ಶನಿದೇವನ ಇಷ್ಟ ರಾಶಿಗಳಿವು ! ಸಾಡೇಸಾತಿಯಲ್ಲಿಯೂ ಇವರನ್ನು ಕಾಡುವುದಿಲ್ಲ !ಜೀವನ ಪೂರ್ತಿ ಸಿರಿ ಸಂಪತ್ತು ಒದಗಿಸಿ, ಸುಖದ ಸುಪ್ಪತ್ತಿಗೆಯಲ್ಲಿಯೇ ತೇಲಿಸುತ್ತಾನೆ ಶನಿ ಮಹಾತ್ಮ
ಶನಿ ದೇವ ಒಬ್ಬ ವ್ಯಕ್ತಿಗೆ ಅವನ ಕರ್ಮಗಳಿಗೆ ಅನುಗುಣವಾಗಿ ಫಲವನ್ನು ನೀಡುತ್ತಾನೆ. ಕೆಟ್ಟ ಕೆಲಸ ಮಾಡಿದರೆ ತನ್ನ ವಕ್ರದೃಷ್ಟಿಯನ್ನುಅವರ ಮೇಲೆ ಹರಿಸಿ ಬಿಡುತ್ತಾನೆ. ಶನಿದೇವನಿಗೆ ದಯೆ ಎನ್ನುವುದು ಇಲ್ಲ ಎಂದು ಹೇಳಲಾಗುತ್ತದೆ. .
ಆದರೆ ಶನಿದೇವನು ಮೆಚ್ಚುವ ಕೆಲ ರಾಶಿಗಳಿವೆ. ಅವರಿಗೆ ಜೀವನದಲ್ಲಿ ಎಂದಿಗೂ ಕಾಡುವುದೇ ಇಲ್ಲವಂತೆ ಶನಿ ಮಹಾತ್ಮ. ಏಳೂವರೆ ಅಥವಾ ಎರಡೂವರೆ ವರ್ಷದ ಶನಿ ದೆಸೆಯಲ್ಲಿಯೂ ಇವರ ಮೇಲೆ ಕೃಪಾ ದೃಷ್ಟಿಯನ್ನೇ ಹಾರಿಸುತ್ತಾನೆ.
ತುಲಾ ರಾಶಿ: ತುಲಾ ರಾಶಿಯವರ ಮೇಲೆ ಶನಿಯ ವಿಶೇಷ ಕೃಪೆ ಇರುತ್ತದೆ.ಇದು ಶ್ನಿದೆವನ ಅತ್ಯಂತ ಪ್ರಿಯವಾದ ರಾಶಿ. ತುಲಾ ರಾಶಿಯವರು ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಯಾರಿಗೂ ಕೆಡುಕಾಗದಂತೆ ನೋಡಿಕೊಳ್ಳುತ್ತಾರೆ.ಶನಿದೆಸೆ ಇತರ ರಾಶಿಯವರ ಮೇಲೆ ಬೀರುವಷ್ಟು ಕೆಟ್ಟ ಪರಿಣಾಮ ಈ ರಾಶಿಯವರ ಮೇಲೆ ಬೀರುವುದಿಲ್ಲ.
ಮಕರ ರಾಶಿ : ಶನಿಯ ಅಧಿಪತ್ಯದ ರಾಶಿ ಇದು.ಹಾಗಾಗಿ ಈ ರಾಶಿ ಎಂದರೂ ಶನಿಗೆ ಪ್ರಿಯ. ಈ ರಾಶಿಯವರು ತುಂಬಾ ಬುದ್ಧಿವಂತರು. ಇವರು ಜೀವನದಲ್ಲಿ ಶನಿದೆವನ ಕೃಪೆಯಿಂದ ಶೀಘ್ರವಾಗಿ ಯಶಸ್ಸನ್ನು ಪಡೆಯುತ್ತಾರೆ. ಇವರ ಕಷ್ಟಕ್ಕೆ ತಕ್ಕ ಪ್ರತಿಫಲ ಸಿಗುವುದು.
ಕುಂಭ ರಾಶಿ: ಈ ರಾಶಿಯ ಅಧಿಪತಿ ಕೂಡಾ ಶನಿ ದೇವ.ಕುಂಭ ರಾಶಿಯವರಿಗೆ ತಾಳ್ಮೆ ಹೆಚ್ಚು. ಈ ರಾಶಿಯವರು ತಾವು ಅಂದುಕೊಂಡ ಯಾವುದೇ ಕೆಲಸದಲ್ಲಿ ಯಶಸ್ಸನ್ನು ಸಾಧಿಸಿದ ನಂತರವೇ ಸುಮ್ಮನಿರುವುದು.ಶನಿ ದೇವನ ಕೃಪೆಯಿಂದಲೇ ಇವರ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.
ಸೂಚನೆ: ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ಜೋತಿಷ್ಯರನ್ನು ಸಂಪರ್ಕಿಸಿ. ಈ ಮಾಹಿತಿಯನ್ನು Zee Kannada News ಅನುಮೋದಿಸುವುದಿಲ್ಲ.