Shani Budh Yuti: ಮೂರು ದಶಕಗಳ ಬಳಿಕ ಬುಧ ಶನಿ ಮೈತ್ರಿ, ಈ ರಾಶಿಯವರಿಗೆ ಸುವರ್ಣ ಯುಗ

Sun, 24 Dec 2023-5:23 am,

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಹೊಸ ವರ್ಷ 2024ರ ಆರಂಭಕ್ಕೆ ಇನ್ನೊಂದು ವಾರವಷ್ಟೆ ಬಾಕಿ ಉಳಿದಿದೆ. 2024ರಲ್ಲಿ ಗ್ರಹಗಳ ಸ್ಥಾನದಲ್ಲಿನ ಬದಲಾವಣೆಯು ಎಲ್ಲಾ 12 ರಾಶಿಯವರ ಜೀವನದ ಮೇಲೆ ಮಹತ್ವದ ಪರಿಣಾಮವನ್ನು ಬೀರುತ್ತದೆ.   

ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿ ದೇವನನ್ನು ನ್ಯಾಯದ ದೇವರು, ಪ್ರತಿಯೊಬ್ಬರಿಗೂ ಅವರವರ ಕರ್ಮಗಳಿಗೆ ತಕ್ಕಂತೆ ಫಲ ನೀಡುತ್ತಾನೆ ಎಂದು ಹೇಳಲಾಗುತ್ತದೆ. 

ಜ್ಯೋತಿಷ್ಯ ಶಾಸ್ತ್ರದಲ್ಲಿ, ಗ್ರಹಗಳ ರಾಜಕುಮಾರ ಎಂದು ಕರೆಯಲ್ಪಡುವ ಬುಧ ಗ್ರಹವು ವ್ಯಕ್ತಿಯ ಮಾತು, ಬುದ್ಧಿವಂತಿಕೆ, ಏಕಾಗ್ರತೆಗೆ ಸಂಬಂಧಿಸಿದ ಗ್ರಹ ಎಂದು ಹೇಳಲಾಗುತ್ತದೆ. 

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 2024ರಲ್ಲಿ ಬರೋಬ್ಬರಿ ಮೂರು ದಶಕಗಳ ಬಳಿಕ ಮಿತ್ರ ಗ್ರಹಗಳಾದ ಶನಿ ಮತ್ತು ಬುಧ ಮೈತ್ರಿ ನೆರವೇರಲಿದೆ. 

ಹೊಸ ವರ್ಷದ ಆರಂಭದಲ್ಲಿ ಕುಂಭ ರಾಶಿಯಲ್ಲಿ ಶನಿ ಮತ್ತು ಬುಧ ಗ್ರಹಗಳ ಸಂಯೋಗವು ಎಲ್ಲಾ 12 ರಾಶಿಯವರ ಮೇಲೆ ಮಹತ್ವದ ಪರಿಣಾಮವನ್ನು ಬೀರುತ್ತದೆ. ಆದಾಗ್ಯೂ, ಮೂವತ್ತು ವರ್ಷಗಳ ಬಳಿಕ ಮಿತ್ರಗಳ ಸಂಯೋಗವು ಮೂರು ರಾಶಿಯವರ ಜೀವನದಲ್ಲಿ ಸುವರ್ಣ ಸಮಯವನ್ನು ತರಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ... 

ಮೇಷ ರಾಶಿ:  2024ರಲ್ಲಿ ಶನಿ ಬುಧ ಗ್ರಹಗಳ ಮೈತ್ರಿ ಪ್ರಭಾವದಿಂದಾಗಿ ಮೇಷ ರಾಶಿಯವರ ಆದಾಯದಲ್ಲಿ ಬಂಪರ್ ಹೆಚ್ಚಳವನ್ನು ಕಾಣಬಹುದು. ಸರ್ಕಾರಿ ಉದ್ಯೋಗಕ್ಕಾಗಿ ತಯಾರಿ ನಡೆಸುತ್ತಿರುವವರಿಗೆ ಈ ಸಮಯದಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದೆ. 

ವೃಶ್ಚಿಕ ರಾಶಿ:  ಶನಿ ಬುಧ ಯುತಿಯ ಸಕಾರಾತ್ಮಕ ಪರಿಣಾಮ ವೃಶ್ಚಿಕ ರಾಶಿಯವರ ಮೇಲೂ ಕಂಡು ಬರುತ್ತದೆ. ಈ ಸಮಯದಲ್ಲಿ  ರಿಯಲ್ ಎಸ್ಟೇಟ್ ಸಂಬಂಧಿತ ವ್ಯಕ್ತಿಗಳಿಗೆ ಭರ್ಜರಿ ಲಾಭವಾಗಲಿದೆ. ಉದ್ಯೋಗಸ್ಥರಿಗೆ ವೇತನ ಹೆಚ್ಚಾಗಬಹುದು. ವಾಹನ, ಭೂಮಿ ಖರೀದಿ ಯೋಗವೂ ಇದೆ. 

ಕುಂಭ ರಾಶಿ:  ಶನಿ ಬುಧ ಮೈತ್ರಿಯು ಕುಂಭ ರಾಶಿಯವರ ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ. ಈ ಸಮಯದಲ್ಲಿ ಹೊಸ ವ್ಯಾಪಾರ-ವ್ಯವಹಾರದಿಂದ ಲಾಭವನ್ನು ನಿರೀಕ್ಷಿಸಬಹುದು. ಆಕಸ್ಮಿಕ ಧನಲಾಭವು ನಿಮ್ಮ ಹಣಕಾಸಿನ ಸಮಸ್ಯೆಗಳನ್ನು ನಿವಾರಿಸಲಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link