ಶನಿ ದೇವನ ಅಚ್ಚುಮೆಚ್ಚಿನ ರಾಶಿಗಳಿವು, ಇವರ ಬದುಕಿನಲ್ಲಿ ಬರೀ ಯಶಸ್ಸನ್ನಷ್ಟೇ ನೀಡ್ತಾನೆ ಕರ್ಮಫಲದಾತ
ಜ್ಯೋತಿಷ್ಯದಲ್ಲಿ ಅತ್ಯಂತ ನಿಧಾನವಾಗಿ ಚಲಿಸುವ ಗ್ರಹ ಶನಿ ಎರಡೂವರೆ ವರ್ಷಗಳಿಗೊಮ್ಮೆ ರಾಶಿಚಕ್ರವನ್ನು ಬದಲಾಯಿಸುತ್ತಾನೆ. ಸದ್ಯ ಕುಂಭ ರಾಶಿಯಲ್ಲಿರುವ ಶನಿ 2025ರ ಮಾರ್ಚ್ ತಿಂಗಳಿನಲ್ಲಿ ಮೀನ ರಾಶಿಗೆ ಪ್ರವೇಶಿಸುತ್ತಾನೆ.
ಜ್ಯೋತಿಷ್ಯದಲ್ಲಿ ಕರ್ಮಫಲದಾತ ಎಂದು ಕರೆಯಲ್ಪಡುವ ಶನಿ ಎಲ್ಲಾ ಸಮಯದಲ್ಲೂ ಕೆಲವು ರಾಶಿಯವರ ಮೇಲೆ ವಿಶೇಷ ಕೃಪೆಯನ್ನು ತೋರುತ್ತಾನೆ.
ಧಾರ್ಮಿಕ ಜ್ಯೋತಿಷ್ಯದ ಪ್ರಕಾರ, ದ್ವಾದಶ ರಾಶಿಗಳಲ್ಲಿ ನಾಲ್ಕು ರಾಶಿಗಳನ್ನು ಶನಿಯ ನೆಚ್ಚಿನ ರಾಶಿಗಳು ಎನ್ನಲಾಗುತ್ತದೆ.
ಶನಿಯ ಅತ್ಯಂತ ಪ್ರಿಯ ರಾಶಿಗಳಲ್ಲಿ ತುಲಾ ರಾಶಿ ಮೊದಲ ರಾಶಿ. ಶನಿ ಕೃಪೆಯಿಂದ ಇವರ ಬದುಕಿನಲ್ಲಿ ಬೆಟ್ಟದಂತ ಸಮಸ್ಯೆಯೂ ಮಂಜಿನಂತೆ ಕರಗುತ್ತದೆ.
ಗುರು ಅಧಿಪತಿ ರಾಶಿಯಾದ ಧನು ರಾಶಿಯನ್ನು ಸಹ ಶನಿಯ ನೆಚ್ಚಿನ ರಾಶಿಗಳಲ್ಲಿ ಒಂದೆಂದು ಎಣಿಸಲಾಗಿದೆ. ಶನಿ ದಯೆಯಿಂದ ಇವರು ತಮ್ಮ ಜೀವನದಲ್ಲಿ ಅಪಾರ ಯಶಸ್ಸನ್ನು ಪಡೆಯುತ್ತಾರೆ.
ತನ್ನದೇ ರಾಶಿಚಕ್ರ ಚಿಹ್ನೆಯಾದ ಮಕರ ರಾಶಿಯೆಂದರೆ ಶನಿ ಮಹಾತ್ಮನಿಗೆ ಬಲು ಪ್ರೀತಿ. ಹಾಗಾಗಿಯೇ ಸಾಡೇ ಸಾತಿ, ಧೈಯಾ ಕಾಲದಲ್ಲೂ ಈ ರಾಶಿಯವರಿಗೆ ಶನಿ ಹೆಚ್ಚು ಬಾಧಿಸುವುದಿಲ್ಲ.
ಕೆಲಸದಲ್ಲಿ ಪ್ರಾಮಾಣಿಕರಾಗಿರುವ ಈ ರಾಶಿಯವರ ಕಂಡರೂ ಶನಿಗೆ ಎಲ್ಲಿಲ್ಲದ ಪ್ರೀತಿ. ಹಾಗಾಗಿಯೇ, ಇವರ ಪ್ರತಿ ಹೆಜ್ಜೆಯಲ್ಲೂ ಕೈ ಹಿಡಿದು ನಡೆಸುವ ಕರ್ಮಫಲದಾತ ಇವರಿಗೆ ಎಂದಿಗೂ ಯಾವುದಕ್ಕೂ ಕೊರತೆಯಾಗದಂತೆ ಕಾಪಾಡುತ್ತಾನೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.