ಶನಿಗೆ ಪ್ರಿಯ ಈ 5 ಆಹಾರ, ಶನಿವಾರದಂದು ಸೇವಿಸಿದರೆ ಸಿಗುತ್ತೆ ಛಾಯಾಪುತ್ರನ ಅನುಗ್ರಹ.!
ಉದ್ದಿನ ಬೇಳೆ : ಶನಿವಾರದಂದು ಶನಿ ದೇವರಿಗೆ ಉದ್ದಿನ ಬೇಳೆ ನೈವೇದ್ಯ ಮಾಡಲಾಗುತ್ತದೆ. ಈ ದಿನ ಉದ್ದಿನ ಬೇಳೆಯನ್ನು ಸೇವಿಸಿದರೆ ಶನಿದೇವನು ಪ್ರಸನ್ನನಾಗುತ್ತಾನೆ ಎಂದು ನಂಬಲಾಗಿದೆ. ಇದರಿಂದ ವ್ಯಕ್ತಿ ಶನಿದೇವನ ಕೋಪದಿಂದ ಮುಕ್ತಿ ಹೊಂದುತ್ತಾನೆ ಎಂದು ನಂಬಲಾಗಿದೆ.
ಕಪ್ಪು ಎಳ್ಳು: ಶನಿ ದೇವರ ಪೂಜೆಯಲ್ಲಿ ಕಪ್ಪು ಎಳ್ಳನ್ನು ಬಳಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿವಾರದಂದು ಕಪ್ಪು ಎಳ್ಳನ್ನು ಸೇವಿಸುವುದು ಪ್ರಯೋಜನಕಾರಿಯಾಗಿದೆ. ಶನಿವಾರದಂದು ಕಪ್ಪು ಎಳ್ಳನ್ನು ಸೇವಿಸುವುದರಿಂದ ಶನಿದೇವನ ಅಶುಭ ಪರಿಣಾಮಗಳಿಂದ ಮುಕ್ತಿ ದೊರೆಯುತ್ತದೆ ಎಂದು ನಂಬಲಾಗಿದೆ.
ಸಾಸಿವೆ ಎಣ್ಣೆ: ಶನಿದೇವನ ಅನುಗ್ರಹವನ್ನು ಪಡೆಯಲು, ಶನಿವಾರದಂದು ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಲಾಗುತ್ತದೆ. ಜೊತೆಗೆ ಛಾಯಾದಾನ ಮತ್ತು ಸಾಸಿವೆ ಎಣ್ಣೆಯಿಂದ ಶನಿ ದೇವರಿಗೆ ಅಭಿಷೇಕವನ್ನು ಮಾಡಲಾಗುತ್ತದೆ. ಶನಿವಾರದಂದು ಸಾಸಿವೆ ಎಣ್ಣೆಯಿಂದ ಮಾಡಿದ ವಸ್ತುಗಳನ್ನು ಸೇವಿಸುವುದು ಪ್ರಯೋಜನಕಾರಿ, ಆದರೆ ಈ ದಿನ ಸಾಸಿವೆ ಎಣ್ಣೆಯನ್ನು ಖರೀದಿಸಬಾರದು.
ಕಡೆಲೆ ಕಾಳು: ಶನಿದೇವನ ಆಶೀರ್ವಾದ ಪಡೆಯಲು, ಶನಿವಾರದಂದು ಕಡೆಲೆ ಕಾಳನ್ನು ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಈ ದಿನ ಕಡೆಲೆ ಕಾಳನ್ನು ಸೇವಿಸಿದರೆ, ಅದು ವ್ಯಕ್ತಿಗೆ ತುಂಬಾ ಪ್ರಯೋಜನಕಾರಿ. ಇದರಿಂದ ಶನಿ ದೋಷವನ್ನು ತೊಡೆದುಹಾಕಬಹುದು ಎಂದು ನಂಬಲಾಗಿದೆ.
ಗುಲಾಬ್ ಜಾಮೂನ್: ಒಬ್ಬ ವ್ಯಕ್ತಿಯು ಶನಿ ಗ್ರಹದ ದೋಷದಿಂದ ಬಳಲುತ್ತಿದ್ದರೆ, ಅವರು ಶನಿವಾರದಂದು ಶನಿ ದೇವರಿಗೆ ಗುಲಾಬ್ ಜಾಮೂನ್ ಅರ್ಪಿಸಬೇಕು ಮತ್ತು ಅದನ್ನು ಸೇವಿಸಬೇಕು. ಶನಿದೇವನು ಇದರಿಂದ ಸಂತುಷ್ಟನಾಗುತ್ತಾನೆ ಮತ್ತು ಶನಿ ದೋಷದ ನಕಾರಾತ್ಮಕ ಪರಿಣಾಮಗಳಿಂದ ವ್ಯಕ್ತಿಯು ಪರಿಹಾರವನ್ನು ಪಡೆಯುತ್ತಾನೆ ಎಂದು ನಂಬಲಾಗಿದೆ.