ಸಾಡೇಸಾತಿಯಲ್ಲೂ ಈ ರಾಶಿಯವರನ್ನು ಕಾಪಾಡುತ್ತಾನೆ ಶನಿದೇವ

Thu, 30 Mar 2023-9:00 am,

ಅಸ್ತವಾಗಿದ್ದ ಶನಿಯು ಉದಯದೊಂದಿಗೆ ಧನ ರಾಜಯೋಗ ರೂಪುಗೊಂಡಿದೆ. ಇದರೊಂದಿಗೆ ಕೆಲವು ರಾಶಿಯವರ ಅವಸ್ಥೆಯಲ್ಲಿ ಶನಿದೆಸೆ ನಡೆಯುತ್ತಿದ್ದರೂ ಕೆಲವು ರಾಶಿಯವರನ್ನು ಕೈ ಬಿಡದೇ ಕಾಯುತ್ತಾನೆ ಶನಿ ಮಹಾತ್ಮ. ಈ  ರಾಶಿಯವರು ಉದ್ಯೋಗ-ವ್ಯವಹಾರದಲ್ಲಿ ಉತ್ತಮ ಯಶಸ್ಸು ಗಳಿಸಲಿದ್ದಾರೆ. 

ವೃಷಭ ರಾಶಿ : ಶನಿಯ ಉದಯವು ವೃಷಭ ರಾಶಿಯವರ ವೃತ್ತಿ ಜೀವನದಲ್ಲಿನ ಬಹು ದೊಡ್ಡ ಬದಲಾವಣೆಗೆ ಕಾರಣವಾಗಲಿದೆ. ಈ ರಾಶಿಯವರು ಉತ್ತಮ ವೇತನ ಪಡೆಯುವುದರೊಂದಿಗೆ ಹೊಸ ಉದ್ಯೋಗದ ಆಫರ್ ಕೂಡಾ ಸಿಗಲಿದೆ. ಪ್ರಸ್ತುತ ಕೆಲಸದಲ್ಲಿ ಇರುವವರಿಗೆ ದೊಡ್ಡ ಮಟ್ಟದ ಬಡ್ತಿ ಸಿಕ್ಕಿ ವೇತನದಲ್ಲಿ ಹೆಚ್ಚಳವಾಗಲಿದೆ. ವ್ಯಾಪಾರದಲ್ಲಿಯೂ ಲಾಭವಾಗಲಿದೆ. ಹೊಸ ಕೆಲಸ ಆರಂಭಿಸುವುದಕ್ಕೂ ಇದು ಸೂಕ್ತ ಸಮಯ. 

ಸಿಂಹ ರಾಶಿ : ಶನಿ ಉದಯವಾಗುವುದರೊಂದಿಗೆ ಈ ರಾಶಿಯವರ ಅದೃಷ್ಟ ಬದಲಾಗಿದೆ. ಅನಿರೀಕ್ಷಿತ ಮೂಲದಿಂದ ಹಣ ಪಡೆಯುವುದು ಈ ರಾಶಿಯವರಿಗೆ ಸಾಧ್ಯವಾಗುತ್ತದೆ. ಸಾಲ ಕೊಟ್ಟ ಹಣ ಮರಳಿ ಕೈ ಸೇರಲಿದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ಹಣಡ ಕೊರತೆ ಎದುರಾಗದಂತೆ ಕಾಯುತ್ತಾನೆ ಶನಿ ಮಹಾತ್ಮ. 

ಕುಂಭ ರಾಶಿ : ಕುಂಭ ರಾಶಿಯಲ್ಲಿ ಶನಿಯು ಉದಯಿಸುವುದರೊಂದಿಗೆ ಧನ ರಾಜಯೋಗ ರೂಪುಗೊಂಡಿದೆ. ಇದು ಕುಂಭ ರಾಶಿಯವರಿಗೆ ಹೆಚ್ಚಿನ ಲಾಭವನ್ನು ನೀಡುತ್ತದೆ. ಶನಿ ಉದಯವು ಕುಂಭ ರಾಶಿಯವರ ಜಾತಕದಲ್ಲಿ ಶಶರಾಜಯೋಗ ಕೂಡಾ ನಿರ್ಮಿಸಿದೆ. ಈ ಎರಡೂ ಯೋಗಗಳು ಕುಂಭ ರಾಶಿಯವರಿಗೆ ಪ್ರತಿ ಹಂತದಲ್ಲಿಯೂ ಲಾಭ ನೀಡುತ್ತದೆ. ಈ ಎರಡು ಯೋಗಗಳ ಕಾರಣದಿಂದಾಗಿ ಶನಿಯ ಸಾಡೇಸಾತಿಯ ಕಾರಣದಿಂದ ಎದುರಾಗುವ ಕಷ್ಟಗಳು ಕೂಡಾ ಪರಿಹಾರವಾಗಲಿವೆ. 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link