Shani-Chandra Yuti: ಶನಿ-ಚಂದ್ರ ವಿಷಯೋಗ: ಈ 3 ರಾಶಿಯವರಿಗೆ ಸಂಕಷ್ಟಗಳ ಸರಮಾಲೆ; ಪರಿ ಪರಿಯಾಗಿ ಕಾಡುವನು ಶನಿದೇವ!
![ಶನಿಚಂದ್ರ ವಿಷಯೋಗ Shani-Chandra Vishayoga](https://kannada.cdn.zeenews.com/kannada/sites/default/files/2023/04/29/302973-chandra-1.jpg?im=FitAndFill=(500,286))
ಒಂದು ರಾಶಿಯಿಂದ ಇನ್ನೊಂದಕ್ಕೆ ಚಲಿಸಲು ಶನಿ ಗಹ್ರಕ್ಕೆ ಎರಡೂವರೆ ವರ್ಷಗಳು ಬೇಕಾಗುತ್ತದೆ. ಜನವರಿ 17 ರಂದು, ಶನಿಯು ತನ್ನದೇ ಆದ ಕುಂಭ ರಾಶಿಯನ್ನು ಪ್ರವೇಶಿಸಿದ್ದು, ಇದೀಗ ಅದೇ ರಾಶಿಯಲ್ಲಿ ನೆಲೆಸಿದ್ದಾನೆ. ಇದರ ಜೊತೆ ಮೇ ತಿಂಗಳಿನಲ್ಲಿ ಚಂದ್ರನು ಕೂಡ ಈ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ ಎರಡೂ ಗ್ರಹಗಳ ಸಂಯೋಗದಿಂದ ವಿಷ ಯೋಗ ಉಂಟಾಗುತ್ತಿದೆ.
![ಶನಿಚಂದ್ರ ವಿಷಯೋಗ Shani-Chandra Vishayoga](https://kannada.cdn.zeenews.com/kannada/sites/default/files/2023/04/29/302972-chandra-3.jpg?im=FitAndFill=(500,286))
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೇ 12 ರಂದು ಮಧ್ಯರಾತ್ರಿ 12.18 ರಿಂದ ಮೇ 14 ರ ಮಧ್ಯರಾತ್ರಿ 3.24 ಕ್ಕೆ ಚಂದ್ರನು ಕುಂಭ ರಾಶಿಯಲ್ಲಿ ಕುಳಿತುಕೊಳ್ಳುತ್ತಾನೆ. ಜ್ಯೋತಿಷ್ಯದ ಪ್ರಕಾರ, ವಿಷ ಯೋಗವು ಒಳ್ಳೆಯದಲ್ಲ ಎಂದು ಪರಿಗಣಿಸಲಾಗಿದೆ. ಕೆಲವು ರಾಶಿಗಳ ಜನರು ಜಾಗರೂಕರಾಗಿರಬೇಕು.
![ಕಟಕ ರಾಶಿ Shani-Chandra Vishayoga](https://kannada.cdn.zeenews.com/kannada/sites/default/files/2023/04/29/302971-kataka.jpg?im=FitAndFill=(500,286))
ಈ ಕಟಕ ರಾಶಿಯ ಜನರಿಗೆ ವಿಷ ಯೋಗವು ಪ್ರಯೋಜನಕಾರಿಯಲ್ಲ. ಈ ರಾಶಿಯಲ್ಲಿ ಶನಿಯು ಎಂಟನೇ ಮನೆಯಲ್ಲಿ ಕುಳಿತಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ ಈ ರಾಶಿಯವರಿಗೂ ಶನಿದೇವನ ನೆರಳು ಕಾಡುತ್ತಿದೆ. ಈ ಜನರು ಸಣ್ಣ ಪ್ರಯತ್ನಗಳಿಗೆ ಕೂಡ ಹೆಚ್ಚು ಶ್ರಮಿಸಬೇಕಾಗಬಹುದು. ಪ್ರತಿ ಕೆಲಸ ಮಾಡುವ ಮುನ್ನ ಒಂದಲ್ಲ ಒಂದು ಅಡೆತಡೆ ಖಂಡಿತ ಬರಬಹುದು. ವೈವಾಹಿಕ ಜೀವನ ಮತ್ತು ಪ್ರೇಮ ಜೀವನದಲ್ಲಿಯೂ ಸ್ವಲ್ಪ ಏರಿಳಿತಗಳಿರಬಹುದು.
ಈ ರಾಶಿಯಲ್ಲಿ ಶನಿಯು ಆರನೇ ಮನೆಯಲ್ಲಿ ಕುಳಿತಿದ್ದಾನೆ. ಇದರೊಂದಿಗೆ ಚಂದ್ರನ ಸಂಯೋಜನೆಯಿಂದ ರೂಪುಗೊಂಡ ವಿಷ ಯೋಗವು ಈ ರಾಶಿಯವರು ಜೀವನದಲ್ಲಿ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಶತ್ರುಗಳು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಬಹುದು. ಅನಗತ್ಯವಾಗಿ ಖರ್ಚು ಮಾಡುವುದನ್ನು ತಪ್ಪಿಸಿ. ದುಷ್ಪರಿಣಾಮ ಬೀರುವ ಸಾಧ್ಯತೆಯಿರುವುದರಿಂದ ಉದ್ಯೋಗದಲ್ಲಿಯೂ ಕೊಂಚ ಎಚ್ಚರಿಕೆ ಅಗತ್ಯ. ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸಲು, ಬಹಳಷ್ಟು ಕಷ್ಟಪಟ್ಟು ಕೆಲಸ ಮಾಡಬೇಕಾಗಬಹುದು. ಮಾನಸಿಕ ಮತ್ತು ದೈಹಿಕ ಒತ್ತಡವನ್ನು ಎದುರಿಸಬೇಕಾಗಬಹುದು.
ಈ ರಾಶಿಯಲ್ಲಿ ಶನಿಯು ನಾಲ್ಕನೇ ಮನೆಯಲ್ಲಿ ಕುಳಿತಿದ್ದಾನೆ. ಇದರೊಂದಿಗೆ ಚಂದ್ರನ ಸಂಯೋಗದಿಂದ ವಿಷ ಯೋಗವು ರೂಪುಗೊಳ್ಳುತ್ತಿದೆ. ಈ ಕಾರಣದಿಂದಾಗಿ, ಈ ರಾಶಿಯ ಜನರು ತೊಂದರೆಗಳನ್ನು ಎದುರಿಸಬೇಕಾಗಬಹುದು. ಅಷ್ಟೇ ಅಲ್ಲ ಇವರು ಮಾನಸಿಕ ಒತ್ತಡವನ್ನು ಎದುರಿಸಬೇಕಾಗಬಹುದು. ಯಾವುದೇ ರೀತಿಯ ವಹಿವಾಟು ಅಥವಾ ಹೂಡಿಕೆ ಮಾಡುವ ಮೊದಲು 10 ಬಾರಿ ಯೋಚಿಸಿ. ಏಕೆಂದರೆ ಅದು ಹಣದ ನಷ್ಟಕ್ಕೆ ಕಾರಣವಾಗಬಹುದು. ಕಷ್ಟಪಟ್ಟು ಕೆಲಸ ಮಾಡಿದರೂ ಯಶಸ್ಸು ಸಿಗುವುದು ಕಷ್ಟ.