ಈ ರಾಶಿಯವರಿಗೆ ಕಷ್ಟ ಸೋಂಕಲು ಕೂಡಾ ಬಿಡುವುದಿಲ್ಲ ಶನಿ ದೇವ ! ಸುಖದ ಸುಪ್ಪತ್ತಿಗೆಯಲ್ಲಿಯೇ ಇರಿಸುತ್ತಾನೆ ಸದಾ

Tue, 01 Aug 2023-4:33 pm,

ಯಾರ ಜಾತಕದಲ್ಲಿ ಶನಿದೇವ ಮಂಗಳಕರ ಸ್ಥಾನದಲ್ಲಿ ಇರುತ್ತಾನೆಯೋ ಅವರಿಗೆ ಶನಿ ದೇವ ಶುಭ ಫಲವನ್ನೇ ನೀಡುತ್ತಾನೆ. ಅವರ ಮೇಲೆ ಶನಿ ಮಹಾತ್ಮನ ಆಶೀರ್ವಾದ ತುಸು ಹೆಚ್ಚೇ ಇರುತ್ತದೆ. ಈ ರಾಶಿಯವರು ಅದೃಷ್ಟದ ಬೆಂಬಲವನ್ನು ಪಡೆಯುತ್ತಾರೆ.    

ಈ ರಾಶಿಯವರ ಜಾತಕದಲ್ಲಿ ಏಳೂವರೆ ಶನಿ ಅಥವಾ ಎರಡೂವರೆ ಶನಿ ದೆಸೆ ನಡೆಯುತ್ತಿದ್ದರೂ ಕೂಡಾ  ಅವರ ಮೇಲೆ ಯಾವುದೇ ರೀತಿಯ ಕೆಟ್ಟ ಪರಿಣಾಮ ಬೀರುವುದಿಲ್ಲ. 

ತುಲಾ ರಾಶಿಯನ್ನು ಶನಿದೇವನ ನೆಚ್ಚಿನ ರಾಶಿಗಳಲ್ಲಿ ಒಂದು ಎಂದು ಹೇಳಲಾಗುತ್ತದೆ. ಈ ರಾಶಿಯವರ ಮೇಲೆ ಶನಿಯ ಆಶೀರ್ವಾದ ಹೆಚ್ಚಿರುತ್ತದೆ. ಇವರ ಜೀವನದಲ್ಲಿ ಸಮಸ್ಯೆಗಳು ಎದುರಾದರೂ ಕೂಡಾ ಶೀಘ್ರವೇ ಪರಿಹಾರ ಕೂಡಾ ಆಗುತ್ತದೆ.   

ಶನಿದೇವನು ಮಕರ ರಾಶಿಯ ಅಧಿಪತಿ. ಆದ್ದರಿಂದ ಈ ರಾಶಿಯವರ ಮೇಲೆ ಶನಿಯ ಆಶೀರ್ವಾದ ಹೆಚ್ಚಿರುತ್ತದೆ. ಶನಿದೇವನ ಕೃಪೆಯಿಂದ  ಈ ರಾಶಿಯವರ  ಜೀವನದಲ್ಲಿ ಸಂಪತ್ತು, ವೈಭವಕ್ಕೆ ಎಂದೂ ಕೊರತೆಯಾಗದಂತೆ ಕಾಯುತ್ತಿರುತ್ತಾನೆ.  ಎಂಥ ಸನ್ನಿವೇಶ ಬಂದರೂ ಇವರ ಮೇಲೆ ಶನಿ ದೇವನ ಆಶೀರ್ವಾದ ಇದ್ದೇ ಇರುತ್ತದೆ.   

ಶನಿ ದೇವನ ಅಧಿಪತ್ಯದ ಎರಡನೇ ರಾಶಿ ಕುಂಭ. ಈ ರಾಶಿಯವರು ಜೀವನದಲ್ಲಿ ಯಶಸ್ವಿಯಾಗಲು ಹೆಚ್ಚು ಕಷ್ಟಪಡಬೇಕಾಗಿಲ್ಲ. ಶನೀಶ್ವರನ ಆಶೀರ್ವಾದದಿಂದ ಕುಂಭ ರಾಶಿಯವರು ತುಂಬಾ ಅದೃಷ್ಟವಂತರು. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link