Shakun Shastra: ಕಾಗೆಗಳ ಬಗ್ಗೆ ಶಕುನ ಶಾಸ್ತ್ರದಲ್ಲಿ ಏನು ಹೇಳಿದೆ ಗೊತ್ತಾ..?

Fri, 12 Apr 2024-5:32 pm,

ಶಕುನ ಶಾಸ್ತ್ರದ ಪ್ರಕಾರ ಕಾಗೆಗಳು ನೀಡುವ ಶುಭ ಮತ್ತು ಅಶುಭ ಮುನ್ಸೂಚನೆಗಳ ಬಗ್ಗೆ ತಿಳಿಯಬಹುದು. ಶಕುನಶಾಸ್ತ್ರದ ಪ್ರಕಾರ ಮಧ್ಯಾಹ್ನ ಕಾಗೆಯ ಧ್ವನಿ ಉತ್ತರ ಅಥವಾ ಪೂರ್ವ ದಿಕ್ಕಿನಿಂದ ಕೇಳಿದರೆ, ಅದನ್ನು ಶುಭ ಶಕುನವೆಂದು ಪರಿಗಣಿಸಲಾಗುತ್ತದೆ.

ಕಾಗೆಯು ನಿಮ್ಮ ಮನೆಯ ಮೇಲ್ಛಾವಣಿಯ ಮೇಲೆ ಬಂದು ದಕ್ಷಿಣಾಭಿಮುಖವಾಗಿ ಕೂಗುತ್ತಿದ್ದರೆ ಅದನ್ನು ಅಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ.

ಕಾಗೆ ಬಂದು ಮುಟ್ಟಿ ಹೋದರೆ ಮನೆಯಲ್ಲಿ ಒಂದು ಸಾವು ಸಂಭವಿಸುತ್ತದೆ ಎಂಬುದನ್ನು ಸೂಚಿಸುತ್ತದೆ.

ಕಾಗೆಗಗಳು ಯಾವಾಗಲೂ ಬಂದು ನಿಮ್ಮ ಮನೆಯ ಮೇಲೆ ಕುಳಿತುಕೊಳ್ಳುತ್ತಿದ್ದರೆ ಪಿತೃದೋಷವಿದೆ ಎಂದರ್ಥ ಮತ್ತು ಕಾಗೆಗಳು ನಿಮ್ಮ ಎದುರೇ ಸತ್ತರೆ ಪಿತೃ ದೋಷವಿದೆ ಎಂದರ್ಥ...

ಕಾಗೆಗಳು ನಿಮ್ಮ ಮನೆಯ ಮೇಲೆ ಜಗಳವಾಡುತ್ತಿದ್ದರೆ ನೀವು ಮಾಡಿರುವ ಪಿತೃ ಕಾರ್ಯ ಸರಿಯಾಗಿಲ್ಲವೆಂದು ಅರ್ಥ. ಹೀಗಾಗಿ ನೀವು ಸರಿಯಾಗಿ ಪಿತೃ ಕಾರ್ಯವನ್ನು ಮಾಡಿ ಈ ದೋಷದಿಂದ ಮುಕ್ತಿ ಹೊಂದಬಹುದು.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link