ಆ ಇಬ್ಬರು ಹುಡುಗಿಯರು ನನಗೆ ಮೋಸ ಮಾಡಿ ಹೋದರು.. ಶಾಹಿದ್ ಕಪೂರ್ ಹೀಗೆ ಹೇಳಿದ್ದು ಈ ನಟಿಯರ ಬಗ್ಗೆನೇ!?
)
ಶಾಹಿದ್ ಕಪೂರ್ ಬಾಲಿವುಡ್ ಇಂಡಸ್ಟ್ರಿಯ ಸ್ಟಾರ್ ಹೀರೋಗಳಲ್ಲಿ ಒಬ್ಬರು. ವಿಭಿನ್ನ ಸಿನಿಮಾಗಳನ್ನು ಆಯ್ದುಕೊಂಡು ತಮ್ಮದೇ ಆದ ಅಭಿನಯದಿಂದ ಪ್ರೇಕ್ಷಕರಿಗೆ ಹತ್ತಿರವಾದರು.
)
ಕಬೀರ್ ಸಿಂಗ್ ಮತ್ತು ಜೆರ್ಸಿ ಮೂಲಕ ಬ್ಲಾಕ್ಬಸ್ಟರ್ ಹಿಟ್ ಪಡೆದರು. ವೃತ್ತಿಜೀವನದಲ್ಲಿ ಯಶಸ್ವಿ ನಾಯಕನಾಗಿ ಸ್ಟಾರ್‌ಡಮ್ ಪಡೆದ ಶಾಹಿದ್ ನಿಜ ಜೀವನದಲ್ಲಿ ಪ್ರೀತಿಯಲ್ಲಿ ಸೋತವರು.
)
ಲವ್ ಮತ್ತು ಬ್ರೇಕಪ್ ಇದೀಗ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ನೇಹಾ ಧೂಪಿಯಾ ಅವರೊಂದಿಗಿನ ಸಂದರ್ಶನದಲ್ಲಿ ನಟ ಶಾಹಿದ್ ಹೇಳಿದ ಮಾತುಗಳಿಗೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ.
ಪ್ರೀತಿಸಿ ಮೋಸ ಹೋಗಿದ್ದೀರಾ ಎಂದು ನೇಹಾ ಕೇಳಿದಾಗ... ಶಾಹಿದ್ ಥಟ್ಟನೆ ನಕ್ಕರು. "ನಾಣು ಮೋಸ ಹೋಗಿದ್ದು ನನಗೆ ತಿಳಿದಿದೆ. ನನಗೆ ಒಬ್ಬರ ಬಗ್ಗೆ ಖಾತ್ರಿ ಇದೆ. ಮತ್ತೊಬ್ಬರ ಬಗ್ಗೆ ಇನ್ನೂ ಅನುಮಾನ ಇದೆ. ಒಂದಿಬ್ಬರು ನನಗೆ ಮೋಸ ಮಾಡಿದ್ದಾರೆ" ಎಂದು ಶಾಹಿದ್ ಹೇಳಿದ್ದಾರೆ.
ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಶಾಹಿದ್ ಕಪೂರ್ ಈ ಮೊದಲು ಕರೀನಾ ಕಪೂರ್, ಪ್ರಿಯಾಂಕಾ ಚೋಪ್ರಾ ಜೊತೆ ಡೇಟಿಂಗ್ ಮಾಡಿದ್ದರೆಂಬ ವದಂತಿ ಹರಡಿತ್ತು. ಆದರೆ ಈ ವಿಚಾರವನ್ನು ಅವರು ಅಲ್ಲಗಳೆಯುತ್ತಲೇ ಬಂದಿದ್ದಾರೆ.
ಶಾಹಿದ್ ಈ ಹೇಳಿಕೆ ಬಳಿಕ ಇವರಲ್ಲಿ ಯಾರಾದರೂ ಮೋಸ ಮಾಡಿದರೇ ಎನ್ನುವ ಅನುಮಾನ ಜನರಲ್ಲಿ ಮೂಡಿದೆ. ಶಾಹಿದ್ ಹೇಳಿದ್ದು, ಕರೀನಾ ಕಪೂರ್ ಮತ್ತು ಪ್ರಿಯಾಂಕಾ ಚೋಪ್ರಾ ಬಗ್ಗೆನಾ ಎಂದು ನೆಟ್ಟಿಜನ್ ತಲೆಕೆಡಿಸಿಕೊಂಡಿದ್ದಾರೆ.