Shani Ast 2024: ಕೆಲವೇ ದಿನಗಳಲ್ಲಿ ಅಸ್ತಮಿಸಲಿದ್ದಾನೆ ಶನಿ, ನಾಲ್ಕು ರಾಶಿಯವರಿಗೆ ಕಷ್ಟದ ದಿನಗಳು ಆರಂಭ
ಜ್ಯೋತಿಷ್ಯ ಶಾಸ್ತ್ರದಲ್ಲಿ, ನ್ಯಾಯದ ದೇವರು ಕರ್ಮಗಳಿಗೆ ತಕ್ಕ ಫಲ ನೀಡುವ ಗ್ರಹ ಎಂದು ಬಣ್ಣಿಸಲಾಗುವ ಶನಿದೇವನನ್ನು ಕ್ರೂರ ಗ್ರಹ ಎಂತಲೂ ಕರೆಯಲಾಗುತ್ತದೆ.
ಶನಿ ಈ ವರ್ಷವೂ ಕುಂಭ ರಾಶಿಯಲ್ಲಿದೆ ಸಂಚರಿಸಲಿದ್ದಾನೆ. ಆದರೆ, 2024ರಲ್ಲಿ ಶನಿಯ ಸಂಚಾರದಲ್ಲಿ ಮೂರು ಬಾರಿ ಬದಲಾವಣೆಗಳನ್ನು ಕಾಣಬಹುದು. ಅದರಲ್ಲಿ ಮೊದಲಿಗೆ ಶನಿಯು ಅಸ್ತಮಿಸಲಿದ್ದಾನೆ.
ಶನಿ ಅಸ್ತ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿ ದೇವನು 11 ಫೆಬ್ರವರಿ 2024 ರಂದು ಅಸ್ತಮಿಸಲಿದ್ದು 18 ಮಾರ್ಚ್ 2024 ರವರೆಗೆ ಇದೇ ಸ್ಥಿತಿಯಲ್ಲಿ ಇರಲಿದ್ದಾನೆ.
ಶನಿ ಅಸ್ತ ಪ್ರಭಾವ: ಶನಿ ಅಸ್ತದ ಪರಿಣಾಮ ದ್ವಾದಶ ರಾಶಿಗಳ ಮೇಲೆ ಕಂಡು ಬರುತ್ತದೆ ಆದರೂ, ಈ ಸಮಯವನ್ನು ಕೆಲವು ರಾಶಿಯವರ ದೃಷ್ಟಿಯಿಂದ ಸಂಕಷ್ಟದ ಸಮಯ ಎಂದು ಬಣ್ಣಿಸಲಾಗುತ್ತಿದೆ. ಹಾಗಿದ್ದರೆ, ಈ ಸಮಯದಲ್ಲಿ ಯಾವ ರಾಶಿಯವರು ಎಚ್ಚರಿಕೆಯಿಂದ ಇರುವುದು ಅಗತ್ಯ ಎಂದು ತಿಳಿಯಿರಿ.
ಕರ್ಕಾಟಕ ರಾಶಿ: ಆಸ್ತಮ ಸ್ಥಿತಿಯಲ್ಲಿರುವ ಶನಿ ದೇವನು ಕರ್ಕಾಟಕ ರಾಶಿಯವರಿಗೆ ತೊಂದರೆಗಳನ್ನು ಹೆಚ್ಚಿಸಲಿದ್ದಾನೆ. ಪ್ರತಿಯೊಂದು ಕೆಲಸದಲ್ಲೂ ನೀವು ಅಡೆತಡೆಗಳನ್ನು ಎದುರಿಸಬಹುದು. ಶನಿಗ್ರಹದ ದುಷ್ಪರಿಣಾಮಗಳಿಂದಾಗಿ ಈ ಸಮಯದಲ್ಲಿ ನೀವು ನಿಮ್ಮ ತಾಯಿಯ ಆರೋಗ್ಯದ ಬಗ್ಗೆ ನಿಗಾವಹಿಸುವುದು ಅವಶ್ಯಕವಾಗಿದೆ.
ಮಕರ ರಾಶಿ: ಈ ವರ್ಷವೂ ಮಕರ ರಾಶಿಯವರಿಗೆ ಶನಿ ಸಾಡೇ ಸಾತಿ ಪ್ರಭಾವವಿದೆ. ಇದರೊಂದಿಗೆ ಇನ್ನೂ ಕೆಲವೇ ದಿನಗಳಲ್ಲಿ ಅಸ್ತಮಿಸಲಿರುವ ಶನಿ ಮಹಾತ್ಮನು ಈ ರಾಶಿಯವರಿಗೆ ಉದ್ಯೋಗ ವ್ಯವಹಾರದಲ್ಲಿ ಸಮಸ್ಯೆಗಳನ್ನು ಹೆಚ್ಚಿಸಲಿದ್ದಾನೆ. ಹಣಕಾಸಿನ ಸಮಸ್ಯೆಗಳು ನಿಮ್ಮ ಮಾನಸಿಕ ಒತ್ತಡವನ್ನು ಹೆಚ್ಚಾಗುವಂತೆ ಮಾಡಬಹುದು.
ಕುಂಭ ರಾಶಿ: ಸ್ವ ರಾಶಿಯಲ್ಲಿರುವ ಶನಿ ದೇವನು ಅಸ್ತಮಿಸಿದಾಗ ಈ ರಾಶಿಯವರು ವೃತ್ತಿ, ವ್ಯವಹಾರಕ್ಕೆ ಸಂಬಂಧಿಸಿದಂತೆ ನಾನಾ ರೀತಿಯ ಕಷ್ಟಗಳನ್ನು ಎದುರಿಸಬೇಕಾಗಬಹುದು. ಈ ಸಮಯದಲ್ಲಿ ಹಳೆಯ ರೋಗಗಳು ಉಲ್ಬಣಿಸುವ ಸಾಧ್ಯತೆ ಇದ್ದು, ಆರೋಗ್ಯದ ಬಗ್ಗೆ ಜಾಗರೂಕರಾಗಿರಿ.
ಮೀನ ರಾಶಿ: ಶನಿ ಅಸ್ತ ಸ್ಥಿತಿಯು ಮೀನ ರಾಶಿಯ ಜನರಿಗೆ ವ್ಯಾಪಾರದಲ್ಲಿ ಭಾರೀ ನಷ್ಟವನ್ನು ನೀಡಬಹುದು. ಈ ರಾಶಿಯ ಜನರು ತಮ್ಮ ವೃತ್ತಿಜೀವನದಲ್ಲಿ ಅನೇಕ ಅಡೆತಡೆಗಳನ್ನು ಎದುರಿಸಬೇಕಾಗಬಹುದು. ಮಾತ್ರವಲ್ಲ, ನಿಮ್ಮ ವೈವಾಹಿಕ ಜೀವನದಲ್ಲೂ ಹಲವು ಏರಿಳಿತಗಳಿರಬಹುದು.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.