Shani Dev: ಈ ಘಟನೆಗಳಿಂದ ಶನಿದೇವನ ಅನುಗ್ರಹ ಮತ್ತು ಕೋಪದ ಸಂಕೇತ ಅರ್ಥಮಾಡಿಕೊಳ್ಳಿ

Tue, 21 Mar 2023-3:09 pm,

ಶನಿದೇವನು ಪ್ರಸನ್ನನಾಗಿದ್ದರೆ, ಅವನ ಕೃಪೆಯಿಂದ ಒಬ್ಬ ವ್ಯಕ್ತಿಯು ದರಿದ್ರನಿಂದ ರಾಜನಾಗುತ್ತಾನೆ. ಜೀವನದಲ್ಲಿ ಸುಖ, ಸಂಪತ್ತು, ವೈಭವ, ಐಶ್ವರ್ಯ ಎಲ್ಲವನ್ನೂ ಪಡೆಯುತ್ತಾನೆ. ಮತ್ತೊಂದೆಡೆ ನಕಾರಾತ್ಮಕ ದೃಷ್ಟಿ ಇದ್ದಾಗ ವ್ಯಕ್ತಿಯು ಸಿಂಹಾಸನದಲ್ಲಿದ್ದರೂ ನೆಲದ ಮೇಲೆ ಬೀಳುತ್ತಾನೆ. ಶನಿಯ ವಕ್ರದೃಷ್ಟಿಯಿಂದ ಮನುಷ್ಯ ತುಂಬಾ ಕಷ್ಟ ಪಡಬೇಕಾಗುತ್ತದೆ.

ಶನಿದೇವನ ಕೃಪೆಯಿಂದ ವ್ಯಕ್ತಿಗೆ ಪ್ರತಿಯೊಂದು ಕೆಲಸದಲ್ಲೂ ಯಶಸ್ಸು ಸಿಗುತ್ತದೆ. ಶನಿದೇವ ತನ್ನ ಭಕ್ತರಿಗೆ ಕೀರ್ತಿ, ಸಂಪತ್ತು, ಸ್ಥಾನ ಮತ್ತು ಗೌರವವನ್ನು ನೀಡುತ್ತಾನೆ. ಮತ್ತೊಂದೆಡೆ ಜಾತಕದಲ್ಲಿ ಶನಿಯ ಅಶುಭ ಸ್ಥಾನದಿಂದಾಗಿ ವ್ಯಕ್ತಿಯು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಶನಿದೇವನ ಕೃಪೆಯು ಒಬ್ಬ ವ್ಯಕ್ತಿಗೆ ಸಿಗುತ್ತಿದೆಯೇ ಅಥವಾ ಅವನ ಕೋಪಕ್ಕೆ ಗುರಿಯಾಗಿದ್ದಾನೆಯೇ ಎಂಬುದು ಸಾಮಾನ್ಯವಾಗಿ ಜನರಿಗೆ ತಿಳಿದಿರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಜೀವನದಲ್ಲಿ ನಡೆಯುವ ಘಟನೆಗಳ ಮೂಲಕ ಶನಿದೇವನ ಶುಭ ಮತ್ತು ಅಶುಭ ಸಂಕೇತಗಳನ್ನು ಕಂಡುಹಿಡಿಯಬಹುದು.

ಶನಿದೇವನು ಒಬ್ಬ ವ್ಯಕ್ತಿಯ ಮೇಲೆ ಆಶೀರ್ವಾದ ನೀಡಿದರೆ, ಅಂತಹವರಿಗೆ ಸಮಾಜದಲ್ಲಿ ಹೆಚ್ಚಿನ ಗೌರವ ಸಿಗುತ್ತದೆ. ಅಂತಹವರು ದೊಡ್ಡ ಆಘಾತದ ನಂತರವೂ ಹೇಗಾದರೂ ಬದುಕುಳಿಯುತ್ತಾರೆ. ಶನಿಯು ದಯೆಯಿಂದ ಕೂಡಿದ್ದರೆ, ವ್ಯಕ್ತಿಯ ಆರೋಗ್ಯವು ಯಾವಾಗಲೂ ಉತ್ತಮವಾಗಿರುತ್ತದೆ. ಹಣದ ಲಾಭ ಪಡೆಯಬಹುದು. ಉದ್ಯೋಗ, ವ್ಯಾಪಾರದಲ್ಲಿ ಪ್ರಗತಿ ಇರುತ್ತದೆ. ದೇವಾಲಯದಿಂದ ಶೂಗಳು ಮತ್ತು ಚಪ್ಪಲಿಗಳ ಕಳ್ಳತನವನ್ನು ಶನಿದೇವನ ಮಂಗಳಕರ ಸಂಕೇತವೆಂದು ಪರಿಗಣಿಸಲಾಗುತ್ತದೆ.

ಶನಿದೇವನ ಆಶೀರ್ವಾದವು ಯಾವುದೇ ವ್ಯಕ್ತಿಯ ಮೇಲೆ ಇಲ್ಲದಿದ್ದರೆ, ಅಂತಹ ಜನರ ಆರೋಗ್ಯವು ಯಾವಾಗಲೂ ಕೆಟ್ಟದಾಗಿರುತ್ತದೆ. ಹಲವು ಪ್ರಯತ್ನಗಳನ್ನು ಮಾಡಿದರೂ ಸಮಸ್ಯೆಗಳಿಂದ ಮುಕ್ತಿ ಸಿಗುವುದಿಲ್ಲ. ಜೀವನದಲ್ಲಿ ಹಣದ ನಷ್ಟವಿರುತ್ತದೆ. ಕಷ್ಟಪಟ್ಟು ದುಡಿದರೂ ಹಣ ಉಳಿಯುವುದಿಲ್ಲ ಮತ್ತು ಪ್ರಗತಿಯ ದಾರಿಗಳೆಲ್ಲವೂ ಮುಚ್ಚಿಹೋಗತೊಡಗುತ್ತವೆ.

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link