ಈ ರಾಶಿಯವರನ್ನು ಯಾವುದೇ ಕಾರಣಕ್ಕೂ ಸೋಲಲು ಬಿಡುವುದಿಲ್ಲ ಶನಿದೇವ ! ಹೆಜ್ಜೆ ಹೆಜ್ಜೆಗೂ ನೀಡುತ್ತಾನೆ ಸಾಥ್
ಶನಿದೇವನಿಗೆ ಮೂರು ರಾಶಿಯವರೆಂದರೆ ಅತ್ಯಂತ ಪ್ರಿಯ ಎಂದು ಪರಿಗಣಿಸಲಾಗುತ್ತದೆ. ಆ ರಾಶಿಗಳೆಂದರೆ ಮಕರ ರಾಶಿ, ಕುಂಭ ರಾಶಿ ಮತ್ತು ತುಲಾ ರಾಶಿ. ಶನಿ ದೇವ ಮಕರ ಮತ್ತು ಕುಂಭ ರಾಶಿಯ ಅಧಿಪತಿ. ಮತ್ತೊಂದೆಡೆ, ತುಲಾವನ್ನು ಶನಿಯ ನೆಚ್ಚಿನ ರಾಶಿ ಎಂದು ಕರೆಯಲಾಗುತ್ತದೆ.
ಮೀನ ಮತ್ತು ಧನು ರಾಶಿಯ ಮೇಲೂ ಶನಿದೇವನ ವಿಶೇಷ ಕೃಪೆ ಇರುತ್ತದೆ. ಈ ಎರಡೂ ರಾಶಿಗಳ ಅಧಿಪತಿ ದೇವಗುರು ಗುರು ಅಂದರೆ ಶನಿಯ ಮಿತ್ರ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿಯು ಯಾವುದೇ ಸ್ಥಿತಿಯಲ್ಲಿದ್ದರೂ ಮಕರ, ಕುಂಭ, ತುಲಾ ರಾಶಿಯವರನ್ನು ಅಷ್ಟಾಗಿ ಕಾಡುವುದಿಲ್ಲ.
ತುಲಾ ರಾಶಿಯು ಶನಿದೇವನ ನೆಚ್ಚಿನ ರಾಶಿಗಳಲ್ಲಿ ಒಂದಾಗಿದೆ. ತುಲಾ ರಾಶಿಯವರ ಮೇಲೆ ಸದಾ ಶನಿ ದೇವನ ಕೃಪೆ ಇರುತ್ತದೆ. ಈ ರಾಶಿಯವರ ಮೇಲೆ ಶನಿ ದೇವ ದಯಾ ದೃಷ್ಟಿಯನ್ನೇ ಹರಿಸುತ್ತಿರುತ್ತಾನೆ. ಶನಿದೇವನ ಅನುಗ್ರಹದಿಂದ ಈ ರಾಶಿಯವರು ಜೀವನದಲ್ಲಿ ಎಲ್ಲಾ ರೀತಿಯ ಸಂತೋಷವನ್ನು ಪಡೆಯುತ್ತಾರೆ.
ಶನಿದೇವನಿಗೆ ಮಕರ ರಾಶಿ ಕೂಡಾ ತುಂಬಾ ಪ್ರಿಯ. ಈ ರಾಶಿಯ ಅಧಿಪತಿ ಶನಿದೇವ. ಮಕರ ರಾಶಿಯವರ ಜಾತಕದಲ್ಲಿ ಶನಿ ಶುಭ ಸ್ಥಳದಲ್ಲಿದ್ದಾಗ, ಈ ರಾಶಿಯವರು ತಮ್ಮ ಕೆಲಸದ ಕ್ಷೇತ್ರದಲ್ಲಿ ಉತ್ತಮ ಯಶಸ್ಸು ಪಡೆಯುತ್ತಾರೆ.
ಶನಿದೇವನು ಕುಂಭ ರಾಶಿಯ ಅಧಿಪತಿಯೂ ಹೌದು. ಶನಿಯ ವಿಶೇಷ ಕೃಪೆಯಿಂದ ಕುಂಭ ರಾಶಿಯವರಿಗೆ ಜೀವನದಲ್ಲಿ ಎಂದೂ ಹಣದ ಕೊರತೆ ಎದುರಾಗುವುದಿಲ್ಲ. ಈ ಜನರು ಕಡಿಮೆ ಪ್ರಯತ್ನದಿಂದ ದೊಡ್ಡ ಯಶಸ್ಸನ್ನು ಪಡೆಯುತ್ತಾರೆ. (ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)