2025ರಲ್ಲಿ ಶನಿಯ ಅಸ್ತ; ಈ 3 ರಾಶಿಯವರಿಗೆ ಅದೃಷ್ಟದ ಬೆಂಬಲದ ಜೊತೆಗೆ ಎಲ್ಲಾ ಸಮಸ್ಯೆಗಳಿಂದ ಮುಕ್ತಿ!!
ಶನಿಯು 2025ರ ಫೆಬ್ರವರಿ 28ರಿಂದ ಏಪ್ರಿಲ್ 9ರವರೆಗೆ ಅಸ್ತಮಿಸುತ್ತದೆ. ಈ ಸಮಯದಲ್ಲಿ ಶನಿ ದೇವನು ಕುಂಭ ರಾಶಿಯಲ್ಲಿ ಇರುತ್ತಾನೆ. 2025ರಲ್ಲಿ ಶನಿಯು ಮಾರ್ಚ್ 29ರಂದು ರಾತ್ರಿ 10.01ಕ್ಕೆ ಮೀನ ರಾಶಿಗೆ ಸಂಚರಿಸಲಿದ್ದಾನೆ. ಶನಿಯ ಅಸ್ತದಿಂದ ಯಾವ ರಾಶಿಯವರಿಗೆ ಲಾಭವಾಗಲಿದೆ ಎಂದು ತಿಳಿಯಿರಿ.
ವೃಷಭ ರಾಶಿಯವರಿಗೆ ಶನಿಗ್ರಹವು ವಿಶೇಷವಾಗಿ ಫಲಕಾರಿಯಾಗಲಿದೆ. ಬಹುಕಾಲದಿಂದ ಬಾಕಿ ಉಳಿದಿದ್ದ ಎಲ್ಲಾ ಕೆಲಸಗಳು ಹಂತಹಂತವಾಗಿ ಪೂರ್ಣಗೊಳ್ಳಲಿವೆ. ಶನಿದೇವರ ವಿಶೇಷ ಅನುಗ್ರಹದಿಂದ ನಿಮ್ಮ ವ್ಯಾಪಾರದಲ್ಲಿ ಅಧಿಕ ಲಾಭವಾಗಲಿದೆ. ಉದ್ಯೋಗಸ್ಥರ ಜಾತಕದಲ್ಲಿ ಪ್ರಗತಿಯ ಸಾಧ್ಯತೆಗಳಿವೆ. ವಯಸ್ಸಾದವರಿಗೆ ಶೀತ-ಕೆಮ್ಮು ನಿವಾರಣೆಯಾಗುತ್ತದೆ. ವ್ಯವಹಾರದಲ್ಲಿ ನಿಮಗೆ ಅಪಾರ ಲಾಭ ಸಿಗಲಿದೆ. ಅವಿವಾಹಿತರಿಗೆ ಮದುವೆ ಯೋಗ ಕೂಡಿಬರಲಿದೆ.
ಕರ್ಕ ರಾಶಿಗೆ ಕರ್ಮಫಲ ನೀಡುವ ಶನಿದೇವರ ವಿಶೇಷ ಅನುಗ್ರಹದಿಂದ ಅಪಾರ ಸುಖ-ಸಂತೋಷ ಸಿಗಲಿದೆ. ಅವಿವಾಹಿತರಿಗೆ ಮದುವೆ ಯೋಗ ಕೂಡಿಬರಲಿದೆ. ಕಚೇರಿಯಲ್ಲಿನ ಹಿರಿಯ ಅಧಿಕಾರಿಗಳು ಉದ್ಯೋಗಿಗಳ ಕೆಲಸದಿಂದ ಸಂತೋಷ ಪಡುತ್ತಾರೆ. ನಿರುದ್ಯೋಗಿಗಳು ಶೀಘ್ರವೇ ದೊಡ್ಡ ಕಂಪನಿಯ ಕೆಲಸದ ಪ್ರಸ್ತಾಪ ಪಡೆಯಬಹುದು. ಸಮಾಜದಲ್ಲಿ ನಿಮ್ಮ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಶೀಘ್ರವೇ ನೀವು ಸಿಹಿಸುದ್ದಿಗಳನ್ನು ಪಡೆಯುತ್ತೀರಿ.
ಶನಿಯ ಅಸ್ತಮವು ವೃಶ್ಚಿಕ ರಾಶಿಯ ಜನರ ಮೇಲೆ ಶುಭ ಪರಿಣಾಮ ಬೀರಲಿದೆ. ಬಹಳ ದಿನಗಳಿಂದ ಕಾಯುತ್ತಿದ್ದ ಕೆಲಸ ಶೀಘ್ರವೇ ಪೂರ್ಣಗೊಳ್ಳಲಿದೆ. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವುದು ಈ ಸಮಯದಲ್ಲಿ ನಿಮಗೆ ಒಳ್ಳೆಯದು. ಉದ್ಯೋಗಿಗಳು ಕಚೇರಿಯಲ್ಲಿ ಕೆಲವು ಪ್ರಮುಖ ಜವಾಬ್ದಾರಿ ಪಡೆಯಬಹುದು. ಹಠಾತ್ ಆರ್ಥಿಕ ಲಾಭದಿಂದ ನಿಮ್ಮ ಖುಷಿ ಹೆಚ್ಚಾಗಲಿದೆ. ನಿಮ್ಮ ವ್ಯಾಪಾರದಲ್ಲಿ ಪ್ರಗತಿ ಕಂಡುಬರಲಿದೆ. ಅದೃಷ್ಟದ ಬೆಂಬಲದಿಂದ ನೀವು ಅಪಾರ ಸುಖ-ಸಂಪತ್ತು ಗಳಿಸುತ್ತೀರಿ.