Mannat Inside Photos: ಶಾರುಖ್ ಖಾನ್ ವಾಸಿಸುವ 200 ಕೋಟಿಯ ʻಮನ್ನತ್‌ʼ... ಸ್ವರ್ಗವೇ ಧರೆಗಿಳಿದಂತಿದೆ ಒಳಾಂಗಣ ನೋಟ, ಇಲ್ಲಿವೆ ಫೋಟೋಸ್

Sun, 30 Jun 2024-12:17 pm,

ನಟ ಶಾರುಖ್ ಖಾನ್ ತಮ್ಮ ಪತ್ನಿ ಗೌರಿ ಖಾನ್, ಪುತ್ರರಾದ ಆರ್ಯನ್ ಖಾನ್, ಅಬ್ರಾಮ್ ಖಾನ್ ಮತ್ತು ಮಗಳು ಸುಹಾನಾ ಖಾನ್ ಅವರೊಂದಿಗೆ ಈ ಮನೆಯಲ್ಲಿ ವಾಸಿಸುತ್ತಿದ್ದಾರೆ. ಮನ್ನತ್‌ ಒಳಾಂಗಣ ಒಂದು ಮನಿ ಸ್ವರ್ಗದಂತಿದೆ.

ಇದು ಮನ್ನತ್‌ನ ಒಂದು ಭಾಗ ಮಾತ್ರ. ಗೋಡೆಯ ಮೇಲೆ ಐಷಾರಾಮಿ ಪೇಂಟಿಂಗ್‌ಗಳು ಮತ್ತು ಬೆಲೆ ಬಾಳುವ ಸೋಫಾ ಹೀಗೆ ಕೋಣೆ ಸೊಗಸಾದ ನೋಟವನ್ನು ನೀಡುತ್ತವೆ. 

ಗೌರಿ ಖಾನ್ ಅಚ್ಚುಕಟ್ಟಾಗಿ ತಮ್ಮ ಮನ್ನತ್‌ನ್ನು ಅಲಂಕರಿಸಿದ್ದಾರೆ. ಸಭಾಂಗಣದಲ್ಲಿ ಕಾಣುವ ಕೆತ್ತನೆಗಳು ಎಲ್ಲರ ಗಮನ ಸೆಳೆಯುತ್ತವೆ. 

ಶಾರುಖ್‌ ಖಾನ್‌ ಪತ್ನಿ ಗೌರಿ ಒಬ್ಬ ಪ್ರಸಿದ್ಧ ಇಂಟೀರಿಯರ್ ಡಿಸೈನರ್. ಇದಕ್ಕೆ ಅವರ ಮನೆಯೇ ಸಾಕ್ಷಿ.  

ಮನ್ನತ್‌ನ ಪ್ರತಿ ಕೋಣೆ ಕೂಡ ಸಾಕಷ್ಟು ಐಷಾರಾಮಿಯಾಗಿದೆ. ಕ್ಲಾಸಿಕ್ ವಿಷಯಗಳನ್ನು ಇಲ್ಲಿ ಕಾಣಬಹುದು. 

ಕೋಣೆಯಲ್ಲಿನ ಪೇಂಟಿಂಗ್‌ಗಳಿಂದ ಹಿಡಿದು ಕಿಟಕಿಯ ಪರದೆಗಳವರೆಗೆ ಎಲ್ಲವೂ ರಾಯಲ್‌ ಆಗಿವೆ. ಪ್ತಿಯೊಂದು ಲಕ್ಷಾಂತರ ರೂಪಾಯಿ ಬೆಲೆ ಬಾಳುವ ವಸ್ತುಗಳಿವೆ. 

ಐಷಾರಾಮಿ ಡೈನಿಂಗ್‌ ಏರಿಯಾ, ಭವ್ಯವಾದ ಬಂಗಲೆಗೆ ಮೆರಗು ನೀಡುತ್ತದೆ. ಡೈನಿಂಗ್‌ ಏರಿಯಾ ಸಾಕಷ್ಟು ಅದ್ದೂರಿ ಮತ್ತು ದೊಡ್ಡದಾಗಿದೆ. ಇಲ್ಲಿ 12 ರಿಂದ 15 ಜನರು ಒಟ್ಟಿಗೆ ಊಟವನ್ನು ಆನಂದಿಸಬಹುದು.

ಬಂಗಲೆಯ ಹಿಂಭಾಗದಲ್ಲಿರುವ ಮನ್ನತ್‌ನ ಕೊಳದ ಪ್ರದೇಶವಂತೂ ಕಣ್ಣಿಗೆ ತಂಪು ನೀಡುತ್ತದೆ. 

ಪೂಲ್ ಪ್ರದೇಶದ ಸುತ್ತಲೂ ಮರಗಳು ಮತ್ತು ಸಸ್ಯಗಳನ್ನು ಬೆಳೆಸಿದ್ದಾರೆ. ಇದು ಈ ಪ್ರದೇಶಕ್ಕೆ ನೈಸರ್ಗಿಕ ಸೌಂದರ್ಯವನ್ನು ನೀಡುತ್ತದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link