ಶಾರುಖ್ ಖಾನ್ ಮೂವರು ಮಕ್ಕಳಲ್ಲಿ ಯಾರಿಗೆ ಎಷ್ಟು ಆಸ್ತಿ ಹಂಚಿಕೆ ಮಾಡಿದ್ದಾರೆ? ಮಗಳಿಗೆ ಬಹುಪಾಲು.. ಎಷ್ಟು ಕೋಟಿ ಗೊತ್ತೇ!
)
ಬಾಲಿವುಡ್ ನ ಕಿಂಗ್ ಖಾನ್ ಶಾರುಖ್ ತಮ್ಮ ಹುಟ್ಟು ಹಬ್ಬದ ಸಮಯದಲ್ಲಿ ಮುಂಬೈನಲ್ಲಿ ನಡೆದ ವಿಶೇಷ ಕಾರ್ಯಕ್ರಮವೊಂದರಲ್ಲಿ ಅಭಿಮಾನಿಗಳೊಂದಿಗೆ ಬರ್ತ್ ಡೇ ಆಚರಿಸಿಕೊಂಡರು. ಶಾರುಖ್ ಅಭಿಮಾನಿಗಳೊಂದಿಗೆ ಸಂವಾದ ನಡೆಸಿದರು.
)
ಅಭಿಮಾನಿಗಳು ಕೇಳಿದ ಕೆಲವು ಪ್ರಶ್ನೆಗಳಿಗೆ ಶಾರುಖ್ ಖಾನ್ ಉತ್ತರಿಸಿದರು. ತನ್ನ ಮೂವರು ಮಕ್ಕಳಾದ ಸುಹಾನಾ, ಆರ್ಯನ್ ಮತ್ತು ಅಬ್ರಾಮ್ ನಡುವೆ ಜಗಳವಾದಾಗ ಯಾರ ಪರವಾಗಿ ನಿಲ್ಲುತ್ತಾರೆ ಎಂದು ಅಭಿಮಾನಿಯೊಬ್ಬರು ಕಿಂಗ್ ಖಾನ್ ಗೆ ಕೇಳಿದರು.
)
ಶಾರುಖ್ ಖಾನ್ ಫ್ಯಾನ್ಸ್ ಕ್ಲಬ್ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದೆ. ಇದಕ್ಕೆ ಉತ್ತರಿಸಿದ ಶಾರುಖ್ ಖಾನ್, ತಮ್ಮ ಮೂವರು ಮಕ್ಕಳೂ ಜಗಳ ಮಾಡಿಕೊಳ್ಳುವುದಿಲ್ಲ. ನನಗೆ ತಿಳಿದಂತೆ ಇಲ್ಲಿಯವರೆಗೆ ಅವರು ಒಮ್ಮೆಯೂ ದೊಡ್ಡಮಟ್ಟದಲ್ಲಿ ಜಗಳವಾಡಿಲ್ಲ ಎಂದರು.
ಇದ ವೇಳೆ ಶಾರುಖ್, ಮೂವರು ಮಕ್ಕಳು ಒಂದು ವೇಳೆ ಜೋರಾಗಿ ಜಗವಾಡಿದರೆ ನನಗೆ ಆಸ್ತಿ ಹಂಚಲು ತುಂಬಾ ಕಷ್ಟವಾಗುತ್ತದೆ. ಇದೇ ಕಾರಣಕ್ಕೆ ಮೂವರೂ ಜಗಳವಾಡುವುದು ನನಗೆ ಇಷ್ಟವಿಲ್ಲ ಎಂದು ತಮಾಷೆಯಾಗಿ ಹೇಳಿದರು.
ಶಾರುಖ್ ಇದನ್ನು ಹೇಳಿದ ತಕ್ಷಣ ಅಲ್ಲಿದ್ದ ಅವರ ಅಭಿಮಾನಿಗಳಿಗೆ ನಗು ತಡೆಯಲಾಗಲಿಲ್ಲ. ಇದಲ್ಲದೇ ಜಗಳವಾದರೆ ಮಗಳ ಪರ ನಿಲ್ಲುವುದಾಗಿಯೂ ಹೇಳಿದ್ದಾರೆ. ನಾನು ಸುಹಾನಾ ಪರವಾಗಿ ನಿಲ್ಲುತ್ತೇನೆ ಎಂದು ಕಿಂಗ್ ಖಾನ್ ಹೇಳಿದ್ದಾರೆ.
ಸುಜೋಯ್ ಘೋಷ್ ಅವರ ಕಿಂಗ್ ಚಿತ್ರದಲ್ಲಿ ಶಾರುಖ್ ಖಾನ್ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಮೂಲಕ ಅವರ ಮಗಳು ಸುಹಾನಾ ಖಾನ್ ಕೂಡ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಶಾರುಖ್ ಖಾನ್ ದೇಶದ ಶ್ರೀಮಂತ ನಟ. ವಿಶ್ವ ಮಟ್ಟದಲ್ಲಿ ಮೂರನೇ ಶ್ರೀಮಂತ ನಟ ಸ್ಥಾನದಲ್ಲಿ ಇದ್ದಾರೆ. ಪ್ರತಿ ಸಿನಿಮಾಗೆ 150 ರಿಂದ 250 ಕೋಟಿ ರೂಪಾಯಿ ಶಾರುಖ್ ಖಾನ್ ಸಂಭಾವನೆ ಪಡೆಯುತ್ತಾರೆ.
ಶಾರುಖ್ ಖಾನ್ ಸುಮಾರು 7,300 ಕೋಟಿ ರೂಪಾಯಿ ಆಸ್ತಿಯನ್ನು ಹೊಂದಿದ್ದಾರೆ. ಶಾರುಖ್ ಖಾನ್ ಬಳಿಕ ಬಾಲಿವುಡ್ ನಟಿ ಜೂಹಿ ಚಾವ್ಲಾ ಭಾರತದ ಶ್ರೀಮಂತ ಕಲಾವಿದರ ಪಟ್ಟಿಯಲ್ಲಿ ಇದ್ದಾರೆ. ಅವರ ಆಸ್ತಿ 4,600 ಕೋಟಿ ರೂಪಾಯಿ.