ಈ 3 ರಾಶಿಗಳಿಗೆ ಶನಿದೇವನ ಆಶೀರ್ವಾದ.. ಧನ ಸಂಪತ್ತಿನ ನಿಧಿಯೇ ಸಿಗುವುದು.. ಪ್ರತಿ ಹೆಜ್ಜೆಗೂ ಜೊತೆಗಿರುವಳು ವಿಜಯಲಕ್ಷ್ಮಿ!

Mon, 12 Feb 2024-8:20 am,

ಕರ್ಮದ ಫಲವನವನ್ನೇ ನೀಡುವ ಶನಿಯು ಮಕರ ಮತ್ತು ಕುಂಭ ರಾಶಿಯ ಅಧಿಪತಿ ಎಂದು ಪರಿಗಣಿಸಲಾಗಿದೆ. 

ಫೆಬ್ರವರಿ ತಿಂಗಳಲ್ಲಿ ಕೆಲವು ಗ್ರಹಗಳು ಶನಿಯು ಆಳುವ ಮಕರ ರಾಶಿಗೆ ಚಲಿಸಲಿವೆ. ಸೂರ್ಯ, ಬುಧ, ಮಂಗಳ ಮತ್ತು ಶುಕ್ರ ಈ ರಾಶಿಯನ್ನು ಪ್ರವೇಶಿಸಲಿವೆ. ಇದರ ಜೊತೆ ಶನಿ ದೇವರ ಆಶೀರ್ವಾದವೂ ಕೆಲವು ರಾಶಿಗಳ ಮೇಲೆ ಇರುತ್ತದೆ. ಮುಂದಿನ ಆರು ತಿಂಗಳವರೆಗೆ ಈ ರಾಶಿಗಳ ಬಾಳು ಬೆಳಗಲಿದೆ. 

ಮೀನ ರಾಶಿ: ಶನಿಯ ಪ್ರಭಾವದಿಂದ ಉತ್ತಮ ಲಾಭ ಪಡೆಯುವಿರಿ. ಎಲ್ಲ ಕೆಲಸಗಳಲ್ಲೂ ಯಶಸ್ಸು ನಿಮ್ಮನ್ನು ಹಿಂಬಾಲಿಸುವುದು. ನೀವು ಇತರರಿಂದ ಸಹಾಯ ಪಡೆಯುತ್ತೀರಿ. ಬಡತನ ದೂರವಾಗುತ್ತದೆ. ಎಲ್ಲಾ ಕಷ್ಟಗಳಿಂದ ಹೊರಬರುತ್ತೀರಿ.ಬಡ್ತಿ ಪಡೆಯುವ ಸಾಧ್ಯತೆ ಇದೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಲಿದೆ.

ಸಿಂಹ ರಾಶಿ: ಶನಿಯ ಕೃಪೆಯಿಂದ ಅದೃಷ್ಟದ ಬಾಗಿಲು ತೆರಯುವುದು. ಪೂರ್ವಜರ ಆಸ್ತಿಗಳು ಕೈ ಸೇರುವುದು. ರಾಜಕೀಯದಲ್ಲಿರುವವರಿಗೆ ಸೂಕ್ತ ಸ್ಥಾನಮಾನ ಸಿಗುವ ಸಾಧ್ಯತೆ ಇದೆ. ನಿಮ್ಮ ಆದಾಯವು ಹೆಚ್ಚಾಗುವ ಸಾಧ್ಯತೆಯಿದೆ. ಉದ್ಯೋಗದಲ್ಲಿ ಉತ್ತಮ ಸ್ಥಾನಕ್ಕೆ ಹೋಗುತ್ತೀರಿ. 

ಮಕರ ರಾಶಿ: ಈ ರಾಶಿಯಲ್ಲಿ ಅನೇಕ ಗ್ರಹಗಳು ಒಟ್ಟಿಗೆ ಸೇರುತ್ತವೆ. ಇದರಿಂದ ನಿಮ್ಮ ಎಲ್ಲ ಸಮಸ್ಯೆಗಳೂ ದೂರವಾಗುತ್ತವೆ. ನಿಮಗೆ ಬಡ್ತಿ ಸಿಗಲಿದೆ. ಲಾಟರಿ, ಷೇರು ಮಾರುಕಟ್ಟೆಯ ಹೂಡಿಕೆ ಲಾಭವಾಗಲಿದೆ. ಆರ್ಥಿಕವಾಗಿ ಬಲಶಾಲಿಯಾಗುತ್ತೀರಿ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link