ಜಾತಕದಲ್ಲಿ ಶನಿ ಶುಭನಾಗಿದ್ದಾನೋ ಅಥವಾ ಅಶುಭನಾಗಿದ್ದಾನೋ ತಿಳಿದುಕೊಳ್ಳುವುದು ಹೇಗೆ?

Fri, 08 Sep 2023-4:34 pm,

ಸಾಮಾನ್ಯವಾಗಿ ತಮ್ಮ ಜಾತಕದಲ್ಲಿ ಶನಿಯ ಸ್ಥಾನ ಶುಭವಾಗಿದೆಯೋ ಅಥವಾ ಅಶುಭವಾಗಿದೆಯೋ ಎಂಬುದು ತಿಳಿದುಕೊಳ್ಳುವುದು ತುಂಬಾ ಮುಖ್ಯವಾದ ಸಂಗತಿಯಾಗಿರುತ್ತದೆ.  ಏಕೆಂದರೆ ಶನಿಯು ಅಶುಭವಾಗಿದ್ದರೆ ಜೀವನದಲ್ಲಿ ಮೇಲೊಂದರಂತೆ ಸಮಸ್ಯಗಳು ಎದುರಾಗುತ್ತಲೇ ಇರುತ್ತವೆ.  ಮತ್ತೊಂದೆಡೆ, ಶುಭ ಶನಿಯ ಶುಭ ಸ್ಥಾನ ಒರ್ವ ಭಿಕ್ಷುಕನನ್ನೂ ಕೂಡ ರಾಜನನ್ನಾಗಿಸುತ್ತದೆ.   

ಶನಿದೇವನ ವಕ್ರದೃಷ್ಟಿಯು ಜೀವನವನ್ನೇ ನಾಶಮಾಡುತ್ತದೆ ಎಂಬ ಕಾರಣಕ್ಕೆ ಶನಿಯ ಹೆಸರು ಕೇಳಿದರೆ ಜನರು ಭಯಭೀತರಾಗುತ್ತಾರೆ. ಆದರೆ ಶನಿಯು ಕೇವಲ ಅಶುಭ ಫಲಿತಾಂಶಗಳನ್ನು ನೀಡುತ್ತಾನೆ ಎಂಬುದು ಶುದ್ಧ ತಪ್ಪು. ಶನಿಯು ಜಾತಕದಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ, ಅದು ವ್ಯಕ್ತಿಯನ್ನು ಸಿಂಹಾಸನವನ್ನೇರಿ ಕುಳಿತುಕೊಳ್ಳುವಂತೆ ಮಾಡುತ್ತದೆ.   

ಶನಿಗೆ ಜನರು ಭಯಪಡಲು ಕಾರಣವೆಂದರೆ ಶನಿಯು ಕರ್ಮಗಳಿಗೆ ಅನುಗುಣವಾಗಿ ಫಲವನ್ನು ನೀಡುತ್ತಾನೆ. ಶನಿಯು ಅಹಿತಕರವೆಂದು ತೋರುವ ಕೆಲಸಗಳನ್ನು ಮಾಡುವವರನ್ನು ಶಿಕ್ಷಿಸುತ್ತಾನೆ. ನೀಗಾಗಿ ಶನಿಗೆ ಇಷ್ಟವಾಗದ ಕೆಲಸಗಳನ್ನು ಎಂದಿಗೂ ಮಾಡಬಾರದು.  

ಜಾತಕದಲ್ಲಿ ಶನಿಯ ಸ್ಥಾನವು ಶುಭವಾಗಿದ್ದರೆ, ವ್ಯಕ್ತಿಯು ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿಯನ್ನು ಸಾಧಿಸುತ್ತಾನೆ. ಅವನ ಜೀವನದಲ್ಲಿ ಯಾವುದೇ ತೊಂದರೆಗಳಿರುವುದಿಲ್ಲ. ಶನಿಗ್ರಹದ ಮಂಗಳಕರ ಪ್ರಭಾವದಿಂದ ಒಬ್ಬ ವ್ಯಕ್ತಿಯು ನ್ಯಾಯವಂತನಾಗುತ್ತಾನೆ ಮತ್ತು ಸಮಾಜ ಸೇವೆ ಮಾಡುತ್ತಾನೆ. ಇಂತಹ ವ್ಯಕ್ತಿಗೆ ಹೆಚ್ಚಿನ ಗೌರವ ಸಿಗುತ್ತದೆ. ವ್ಯಕ್ತಿಯ ಬಲವಾದ ಮತ್ತು ಹೊಳಪಾದ ಉಗುರುಗಳು ಮತ್ತು ಕೂದಲುಗಳು ಜಾತಕದಲ್ಲಿ ಶನಿಯು ಮಂಗಳಕರನಾಗಿದ್ದಾನೆ ಎಂಬುದನ್ನೂ ಸೂಚಿಸುತ್ತವೆ.  

ಶನಿಯ ಅಶುಭ ಪರಿಣಾಮಗಳನ್ನು ತೊಡೆದುಹಾಕಲು, ಶನಿವಾರದಂದು ನೆರಳನ್ನು  ದಾನ ಮಾಡಿ. ಇದಕ್ಕಾಗಿ, ಕಂಚಿನ ಬಟ್ಟಲಿನಲ್ಲಿ ಸಾಸಿವೆ ಎಣ್ಣೆಯನ್ನು ತುಂಬಿಸಿ. ನಂತರ ಅದರಲ್ಲಿ ನಿಮ್ಮ ಮುಖವನ್ನು ನೋಡಿದ ನಂತರ, ಬಟ್ಟಲು ಮತ್ತು ಎಣ್ಣೆಯನ್ನು ದೇವಸ್ಥಾನದಲ್ಲಿ ಇರಿಸಿ ಅಥವಾ ಅದನ್ನು ದಾನ ಮಾಡಿ. ನೈರ್ಮಲ್ಯ ಕಾರ್ಮಿಕರು ಮತ್ತು ಬಡವರನ್ನು ಚೆನ್ನಾಗಿ ನೋಡಿಕೊಳ್ಳಿ, ಅವರಿಗೆ ಸಹಾಯ ಮಾಡಿ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link