Shani Budh Yuti 2024: ಮೂವತ್ತು ವರ್ಷಗಳ ಬಳಿಕ ಕುಂಭ ರಾಶಿಯಲ್ಲಿ ಶನಿ-ಬುಧರ ಮೈತ್ರಿ, ಈ ಜನರಿಗೆ ಭಾರಿ ಧನಲಾಭ!
Shani Budh Yuti 2024 In Kumbh: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ 30 ವರ್ಷಗಳ ಸುದೀರ್ಘ ಅವಧಿಯ ಬಳಿಕ ಕುಂಭ ರಾಶಿಯಲ್ಲಿ ಶನಿ ಹಾಗೂ ಬುಧರ ಮೈತ್ರಿ ನೆರವೇರುತ್ತಿದೆ. ಇದರಿಂದ ಕೆಲ ರಾಶಿಗಳ ಜನರ ಭಾಗ್ಯ ಸೂರ್ಯನಂತೆ ಹೊಳೆಯಲಿದೆ.Spiritual News In Kannada
ಕುಂಭ ರಾಶಿ: ಈ ಮೈತ್ರಿ ನಿಮ್ಮ ಜಾಕಾದ ಲಗ್ನ ಭಾವದಲ್ಲಿ ರಚನೆಯಾಗುತ್ತಿದೆ. ಶನಿ ನಿಮ್ಮ ರಾಶಿಗೆ ಅಧಿಪತಿಯಾಗಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ಕಲಿತುಕೊಳ್ಳುವ ನಿಮ್ಮ ಸಾಮರ್ಥ್ಯ ಹೆಚ್ಚಾಗಲಿದೆ. ರಚನಾತ್ಮಕ ಕ್ಷೇತ್ರದಲ್ಲಿ ನೀವು ಭಾರಿ ಹೊಳೆಯುವಿರಿ. ಈ ಅವಧಿ ಆರ್ಥಿಕ ಯೋಜನೆಗಳನ್ನು ರೂಪಿಸುವ ದೃಷ್ಟಿಯಿಂದ ಅತ್ಯುತ್ತಮವಾಗಿದೆ. ವಿವಾಹಿತರ ವೈವಾಹಿಕ ಜೀವನ ಅದ್ಭುತವಾಗಿರಲಿದೆ. ಬುಧನ ಪ್ರಭಾವದಿಂದ ವೃತ್ತಿ-ವ್ಯಾಪಾರದಲ್ಲಿ ನಿಮಗೆ ಭಾರಿ ಲಾಭ ಉಂಟಾಗಲಿದ್ದು, ಇದರಿಂದ ನಿಮ್ಮ ಆದಾಯದಲ್ಲಿ ಅಪಾರ ಹೆಚ್ಚಳವನ್ನು ನೀವು ಕಾಣುವಿರಿ.
ಮಿಥುನ ರಾಶಿ: ಶನಿ-ಬುಧರ ಈ ಮೈತ್ರಿ ನಿಮ್ಮ ಜಾತಕದ ನವಮ ಭಾವದಲ್ಲಿ ರೂಪುಗೊಳ್ಳುತ್ತಿದೆ. ಇದರಿಂದ ನಿಮ್ಮ ಭಾಗ್ಯ ಹೊಳೆಯಲಿದೆ. ನೀವು ಅಂದುಕೊಂಡ ಯೋಜನೆಗಳಲ್ಲಿ ಯಶಸ್ಸನ್ನು ಕಾಣುವಿರಿ. ಈ ಅವಧಿಯಲ್ಲಿ ನಿಮ್ಮ ವೃತ್ತಿ ಜೀವನ ಅತ್ಯುತ್ತಮವಾಗಿರಲಿದೆ. ವಿದೇಶಿ ಒಪ್ಪಂದದಿಂದ ಲಾಭ ಸಿಗಲಿದೆ. ಕೆಲಸ-ಕಾರ್ಯಗಳ ನಿಮಿತ್ತ ನಿಮ್ಮ ಯಾತ್ರೆ ಸಂಭವಿಸುವ ಸಾಧ್ಯತೆ ಇದೆ. ಈ ಯಾತ್ರೆ ನಿಮ್ಮ ಪಾಲಿಗೆ ಶುಭ ಫಲದಾಯಿ ಸಾಬೀತಾಗಲಿದೆ. ಧಾರ್ಮಿಕ ಅಥವಾ ಮಂಗಳ ಕಾರ್ಯಗಳಲ್ಲಿ ಭಾಗವಹಿಸುವಿರಿ.
ಸಿಂಹ ರಾಶಿ: ಎರಡೂ ಗ್ರಹಗಳ ಈ ಮೈತ್ರಿ ನಿಮ್ಮ ಜಾತಕದ ಸಪ್ತಮ ಭಾವದಲ್ಲಿ ರಚನೆಯಾಗುತ್ತಿದೆ. ವಿವಾಹಿತರಾಗಿದ್ದಾರೆ ನಿಮ್ಮ ವೈವಾಹಿಕ ಜೀವನ ಅತ್ಯುತ್ತಮವಾಗಿರಲಿದೆ. ಮೊದಲಿಗಿಂತ ಪರಸ್ಪರ ಅಧಿಕ ಹತ್ತಿರಕ್ಕೆ ಬರುವಿರಿ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ನಿಮಗೆ ಸಾಕಷ್ಟು ಸಕಾರಾತ್ಮಕ ಫಲಿತಾಂಶಗಳು ಪ್ರಾಪ್ತಿಯಾಗಲಿವೆ. ಕಾರ್ಯಕ್ಷೇತ್ರದಲ್ಲಿ ನಿಮಗೆ ಒಳ್ಳೆಯ ಅವಕಾಶಗಳು ಒದಗಿ ಬರಲಿವೆ. ಶನಿ ನಿಮ್ಮ ರಾಶ್ಯಲ್ಲಿ ಶಶ ಮಹಾಪುರುಷ ರಾಜಯೋಗ ರಚಿಸಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ದೈನಂದಿನ ಆದಾಯದಲ್ಲಿ ಹೆಚ್ಚಳ ಸಂಭವಿಸಲಿದೆ. ಸ್ಥಾನಮಾನ, ಪ್ರತಿಷ್ಠೆ ಹೆಚ್ಚಾಗಲಿದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)