ಹುಡುಗರ ಜೊತೆ ರೂಮ್‌ನಲ್ಲಿದ್ದ ಸ್ಟಾರ್ ನಟಿಗೆ, ಮ್ಯಾನೇಜರ್‌ನಿಂದ ಮೋಸ..! ಅದು ಚನ್ನಾಗಿಲ್ಲ ಅಂತ ಹಾಸ್ಯ
ಚಿತ್ರರಂಗದಲ್ಲಿ ನಟಿಯರು ಸಾಕಷ್ಟು ಕಷ್ಟ, ಸವಾಲುಗಳನ್ನು ಎದುರಿಸಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಯಶಸ್ವಿ ನಟಿಯಾಗಬೇಕು ಅಂದರೆ ಹೋರಾಟವನ್ನೇ ಮಾಡ್ಬೇಕಾಗುತ್ತದೆ.. ಅದರಂತೆ ಈ ನಟಿಯೂ ಸಹ ಸಾಲು ಸಾಲು ಸವಾಲುಗಳನ್ನು ಎದರಿಸಿದ್ದಾರೆ...
ಅರ್ಜುನ್ ರೆಡ್ಡಿ ಚಿತ್ರದ ಮೂಲಕ ಸ್ಟಾರ್ ಹೀರೋಯಿನ್ ಅಗಿ ಹೊರ ಹೊಮ್ಮಿದ ಶಾಲಿನಿ ಪಾಂಡೆ ಕುರಿತು ಹೆಚ್ಚಿನ ಪರಿಚಯವೇ ಬೇಕಿಲ್ಲ. ಅರ್ಜುನ್ ರೆಡ್ಡಿ ಸಿನಿಮಾದಲ್ಲಿ ಆಕೆಯ ಬೋಲ್ಡ್ ನೆಸ್ ನಟನೆ ನೋಡಿ ಎಲ್ಲರೂ ಹಾಡಿ ಹೊಗಳಿದರು. ಆದರೆ ಈ ಸಿನಿಮಾದ ನಂತರ ಈ ಸುಂದರಿಗೆ ಅಷ್ಟಾಗಿ ಆಫರ್‌ಗಳು ಬರಲಿಲ್ಲ ಎನ್ನುವುದೇ ವಿಪರ್ಯಾಸ.
ಸದ್ಯ ಶಾಲಿನಿ ಪಾಂಡೆ ಬಾಲಿವುಡ್‌ನಲ್ಲಿ ಕೆಲವು ಆಫರ್‌ಗಳನ್ನು ಪಡೆದು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇತ್ತೀಚೆಗೆ ಮಹಾರಾಜ್ ಚಿತ್ರದಲ್ಲಿ ನಟಿಸಿದ್ದರು. ಜೈದೀಪ್ ಅಹ್ಲಾವತ್ ಜೊತೆ ಬೋಲ್ಡ್ ರೋಮ್ಯಾನ್ಸ್ ದೃಶ್ಯಗಳಲ್ಲಿ ಕಾಣಿಸಿಕೊಂಡು ಸಂಚಲನ ಮೂಡಿಸಿದ್ದರು.
ಶಾಲಿನಿ ಪಾಂಡೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ವೃತ್ತಿಜೀವನದ ಬಗ್ಗೆ ಶಾಕಿಂಗ್ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಮಹಾರಾಜ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿರುವ ಕಾರಣ ಶಾಲಿನಿ ಪ್ರಮೋಷನ್ ಮಾಡುತ್ತಿದ್ದಾರೆ. ವೃತ್ತಿಬದುಕಿನ ಆರಂಭದಲ್ಲಿ ಬಾಡಿ ಶೇಮಿಂಗ್‌ಗೆ ಒಳಗಾಗಿದ್ದೆ ನಟಿ ಹೇಳಿದ್ದಾರೆ.. ಅಲ್ಲದೆ ಅನೇಕ ಜನರು ತಮ್ಮ ದೇಹ ಮತ್ತು ಬಣ್ಣದ ಬಗ್ಗೆ ಮಾತನಾಡಿದ್ದರು ಅಂತ ತಿಳಿಸಿದ್ದಾರೆ..
ಅಲ್ಲದೆ, ನನ್ನ ಮುಗ್ಧತೆಯನ್ನು ಬಳಸಿಕೊಂಡರು ನನ್ನ ಮಾಜಿ ಮ್ಯಾನೇಜರ್ ನನಗೆ ಮೋಸ ಮಾಡಿದ್ದಾನೆ. ಇದರಿಂದ ಸಾಕಷ್ಟು ಕಳೆದುಕೊಂಡಿದ್ದೇನೆ. ಆದರೆ ಆ ಸಮಯದಲ್ಲಿ ನಾನು ನನ್ನ ನಂಬಿರುವ ಪ್ರೇಕ್ಷಕರಿಗೆ ಯಾವ ರೀತಿ ಮನರಂಜನೆ ನೀಡಬೇಕು ಅಂತ ನಾನು ಯೋಚಿಸಿದೆ ನಟಿ ತಿಳಿಸಿದ್ದಾರೆ..
ನನ್ನ ತಂದೆ ನಾನು ಸಿನಿರಂಗಕ್ಕೆ ಬರೋದು ಇಷ್ಟವಿರಲಿಲ್ಲ. ಅವರು ಇಂಜಿನಿಯರಿಂಗ್ ಮಾಡಲು ಹೇಳಿದರು. ಆದರೆ ನಾನು ನಟಿಯಾಗುತ್ತೇನೆ ಅಂತ ಹೇಳಿದಾಗ ಅವರು ಒಪ್ಪಲಿಲ್ಲ, ಇದರಿಂದಾಗಿ ಮನೆಬಿಟ್ಟು ಓಡಿ ಮುಂಬೈಗೆ ಬಂದೆ ಅಂತ ತಮ್ಮ ಹಳೆ ನೆನೆಪು ಮೆಲುಕು ಹಾಕಿದರು..
ಮುಂಬೈನಲ್ಲಿ ನನಗೆ ಪರಿಚಯದ ಗೆಳೆಯರಿದ್ದಾರೆ. ಆದರೆ ಕಾರಣಾಂತರಗಳಿಂದ ನಾನು ಅವರೊಂದಿಗೆ ವಾಸಿಸಲು ಸಾಧ್ಯವಾಗಲಿಲ್ಲ. ಕೊನೆಗೆ ಕೆಲವು ಹುಡುಗರ ಜೊತೆ ತಂಗಿದ್ದೆ. ಅವರು ನನಗೆ ಕುಟುಂಬದಂತೆ ಇದ್ದರು ಎಂದು ಶಾಲಿನಿ ಹೇಳಿದ್ದಾರೆ.