಿಂಗ್ ಖಾನ್ ಗೌರಿಯ ಕುಟುಂಬವನ್ನು ಒಪ್ಪಿಸಿ ಮದುವೆಯಾದರು.. ಆದರೆ ಇವರಿಬ್ಬರ ಮೊದಲ ರಾತ್ರಿ ಬಲು ಇಂಟ್ರೆಸ್ಟಿಂಗ್ ಆಗಿದೆ.
ಶಾರುಖ್-ಗೌರಿ ಮದುವೆಯ ದಿನ ಹೇಮಾ ಮಾಲಿನಿ ಅವರಿಗೆ ಫೋನ್ ಮಾಡಿ ಒಟ್ಟಿಗೆ ನಟಿಸುತ್ತಿರುವ 'ದಿಲ್ ಆಶ್ನಾ ಹೈ' ಸಿನಿಮಾದ ಶೂಟಿಂಗ್ ಗೆ ಬರಬೇಕು ಎಂದಿದ್ದರು. ಆಗ ಶಾರುಖ್ ಪತ್ನಿಯೊಂದಿಗೆ ಸ್ಟುಡಿಯೋಗೆ ಹೋಗುತ್ತಾರೆ.. ಆದರೆ ಅಲ್ಲಿ ಹೇಮಾ ಮಾಲಿನಿ ಕಾಣಿಸಲಿಲ್ಲ...
ಆಗ ಶಾರುಖ್ ಗೌರಿ ಜೊತೆಗೆ ಸ್ಟುಡಿಯೋದ ಕೊಠಡಿಯಲ್ಲಿ ಕುಳಿತು ಹೇಮಾ ಮಾಲಿನಿಗಾಗಿ ಕಾಯುತ್ತಿದ್ದರು. ಹೀಗಿರುವಾಗ 11 ಗಂಟೆ ಸುಮಾರಿಗೆ ಶಾರುಖ್ ಖಾನ್ ಗೌರಿಯನ್ನು ಮೇಕಪ್ ರೂಮಿನಲ್ಲಿ ಬಿಟ್ಟು ಶೂಟಿಂಗ್ ಗೆ ಹೋಗಿ 2 ಗಂಟೆ ಸುಮಾರಿಗೆ ಕೆಲಸ ಮುಂದುವರೆಸಿದರಂತೆ..
ಹೀಗಿರುವಾಗ ಒಂದೆಡೆ ಕಿಂಗ್ ಖಾನ್ ತಮ್ಮ ಕೆಲಸದಲ್ಲಿ ನಿರತರಾಗಿದ್ದರೆ, ಗೌರಿ ಮೇಕಪ್ ರೂಮಿನಲ್ಲಿ ಮೌನವಾಗಿ ಕುಳಿತಿದ್ದರು. ಬಳಿಕ ಶಾರುಖ್ ಖಾನ್ ತಡರಾತ್ರಿ ಸುಸ್ತಾಗಿ ಮೇಕಪ್ ರೂಮಿಗೆ ಮರಳಿದಾಗ ಪತ್ನಿ ಗೌರಿ ಸ್ಥಿತಿ ನೋಡಿ ಶಾರುಖ್ ತುಂಬಾ ಬೇಸರಗೊಂಡಿದ್ದರಂತೆ.. ಇದಾದ ನಂತರ ಗೌರಿಯನ್ನು ಎತ್ತಿಕೊಂಡು ಇಬ್ಬರೂ ಒಬ್ಬರಿಗೊಬ್ಬರು ಏನೂ ಹೇಳದೆ ಅವರವರ ಹೋಟೆಲ್‌ಗೆ ಹೋದರಂತೆ..
ಸ್ವತಃ ಶಾರುಖ್ ಖಾನ್ ಅವರ ಮದುವೆಯ ರಾತ್ರಿಯ ಕಥೆಯನ್ನು ಹೇಳಿಕೊಂಡಿದ್ದು, 'ಆ ದಿನ ನಾನು ನನ್ನ ನಿರ್ಧಾರಕ್ಕೆ ವಿಷಾದಿಸಿದೆ ಮತ್ತು ಅಳುತ್ತಿದ್ದೆ. ಅದು ನಮ್ಮ ಮೊದಲ ರಾತ್ರಿ ಅವಳು ಸೊಳ್ಳೆಗಳಿಂದ ತುಂಬಿದ ಕೋಣೆಯಲ್ಲಿ ಒಂಟಿಯಾಗಿ ಕಳೆದಳು. ನಾನು ಗೌರಿಯನ್ನು ಎತ್ತಿಕೊಂಡು ಅವಳಿಗೆ ಏನೂ ಹೇಳಲಿಲ್ಲ. ಅವಳೂ ಏನನ್ನೂ ಹೇಳಲಿಲ್ಲ. ಇದಾದ ನಂತರ ಒಬ್ಬರಿಗೊಬ್ಬರು ಏನನ್ನೂ ಹೇಳದೆ ಮೌನವಾಗಿ ಟ್ಯಾಕ್ಸಿ ಹಿಡಿದು ಹೋಟೆಲ್‌ಗೆ ಹೊರಟೆವು. ಆ ರಾತ್ರಿ ನನ್ನ ಜೀವನದಲ್ಲಿ ಕರಾಳ ರಾತ್ರಿಯಂತೆ ಭಾಸವಾಗಿತ್ತು ಎಂದಿದ್ದರು..