ಶನಿದೇವನ ಈ ಸ್ತೋತ್ರ ಪಠಿಸಿದರೆ ಸಕಲ ಸಂಪತ್ತಿನ ಜೊತೆ ಅಖಂಡ ವರ ಪ್ರಾಪ್ತಿ
ಯಾವುದೇ ವ್ಯಕ್ತಿ ತಪ್ಪು ಮಾಡಿದರೆ, ಆತನನ್ನು ಶನಿದೇವ ಕಠಿಣವಾಗಿ ಶಿಕ್ಷಿಸುತ್ತಾರೆ ಎಂದು ಹೇಳಲಾಗುತ್ತದೆ. ಅದೇ ರೀತಿ ಒಳ್ಳೆಯ ಕೆಲಸವನ್ನು ಮಾಡುವವರಿಗೆ ದಯೆ ತೋರಿ, ಅಪಾರ ಆಶೀರ್ವಾದಗಳನ್ನು ನೀಡುತ್ತಾನೆ.
ಶನಿದೇವನ ಈ ಮಹಿಮೆಯಿಂದಾಗಿ ಪ್ರತಿಯೊಬ್ಬ ಮನುಷ್ಯನು ವಿವಿಧ ರೀತಿಯ ಪೂಜೆಗಳನ್ನು ಕೈಗೊಂಡು ಛಾಯಾಪುತ್ರನ ಆಶೀರ್ವಾದ ಪಡೆಯಲು ಪ್ರಯತ್ನಿಸುತ್ತಾರೆ. ಇಂದು ನಾವು ನಿಮಗೆ ಶನಿ ದೇವರಿಗೆ ಸಂಬಂಧಿಸಿದ 5 ವಿಶೇಷ ಕ್ರಮಗಳನ್ನು ಹೇಳುತ್ತೇವೆ. ನೀವು ಈ 5 ಕ್ರಮಗಳನ್ನು ಅನುಸರಿಸಿದರೆ, ನಿಮ್ಮ ಜೀವನದಲ್ಲಿ ಸಕಲ ಸಂಪತ್ತು ಪ್ರಾಪ್ತಿಯಾಗುತ್ತದೆ. ಆ ಸಲಹೆಗಳು ಯಾವುವು ಎಂದು ತಿಳಿಯೋಣ.
ಶನಿದೇವನ ಕೃಪೆಗೆ ಪಾತ್ರರಾಗಲು ಶನಿವಾರದಂದು ಸ್ನಾನ ಮಾಡಿ, ಶನಿದೇವನನ್ನು ಪೂಜಿಸಬೇಕು, ಬಳಿಕ ಶನಿ ಚಾಲೀಸಾವನ್ನು ಪಠಿಸಬೇಕು. ಈ ದಿನ ಸುಂದರಕಾಂಡದ ಪಾರಾಯಣವನ್ನೂ ಮಾಡಬೇಕು. ಈ ರೀತಿ ಮಾಡುವುದರಿಂದ ಶನಿದೇವ ಸಂತಸಗೊಳ್ಳುತ್ತಾನೆ.
ಕಾಗೆಗಳಿಗೆ ಆಹಾರ ನೀಡುವುದರಿಂದ ಛಾಯಾಪುತ್ರ ಆಶೀರ್ವಾದದ ಸುರಿಮಳೆಗೈಯುತ್ತಾನೆ. ಇದರೊಂದಿಗೆ ಶನಿವಾರದಂದು ಕಪ್ಪು ಪಾದರಕ್ಷೆಗಳು-ಚಪ್ಪಲಿಗಳು, ಕಪ್ಪು ಛತ್ರಿ ಅಥವಾ ಕಪ್ಪು ಉದ್ದಿನ ಬೇಳೆಯನ್ನು ಸಹ ದಾನ ಮಾಡಬೇಕು. ಈ ಎಲ್ಲಾ ದಾನಗಳು ಪುಣ್ಯವನ್ನು ನೀಡುತ್ತವೆ.
ಶನಿವಾರ ಸಂಜೆ ನಿಮ್ಮ ಮನೆಯಲ್ಲಿ ಅಗರಬತ್ತಿಯನ್ನು ಉರಿಸಿ. ಹೀಗೆ ಮಾಡುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿಯ ಹರಿವು ಹೆಚ್ಚುತ್ತದೆ. ಜೊತೆಗೆ ಗೋ ಮಾತೆಗೆ ಆಹಾರ ನೀಡಬೇಕು. ಆಲದ ಮರದ ಕೆಳಗೆ ಕಪ್ಪು ಎಳ್ಳನ್ನು ಹಾಕಿ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಿ. ಈ ದಿನ ದೇವಸ್ಥಾನಕ್ಕೆ ಹೋಗಿ ಹನುಮಂತನನ್ನು ಪೂಜಿಸಿ.
ಶಾಸ್ತ್ರಗಳ ಪ್ರಕಾರ, ಶನಿಯನ್ನು ಪುರುಷರು ಮತ್ತು ಮಹಿಳೆಯರು ಇಬ್ಬರೂ ಸಮಾನವಾಗಿ ಪೂಜಿಸಬಹುದು. ಆದರೆ, ಶನಿದೇವನ ಆರಾಧನೆಯ ಸಮಯದಲ್ಲಿ, ಶನಿದೇವನನ್ನು ಸ್ಪರ್ಶಿಸಬಾರದು. ದೇವಸ್ಥಾನದ ಅರ್ಚಕರನ್ನು ಹೊರತು ಬೇರೆ ಯಾರೂ ಶನಿ ವಿಗ್ರಹ ಸ್ಪರ್ಶಿಸದಿರಿ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)