ಇನ್ನೂ ಕೆಲವೇ ಗಂಟೆಗಳಲ್ಲಿ ವಕ್ರಾವಸ್ಥೆಯಲ್ಲಿರುವ ಶನಿಯ ಶಕ್ತಿಶಾಲಿ ನಡೆ ಆರಂಭ, 4 ರಾಶಿಗಳ ಜನರ ಅದೃಷ್ಟ ಸೂರ್ಯನಂತೆ ಹೊಳೆಯಲಿದೆ!
ವೃಷಭ ರಾಶಿ: ಶನಿಯ ಈ ಶಕ್ತಿಶಾಲಿ ವಕ್ರನಡೆ ವೃಷಭರಾಶಿಯ ಜನರ ಪಾಲಿಗೆ ಒಳ್ಳೆಯ ದಿನಗಳನ್ನು ಆರಂಭಿಸಲಿದೆ. ಏಕೆಂದರೆ ಶನಿ ನಿಮ್ಮ ಗೋಚರ ಜಾತಕದ ಕರ್ಮ ಭಾವದಲ್ಲಿ ಸಂಚರಿಸುತ್ತಿದ್ದಾನೆ. ಇದಲ್ಲದೆ ಆತ ನಿಮ್ಮ ಗೋಚರ ಜಾತಕದ ಭಾಗ್ಯೆಶ ಕೂಡ ಆಗಿದ್ದಾನೆ. ಇನ್ನೊಂದೆಡೆ ಆತ ಕಾರಕ ಸ್ಥಾನದಲ್ಲಿಯೂ ಇದ್ದಾನೆ . ಹೀಗಾಗಿ ನಿಮಗೆ ಕೆಲಸ-ಕಾರ್ಯಗಳಲ್ಲಿ ಅಪಾರ ಯಶಸ್ಸು ಪ್ರಾಪ್ತಿಯಾಗಲಿದೆ. ಧನ-ಧಾನ್ಯ ಪ್ರಾಪ್ತಿಯಾಗಲಿದೆ, ಕೆಲಸ-ಕಾರ್ಯಗಳಲ್ಲಿ ಕಾರ್ಯ ಸಿದ್ಧಿ ಕೂಡ ಪ್ರಾಪ್ತಿಯಾಗಲಿದೆ. ಆಸೆ ಆಕಾಂಕ್ಷೆಗಳೆಲ್ಲವೂ ಕೂಡ ಈಡೇರಲಿದೆ.
ಮಿಥುನ ರಾಶಿ: ಶನಿಯ ಈ ಶಕ್ತಿಶಾಲಿ ವಕ್ರನಡೆ ಮಿಥುನ ರಾಶಿಯ ಜಾತಕದವರ ಪಾಲಿಗೆ ಸಾಕಷ್ಟು ಲಾಭದಾಯಕ ಸಿದ್ಧ ಸಾಬೀತಾಗಲಿದೆ. ಏಕೆಂದರೆ ಶನಿ ನಿಮ್ಮ ಗೋಚರ ಜಾತಕದ ಭಾಗ್ಯ ಸ್ಥಾನದಲ್ಲಿ ವಿರಾಜಮಾನನಾಗಿದ್ದಾನೆ. ಇದಲ್ಲದೆ ನಿಮ್ಮ ಆಯಸ್ಸಿಗೆ ಅಧಿಪತಿಯಾಗಿ ದ್ವಿತೀಯ ಭಾವದಲ್ಲಿ ಬಂದಿದ್ದಾನೆ. ಈ ಅವಧಿಯಲ್ಲಿ ತಂದೆಯ ಜೊತೆಗಿನ ನಿಮ್ಮ ಸಂಭಂಧಗಳು ಸುಧಾರಣೆಯಾಗಲಿವೆ. ಇದಲ್ಲದೆ, ಹದಗೆಟ್ಟ ನಿಮ್ಮ ತಂದೆಯ ಆರೋಗ್ಯವೂ ಕೂಡ ಸುಧಾರಿಸಲಿದೆ. ಅಕ್ಟೋಬರ್ 29ರ ಬಳಿಕ ನಿಮಗೆ ಒಂದು ದೊಡ್ಡ ಯಶಸ್ಸು ಸಿಗುವ ಸಾಧ್ಯತೆ ಇದೆ. ಯಾವುದಾದರೊಂದು ದೊಡ್ಡ ಇಷ್ಟಾರ್ಥ ನೆರವೇರಲಿದೆ. ಏಕೆಂದರೆ ಅಷ್ಟೊತ್ತಿಗೆ ಕೇತು ಹಾಗೂ ಶನಿಯ ನವಪಂಚಮ ಯೋಗ ಮುಕ್ತಾಯ ಕಾಣಲಿದೆ.
