ಸ್ವರ್ಗವೇ ಧರೆಗಿಳಿದಂತಿದೆ ಶಾರುಖ್ ಖಾನ್ ಬಂಗಲೆ... 200 ಕೋಟಿ ಮೌಲ್ಯದ ʻಮನ್ನತ್ʼ ಇನ್‌ಸೈಡ್ ಫೋಟೋಗಳು ಇಲ್ಲಿವೆ ನೋಡಿ
Mannat inside photos: ಶಾರುಖ್ ಖಾನ್ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ತಮ್ಮ ನಟನೆಯ ಮೂಲಕ ಜನರ ಮನಗೆದ್ದವರು.
ಬಾಲಿವುಡ್ ಕಿಂಗ್ ಶಾರುಖ್ ಖಾನ್ ಮುಂಬೈನಲ್ಲಿ ಐಷಾರಾಮಿ ಬಂಗಲೆಯನ್ನು ಹೊಂದಿದ್ದಾರೆ. ಮುಂಬೈನಲ್ಲಿ 200 ಕೋಟಿ ಮೌಲ್ಯದ ಮನ್ನತ್ ನಲ್ಲಿ ಶಾರುಖ್ ವಾಸವಾಗಿದ್ದಾರೆ.
2001ರಲ್ಲಿ ಶಾರುಖ್ ಖಾನ್ ಈ ಬಂಗಲೆಯನ್ನು 13 ಕೋಟಿಗೂ ಅಧಿಕ ಮೊತ್ತ ನೀಡಿ ಖರೀದಿಸಿದ್ದರು.
ಶಾರುಖ್ ಖಾನ್ ಗಿಂತ ಮೊದಲು ಮನ್ನತ್ ಮಾಲೀಕ ಕಿಕು ಗಾಂಧಿ ಆಗಿದ್ದರು ಎಂದು ಕೆಲವೇ ಜನರಿಗೆ ತಿಳಿದಿದೆ. ಆದರೆ ನಂತರ ಅದನ್ನು 'ಮನ್ನತ್' ಎಂದು ಬದಲಾಯಿಸಿದರು.
ತಲೆಮಾರುಗಳ ಕಾಲ ಬಾಳಿದ ಈ ಬಂಗಲೆ ಕೊನೆಗೂ ನಾರಿಮನ್ ದುಬಾಷ್ ಅವರ ಪಾಲಾಯಿತು. ಬಳಿಕ ಶಾರುಖ್ ಖಾನ್ ಅದನ್ನು ಖರೀದಿಸಿದ್ದರು. ಇದನ್ನು ಸಮುದ್ರ ತೀರದಲ್ಲಿ ನಿರ್ಮಿಸಲಾಗಿದೆ.
ಆಧುನಿಕ ವಾಸ್ತುಶಿಲ್ಪ ಮತ್ತು ಸುಂದರವಾದ ಕೆತ್ತನೆಗಳನ್ನು ಹೊಂದಿರುವ 'ಮನ್ನತ್' 1920 ರ ಗ್ರೇಡ್ III ಹೆರಿಟೇಜ್ ವಿಲ್ಲಾ.
ಶಾರುಖ್ ಖಾನ್ ಅವರ ಈ ಮನೆಯಲ್ಲಿ ವಿಂಟೇಜ್, ಆಧುನಿಕ ಮತ್ತು ಸೊಗಸಾದ ಒಳಾಂಗಣಗಳ ಮಿಶ್ರಣವನ್ನು ನೋಡುತ್ತೀರಿ.
ಈ ಬಂಗಲೆಯು ಐಷಾರಾಮಿ ಮಲಗುವ ಕೋಣೆಗಳನ್ನು ಮಾತ್ರವಲ್ಲ, ಬಾಕ್ಸಿಂಗ್ ರಿಂಗ್, ಟೆನ್ನಿಸ್ ಕೋರ್ಟ್ ಮತ್ತು ದೊಡ್ಡ ಪೂಲ್ ಅನ್ನು ಸಹ ಹೊಂದಿದೆ.
ಶಾರುಖ್ ಅವರ ಮನೆಯಲ್ಲಿ ದೊಡ್ಡ ಅಧ್ಯಯನ ಕೊಠಡಿಯ ಒಂದಿದೆ. ಪುಸ್ತಕಗಳ ಹೊರತಾಗಿ, ಶಾರುಖ್ ಎಲ್ಲಾ ಪ್ರಶಸ್ತಿಗಳನ್ನು ಇಲ್ಲಿ ಇಟ್ಟಿದ್ದಾರೆ.
ಶಾರುಖ್ ಖಾನ್ ಅವರ ಬಂಗಲೆಯಲ್ಲಿ ಸ್ನಾನಗೃಹವನ್ನು ಕಪ್ಪು ಮತ್ತು ಬಿಳಿ ಅಮೃತಶಿಲೆಯಿಂದ ಸುಂದರವಾಗಿ ವಿನ್ಯಾಸಗೊಳಿಸಲಾಗಿದೆ.
ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಬಂಗಲೆಯನ್ನು ಅಲಂಕರಿಸಿದ್ದಾರೆ. ಗೌರಿ ಖಾನ್ ನಾಲ್ಕು ವರ್ಷಗಳ ಪರಿಶ್ರಮದ ನಂತರ ಸುಂದರಗೊಳಿಸಿದ್ದಾರೆ.
ಈಗ ಈ ಬಂಗಲೆಯ ಬೆಲೆ ಸುಮಾರು 200 ಕೋಟಿ ರೂಪಾಯಿ ಆಗಿದೆ.