Shani Deva Blessings: ಶನಿಯ ಕೃಪೆಗೆ ಪಾತ್ರರಾಗಲು ಈ 5 ಸರಳ ಮಾರ್ಗ ಅನುಸರಿಸಿ

Sun, 11 Aug 2024-4:39 pm,

ಶನಿದೇವನ ಆಶೀರ್ವಾದ ಪಡೆದುಕೊಳ್ಳಲು ಶಿಸ್ತು, ಪ್ರಾಮಾಣಿಕತೆ, ನೈತಿಕತೆ & ಕರ್ತವ್ಯಗಳನ್ನು ಸರಿಯಾಗಿ ನಿಭಾಯಿಸುವುದು ಅಗತ್ಯ. ಹೀಗಾಗಿ ಯಾವುದೇ ಕಾರಣಕ್ಕೂ ನೀವು ಅಶಿಸ್ತನ್ನು ರೂಢಿಸಿಕೊಳ್ಳಬೇಡಿ. ಮಲಗುವ & ಏಳುವ ಸಮಯ ನಿಗದಿಪಡಿಸಿಕೊಳ್ಳಿ. ಸೂರ್ಯೋದಯಕ್ಕೆ ಮುಂಚಿತವಾಗಿ ಎದ್ದು ಸ್ನಾನ ಮಾಡಿ ಭಕ್ತಿಯಿಂದ ದೇವರ ಪೂಜೆ ಮಾಡಿರಿ.

ಶನಿ ದೇವನನ್ನು ಸುಲಭವಾಗಿ ಒಲಿಸಿಕೊಳ್ಳಲು ಬಡವರ, ವೃದ್ಧರ ಸೇವೆ ಮಾಡಬೇಕು. ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಕೈಲಾದಷ್ಟು ದಾನ-ಧರ್ಮ ಮಾಡಬೇಕು. ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವುದು ಸಹ ಶನಿ ದೇವರನ್ನು ಒಲಿಸಿಕೊಳ್ಳಲು ಇರುವ ಉತ್ತಮ ಮಾರ್ಗವಾಗಿದೆ.

ಮಂತ್ರಗಳು ಸಂಖ್ಯಾಶಾಸ್ತ್ರದ ಪ್ರಬಲ ಕಂಪನಗಳಾಗಿವೆ. ಮಂತ್ರಗಳ ಉಚ್ಛಾರಣೆ ಮಾಡುವುದರಿಂದ ಶನಿ ದೇವನ ಕೃಪೆಗೆ ಪಾತ್ರರಾಗಬಹುದು.

ʼಧ್ವಜಿನಿ ಧಾಮಿನೀ ಚೈವ ಕಾ೦ಕಾಲೀ, ಕ೦ಠಕಿ ಕಲಹಿ ಚಥಾ ತುರ೦ಗಿ ಮಹಿಷಿ ಅಜಾ ಶನೇರ್ನಾಮನಿ ಪತ್ನೀನಾಮೇತಾನಿ ಸಂಜಪನ್ ಪುಮಾನ್, ದುಃಖಾನಿ ನಾಶಯೇನ್ನಿತ್ಯಂ ಸೌಭಾಗ್ಯಮೇಧತೇ ಸುಖಮ್ʼ||

ಶನಿ ಮಂತ್ರವನ್ನು ಪ್ರತಿ ಶನಿವಾರ ಕನಿಷ್ಠ 33 ಬಾರಿ ಜಪಿಸಬೇಕು.

ಬೇವು, ಕಪ್ಪು ಎಳ್ಳು, ಎಳ್ಳೆಣ್ಣೆ, ತುಳಸಿ ಎಲೆ, ನಾಗರಮೋತದ ಪುಡಿ & ನೀಲಗಿರಿ ತೈಲದಿಂದ ಶನಿ ದೇವನನ್ನು ಪೂಜಿಸಲಾಗುತ್ತದೆ. ಈ ಗಿಡಮೂಲಿಕೆ ಬಳಸಿ ಸ್ನಾನ ಮಾಡುವುದರಿಂದ ಭೌತಿಕ ದೇಹವನ್ನು ಶುದ್ಧೀಕರಿಸಬಹುದಾಗಿದೆ. ಹೀಗಾಗಿ ಗಿಡ ಮೂಲಿಕೆಗಳಿಂದ ಸ್ನಾನ ಮಾಡಿ ಶುಚಿಯಾದರೆ ಶನಿ ದೇವರ ಆಶೀರ್ವಾದಕ್ಕೆ ಪಾತ್ರರಾಗಬಹುದು.

ಜನ್ಮ ದಿನಾಂಕ, ಹೆಸರು & ಜಾತಕದಲ್ಲಿ ಶನಿಯ ಸ್ಥಾನವನ್ನಾಧರಿಸಿ ಶನಿಯ ಆಶೀರ್ವಾದ ಪಡೆಯಲು ಉತ್ತಮ ಮಾರ್ಗಗಳಿವೆ. ಶನಿಯ ಕೃಪೆಗೆ ಪಾತ್ರರಾಗಲು ಸಂಗೀತ ಧ್ಯಾನವು ಉತ್ತಮವಾಗಿದೆ. ಸಂಗೀತ ಧ್ಯಾನವು ಮನಸ್ಸನ್ನು ಶಾಂತಗೊಳಿಸಿ ಉತ್ತಮ ಯೋಚನೆ ಬರುವಂತೆ ಮಾಡುತ್ತದೆ. ಹೀಗಾಗಿ ನಿಯಮಿತವಾಗಿ ಸಂಗೀತ ಧ್ಯಾನ ಮಾಡಬೇಕು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link