Shah Rukh Khan: ಒಂದಲ್ಲ ಮೂರು ಬಾರಿ ಮದುವೆಯಾದ ಶಾರುಖ್ ಖಾನ್
ಶಾರುಖ್ ಖಾನ್ ಮತ್ತು ಗೌರಿ ಕೂಡ ಕೆಲವು ಸಮಯ ಡೇಟಿಂಗ್ ಮಾಡುತ್ತಿದ್ದರು. ಆದರೆ ಅವರಿಬ್ಬರಿಗೂ ಮದುವೆಯ ಹಾದಿ ಅಷ್ಟು ಸುಲಭವಾಗಿರಲಿಲ್ಲ. ಗೌರಿ ಮನೆಯವರ ಮನವೊಲಿಸಲು ಶಾರುಖ್ ಖಾನ್ ಸಾಕಷ್ಟು ಕಷ್ಟ ಪಡಬೇಕಿತ್ತು. ಏಕೆಂದರೆ ಶಾರುಖ್ ಮುಸ್ಲಿಂ ಕುಟುಂಬದಿಂದ ಬಂದವರು ಮತ್ತು ಗೌರಿ ಹಿಂದೂ ಕುಟುಂಬದಿಂದ ಬಂದವರು.
ವರದಿಗಳ ಪ್ರಕಾರ, ಶಾರುಖ್ ಖಾನ್ ಗೌರಿ ಕುಟುಂಬವನ್ನು ಮದುವೆಗೆ ಒಪ್ಪಿಸಲು ಪ್ರಯತ್ನಿಸುತ್ತಿದ್ದಾಗ ಕೋಪಗೊಂಡ ಗೌರಿ ಸಹೋದರ ಶಾರುಖ್ ಖಾನ್ ಕಡೆಗೆ ಗನ್ ತೋರಿಸಿದ್ದರು.
ಶಾರುಖ್ ಖಾನ್ ನಟನಾಗುವುದು ಗೌರಿ ಕುಟುಂಬಕ್ಕೆ ಇಷ್ಟವಿರಲಿಲ್ಲ ಎನ್ನಲಾಗಿದೆ. ಇದೇ ಕಾರಣಕ್ಕೆ ಶಾರುಖ್ ಮತ್ತು ಗೌರಿ ಮದುವೆಗೆ ಜನರು ವಿರೋಧ ವ್ಯಕ್ತಪಡಿಸಿದ್ದರು.
ಶಾರುಖ್ ಖಾನ್ ಮತ್ತು ಗೌರಿ ತಮ್ಮ ಸಂಬಂಧವನ್ನು ಎಂದಿಗೂ ಬಿಡಲಿಲ್ಲ. ನಂತರ ಅಂತಿಮವಾಗಿ ಗೌರಿ ಕುಟುಂಬ ಶಾರುಖ್ ಖಾನ್ ಅವರನ್ನು ಅಳಿಯ ಎಂದು ಒಪ್ಪಿಕೊಂಡಿತು. ಇಂದು ಶಾರುಖ್ ಖಾನ್ ಮತ್ತು ಗೌರಿಗೆ ಮೂವರು ಮಕ್ಕಳಿದ್ದಾರೆ. ಆರ್ಯನ್, ಸುಹಾನಾ ಮತ್ತು ಅಬ್ರಾಮ್.
ವರದಿಗಳ ಪ್ರಕಾರ, ಗೌರಿಯವರ ಮನೆಯವರು ಒಪ್ಪಿದ ನಂತರ ಶಾರುಖ್ ಮೂರು ಬಾರಿ ವಿವಾಹವಾದರು. ಹೌದು... ಮೊದಲು ಕೋರ್ಟ್ ಮದುವೆ, ನಂತರ ಮುಸ್ಲಿಂ ಸಂಪ್ರದಾಯಗಳೊಂದಿಗೆ ನಿಕಾಹ್ ನಂತರ ಹಿಂದೂ ಸಂಪ್ರದಾಯಗಳೊಂದಿಗೆ ಸಪ್ತಪದಿ ತುಳಿದರು.