75 ವರ್ಷಗಳ ಬಳಿಕ ಶನಿಯ ವಿಶೇಷ ಮಹಿಮೆ: ಈ 3 ರಾಶಿಯವರ ಲಕ್ಕೇ ಚೇಂಜ್, ಇನ್ಮುಂದೆ ಬಾಳಲ್ಲಿ ಎಂದೆಂದೂ ಇರಲಿದೆ ಖುಷಿಯೋ ಖುಷಿ!
ಜ್ಯೋತಿಷ್ಯ ಶಾಸ್ತ್ರದಲ್ಲಿ, ಶನಿ ದೇವನು ಫಲಿತಾಂಶಗಳನ್ನು ನೀಡುವವನು ಮತ್ತು ನ್ಯಾಯದ ಅಧಿಪತಿ ಎಂದು ಹೇಳಲಾಗುತ್ತದೆ. ಶನಿಯು ತನ್ನ ಸಂಚಾರ ಅಥವಾ ನಕ್ಷತ್ರಪುಂಜದ ಬದಲಾವಣೆಯ ಸಮಯದಲ್ಲಿ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ.
ಶನಿದೇವನು ಜನವರಿ 11 ರಂದು ಶತಭಿಷಾ ನಕ್ಷತ್ರದ ಎರಡನೇ ಹಂತವನ್ನು ಪ್ರವೇಶಿಸಿದ್ದಾನೆ. ಶನಿಯ ಈ ರಾಶಿಯ ಬದಲಾವಣೆಯು ಮೂರು ರಾಶಿಯವರಿಗೆ ತುಂಬಾ ಮಂಗಳಕರವಾಗಿರುತ್ತದೆ. ಅಷ್ಟೇ ಅಲ್ಲದೆ, ಸುಮಾರು 75 ವರ್ಷಗಳ ಬಳಿಕ ವಿಶೇಷ ಯೋಗಗಳ ಸೃಷ್ಟಿಗೆ ಕಾರಣನಾಗಿದ್ದಾನೆ.
ತುಲಾ- ಶನಿಯ ಈ ರಾಶಿಯ ಬದಲಾವಣೆಯು ತುಲಾ ರಾಶಿಯವರಿಗೆ ತುಂಬಾ ಫಲಕಾರಿಯಾಗಿದೆ. ಈ ಜನರು ತಮ್ಮ ವೃತ್ತಿಜೀವನದಲ್ಲಿ ಪ್ರಗತಿಯನ್ನು ಪಡೆಯುತ್ತಾರೆ. ಕೆಲಸದಲ್ಲಿ ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಜೀವನದಲ್ಲಿ ಸಂತೋಷ ಬರುತ್ತದೆ. ವೈವಾಹಿಕ ಜೀವನದಲ್ಲಿ ಮಧುರತೆ ಇರುತ್ತದೆ.
ಮಕರ - ಮಕರ ರಾಶಿಯವರಿಗೆ ಶನಿಯ ವಿಶೇಷ ಆಶೀರ್ವಾದ ಸಿಗುತ್ತದೆ. ವ್ಯಾಪಾರದಲ್ಲಿ ಲಾಭವನ್ನು ಪಡೆಯುತ್ತೀರಿ. ಹಠಾತ್ ಆರ್ಥಿಕ ಲಾಭದ ಸಾಧ್ಯತೆಗಳಿವೆ. ಶನಿಯ ಕೃಪೆಯಿಂದ ನಿಮ್ಮ ಶ್ರಮಕ್ಕೆ ಸಂಪೂರ್ಣ ಫಲ ಸಿಗಲಿದೆ. ಹೂಡಿಕೆಯಿಂದ ಆರ್ಥಿಕ ಲಾಭ ಪಡೆಯಬಹುದು. ಜೀವನದಲ್ಲಿ ಧನಾತ್ಮಕ ಶಕ್ತಿ ಇರುತ್ತದೆ.
ಕುಂಭ- ಶನಿಯ ರಾಶಿಯ ಬದಲಾವಣೆಯು ಕುಂಭ ರಾಶಿಯವರಿಗೆ ಶುಭವಾಗಲಿದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಯಶಸ್ಸನ್ನು ತರುತ್ತಾನೆ. ಶನಿದೇವನ ಕೃಪೆಯಿಂದ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯುತ್ತದೆ. ಬ್ಯಾಂಕ್ ಬ್ಯಾಲೆನ್ಸ್ ಕೂಡ ಹೆಚ್ಚಾಗುತ್ತದೆ. ವ್ಯಾಪಾರದಲ್ಲಿ ಲಾಭ ಗಳಿಸುವಿರಿ.
(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ.)