ಮೂವತ್ತು ವರ್ಷಗಳ ಬಳಿಕ ಹತ್ತಿರಕ್ಕೆ ಬರಲಿದ್ದಾರೆ ಬುಧ ಹಾಗೂ ಶನಿ, ಈ ಜನರ ಜೀವನದಲ್ಲಿ ಒಳ್ಳೆಯ ದಿನಗಳು ಆರಂಭ!

Tue, 12 Dec 2023-1:41 pm,

Shani Budh Yuti 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಹೊಸ ವರ್ಷದಲ್ಲಿ ಬುಧ ಹಾಗೂ ಶನಿ ಮೈತ್ರಿ ನೆರೆವೆರುತ್ತಿದ್ದು, ಇದು ಎಲ್ಲಾ ದ್ವಾದಶ ರಾಶಿಗಳ ಜನರ ಮೇಲೆ ಭಾರಿ ಪ್ರಭಾವವನ್ನು ಬೀರಲಿದೆ. ಅದರಲ್ಲಿಯೂ ವಿಶೇಷವಾಗಿ ಮೂರು ರಾಶಿಗಳ ಜನರ ಮೇಲೆ ಇದರ ಸಕಾರಾತ್ಮಕ ಪ್ರಭಾವ ಉಂಟಾಗಲಿದೆ. (Spiritual News In Kannada)

ಮೇಷ ರಾಶಿ: ಬುಧ ಹಾಗೂ ಶನಿಯ ಈ ಮೈತ್ರಿ ನಿಮ್ಮ ಜಾತಕದ ಆದಾಯ ಭಾವದಲ್ಲಿ ರಚನೆಯಾಗುತ್ತಿದೆ. ಹೀಗಾಗಿ ಹೊಸ ವರ್ಷದಲ್ಲಿ ನಿಮ್ಮ ಆದಾಯ ಸಾಕಷ್ಟು ಹೆಚ್ಚಾಗಲಿದೆ. ಆದಾಯದ ಹೊಸ ಮಾರ್ಗಗಳು ತೆರೆದುಕೊಳ್ಳಲಿವೆ. ಸರ್ಕಾರಿ ನೌಕರಿಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಸಂತಸದ ಸುದ್ದಿ ಸಿಗುವ ಸಾಧ್ಯತೆ ಇದೆ. ಕೌಟುಂಬಿಕ ಮತ್ತು ವೈವಾಹಿಕ ಜೀವನ ಉತ್ತಮವಾಗಿರಲಿದೆ. ಮಕ್ಕಳ ವತಿಯಿಂದ ಶುಭ ಸಮಾಚಾರ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಹೂಡಿಕೆಯಿಂದ ನಿಮಗೆ ಅಪಾರ ಲಾಭ ಹರಿದು ಬರಲಿದೆ. 

ಕುಂಭ ರಾಶಿ: ಶನಿ ಹಾಗೂ ಬುಧರ ಈ ಮೈತ್ರಿ ನಿಮ್ಮ ಗೋಚರ ಜಾತಕದ ಲಗ್ನ ಭಾವದಲ್ಲಿ ರೂಪುಗೊಳ್ಳುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ಈ ಅವಧಿಯಲ್ಲಿ ನಿಮ್ಮ ಸಾಮಾಜಿಕ ವ್ಯಾಪ್ತಿ ವಿಸ್ತರಣೆಯಾಗಲಿದೆ. ವ್ಯಾಪಾರಿಗಳಿಗೆ ಹೊಸ ವರ್ಷ ಸಾಕಷ್ಟು ಲಾಭ ತಂದುಕೊಡಲಿದೆ. ಶನಿ ನಿಮ್ಮ ಗೋಚರ ಜಾತಕದಲ್ಲಿ ಶಶ ಮಾಹಾಪುರುಷ ರಾಜಯೋಗ ಕೂಡ ರೂಪಿಸಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಕಾಲಕಾಲಕ್ಕೆ ಆಕಸ್ಮಿಕ ಧನಲಾಭ ಉಂಟಾಗುವ ಸಾಧ್ಯತೆ ಇದೆ. ನೌಕರ ವರ್ಗದ ಜನರಿಗೆ ನೌಕರಿಯಲ್ಲಿ ಪ್ರಮೋಷನ್ ಭಾಗ್ಯ ಪ್ರಾಪ್ತಿಯಾಗಲಿದೆ ಮತ್ತು ಇಂಕ್ರಿಮೆಂಟ್ ಕೂಡ ಸಿಗಲಿದೆ. 

ವೃಶ್ಚಿಕ ರಾಶಿ: ಬುಧ ಹಾಗೂ ಶನಿಯ ಈ ಮೈತ್ರಿ ನಿಮ್ಮ ಗೋಚರ ಜಾತಕದ ಚತುರ್ಥ ಭಾವದಲ್ಲಿ ರೂಪುಗೊಳ್ಳುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಪ್ರಾಪರ್ಟಿ ಅಥವಾ ವಾಹನ ಸುಖ ಪ್ರಾಪ್ತಿಯಾಗಲಿದೆ. ಒಂದು ವೇಳೆ ನಿಮ್ಮ ವ್ಯಾಪಾರ ಆಸ್ತಿಪಾಸ್ತಿ ಅಥವಾ ರಿಯಲ್ ಎಸ್ಟೇಟ್ ಹಾಗೂ  ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಪಟ್ಟಿದ್ದಾರೆ ನಿಮಗೆ ಭಾರಿ ಧನಲಾಭ ಕಾದಿದೆ. ನೌಕರವರ್ಗದ ಜನರ ಆದಾಯ ಹೆಚ್ಚಾಗಲಿದೆ ಮತ್ತು ಅವರ ಪ್ರಭಾವ ಕೂಡ ಹೆಚ್ಚಾಗಲಿದೆ. ಹೊಸ ಬಿಸ್ನೆಸ್ ಆರಂಭಿಸಲು ಸಮಯ ಉತ್ತಮವಾಗಿದೆ ಮತ್ತು ಅದರಿಂದ ನಿಮಗೆ ಸಾಕಷ್ಟು ಲಾಭ ಕೂಡ ಸಿಗಲಿದೆ. 

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ZEENEWS TRENDING STORIES

By continuing to use the site, you agree to the use of cookies. You can find out more by Tapping this link