ತುಲಾ ರಾಶಿ: ಶನಿಯ ವಕ್ರನಡೆಯಲ್ಲಿನ ಪವರ್ಜುಲ್ ಭಾವ ನಿಮ್ಮ ಪಾಲಿಗೆ ಸಾಕಷ್ಟು ಶುಭ ಸಾಬೀತಾಗಿದೆ. ಏಕೆಂದರೆ ಶನಿ ನಿಮ್ಮ ಗೋಚರ ಭಾವದ ಪಂಚಮ ಭಾವದಲ್ಲಿ ಸಂಚರಿಸುತ್ತಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ಕೋರ್ಟ್ ಕಚೇರಿ ವ್ಯವಹಾರಗಳಲ್ಲಿ ವಿಜಯ ನಿಮ್ಮದಾಗಲಿದೆ. ಇದಲ್ಲದೆ ಕಾಯಿಲೆಗಳಿಂದ ನಿಮಗೆ ಮುಕ್ತಿ ಸಿಗಲಿದೆ. ಮಕ್ಕಳ ಕಡೆಯಿಂದ ಒಳ್ಳೆಯ ಸುದ್ದಿ ಸಿಗುವ ಸಾಧ್ಯತೆ ಇದೆ. ಆಕಸ್ಮಿಕ ಧನಲಾಭದ ಜೊತೆಗೆ ನಿಮಗೆ ಅದೃಷ್ಟದ ಬೆಂಬಲ ಕೂಡ ಸಿಗಲಿದೆ.
ಮಕರ ರಾಶಿ: ನಿಮ್ಮ ಪಾಲಿಗೆ ಶನಿಯ ವಕ್ರಾವಸ್ಥೆಯ ಪವರ್ಫುಲ್ ನಡೆ ಸಾಕಷ್ಟು ಅನುಕೂಲಕರವಾಗಿದೆ. ಏಕೆಂದರೆ ಶನಿಯ ಆಶೀರ್ವಾದದಿಂದ ನಿಮಗೆ ಧನಪ್ರಾಪ್ತಿಯಾಗಲಿದೆ. ಇನ್ನೊಂದೆಡೆ ನಿಮಗೆ ನಿಮ್ಮ ಪರಿಶ್ರಮದ ತಕ್ಕ ಪ್ರತಿಫಲ ಸಿಗಲಿದೆ. ಇದಲ್ಲದೆ ಆಕಸ್ಮಿಕ ಧನಲಾಭ ಕೂಡ ಸಂಭವಿಸುವ ಸಾಧ್ಯತೆ ಇದೆ. ನೌಕರ ವರ್ಗದ ವೃತ್ತಿಯಲ್ಲಿ ಹೊಸ ಅವಕಾಶಗಳು ಪ್ರಾಪ್ತಿಯಾಗಲಿವೆ. ಪದೋನ್ನತಿಯ ಯೋಗ ಕೂಡ ನಿರ್ಮಾಣಗೊಳ್ಳುತ್ತಿದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)