ನೈಟ್​ ಕ್ಲಬ್​ನಲ್ಲಿ ಅಮಿತಾಬ್ ಬಚ್ಚನ್ ಮೊಮ್ಮಗನ ಜೊತೆ ಶಾರುಖ್ ಮಗಳು, ಮದುವೆಯಾಗ್ತಾರಾ ಈ ಜೋಡಿ!!

Fri, 28 Jun 2024-9:09 pm,

ಲಂಡನ್ ನೈಟ್ ಕ್ಲಬ್ ನಲ್ಲಿ ಶಾರುಖ್ ಖಾನ್ ಮಗಳು ಸುಹಾನಾ ಖಾನ್ ಮತ್ತು ಅಮಿತಾಬ್ ಬಚ್ಚನ್ ಮೊಮ್ಮಗ ಅಗಸ್ತ್ಯ ನಂದಾ ಒಟ್ಟಿಗೆ ಕಾಣಿಸಿಕೊಂಡಿದ್ದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದೆ. 

ಶಾರುಖ್ ಖಾನ್ ಮಗಳು ಸುಹಾನಾ ಖಾನ್ ಮತ್ತು ಅಮಿತಾಬ್ ಬಚ್ಚನ್ ಮೊಮ್ಮಗ ಅಗಸ್ತ್ಯ ನಂದಾ ಒಟ್ಟಿಗೆ ಲಂಡನ್ ನೈಟ್ ಕ್ಲಬ್ ನಲ್ಲಿ ಕಾಣಿಸಿಕೊಂಡಿದ್ದು, ಇವರು ಡೇಟಿಂಗ್ ನಲ್ಲಿದ್ದಾರೆ ಎಂದು ಅಭಿಮಾನಿಗಳಿಂದ ಪ್ರಶ್ನೆಗಳ ಸುರಿಮಳೆಯೇ ಕೇಳಿಬರುತ್ತಿದೆ ಮತ್ತು ಇವರಿಬ್ಬರ ಪ್ರೀತಿಗೆ ಅವರ ಕುಟುಂಬದಲ್ಲಿ ಒಪ್ಪಿಗೆ ನೀಡಿದ್ದಾರಾ ಎನ್ನುವುದು ಸದ್ಯದ ಪ್ರಶ್ನೆಯಾಗಿದೆ.

ಇವರಿಬ್ಬರ ವಿಡಿಯೋ ಒಂದು ವೈರಲ್ ಆಗಿದ್ದು, ನೆಟ್ಟಿಜನ್ಸ್ ಪ್ರಕಾರ ಇವರಿಬ್ಬರು ರಿಲೇಷನ್ ಶಿಪ್ ನಲ್ಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ವಿಡಿಯೋದಲ್ಲಿ ಸುಹಾನಾ ಮತ್ತು ಅಗಸ್ತ್ಯ ಲಂಡನ್ ನ ನೈಟ್ ಕ್ಲಬ್ ನಲ್ಲಿ ಮಾತನಾಡುತ್ತಿದ್ದು,  ಡೇಟಿಂಗ್ ರೂಮರ್ಸ್ ಎಂದು ಹೇಳಲಾಗುತ್ತಿದೆ. 

ಸುಜೋಯ್ ಘೋಷ್ ನಿರ್ದೇಶನದ, ಶಾರುಖ್ ಖಾನ್ ಅವರ ರೆಡ್ ಚಿಲ್ಲೀಸ್ ಎಂಟರ್ ಟೈನ್ ಮೆಂಟ್ ಮತ್ತು ಸಿದ್ಧಾರ್ಥ್ ಆನಂದ್ ಅವರ ಮಾರ್ಫ್ಲಿಕ್ಸ್ ಎಂಟರ್ ಟೈನ್ ಮೆಂಟ್  ನಿರ್ಮಾಣದ ಸಿನಿಮಾ ಇದಾಗಿದ್ದು, ಸುಹಾನಾ ಖಾನ್ ತನ್ನ ಮೊದಲ ಸಿನಿಮಾ ಶೂಟಿಂಗ್ ಗಾಗಿ ಲಂಡನ್ ನಲ್ಲಿದ್ದಾರೆ ಎನ್ನಲಾಗುತ್ತಿದ್ದು, ಈ ಸಮಯದಲ್ಲಿ  ವೇದಾಂತ್ ಮಹಾಜನ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಸುಹಾನಾ ಭಾಗವಹಿಸಿದ್ದರು ಎಂದು ತಿಳಿದುಬಂದಿದೆ. 

ಆದರೆ ಇವರಿಬ್ಬರು ಹಲವು ವರ್ಷಗಳಿಂದ ಡೇಟಿಂಗ್ ನಲ್ಲಿದ್ದಾರೆ ಎಂದು ಊಹಾಪೋಹಗಳು ಕೇಳಿ ಬರುತ್ತಲೇ ಇವೆ ಮತ್ತು ಈ ಕುರಿತಂತೆ ಇಬ್ಬರು ಯಾವುದೇ ರೀತಿಯ ಪ್ರಿತಿಕ್ರಿಯೆ ನೀಡಿಲ್ಲ. ಬಚ್ಚನ್ ಕುಟುಂಬದ 2ನೇ ತಲೆಮಾರಿನ ನಂತರ ಇದೀಗ 3ನೇ ತಲೆಮಾರಿನವರೂ ಸಹ ಚಿತ್ರರಂಗ ಪ್ರವೇಶಿಸಿದ್ದಾರೆ ಮತ್ತು ಇಬ್ಬರು ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುತ್ತಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link