Shani Dosh Upay: ಜಾತಕದಲ್ಲಿ ಶನಿ ದೋಷ ಪರಿಹಾರಕ್ಕಾಗಿ 5 ಸಿಂಪಲ್ ಸಲಹೆ
ಜ್ಯೋತಿಷ್ಯ ಶಾಸ್ತ್ರದಲ್ಲಿ, ಶನಿದೇವನನ್ನು ನ್ಯಾಯದ ದೇವರು, ಕರ್ಮಫಲದಾತ ಎಂದು ಕರೆಯಲಾಗುತ್ತದೆ. ಶನಿಯು ಪ್ರತಿಯೊಬ್ಬ ವ್ಯಕ್ತಿಗೂ ಅವರ ಕರ್ಮಗಳಿಗೆ ತಕ್ಕಂತೆ ಫಲ ನೀಡುತ್ತಾನೆ. ಶನಿ ಯಾರಿಗಾದರೂ ಶಿಕ್ಷಿಸುವಾಗ ಯಾವುದೇ ರೀತಿಯ ಕರುಣೆ ತೋರುವುದಿಲ್ಲ. ಹಾಗಾಗಿಯೇ ಶನಿಯ ಹೆಸರು ಕೇಳಿದರೆ ಕೆಲವರು ಹೆದರುತ್ತಾರೆ.
ಯಾವುದೇ ವ್ಯಕ್ತಿಯ ಜಾತಕದಲ್ಲಿ ಶನಿ ದೇವ ಶುಭ ಸ್ಥಾನದಲ್ಲಿದ್ದರೆ ಆ ವ್ಯಕ್ತಿ ಶನಿದೇವನ ಆಶೀರ್ವಾದದಿಂದ ಜೀವನದಲ್ಲಿ ಸಂಪತ್ತು, ಆಸ್ತಿ ಮತ್ತು ಸಂತೋಷವನ್ನು ಪಡೆಯುತ್ತಾನೆ. ಅದೇ ರೀತಿ ವ್ಯಕ್ತಿಯ ಜಾತಕದಲ್ಲಿ ಶನಿ ಕೆಟ್ಟ ಸ್ಥಾನದಲ್ಲಿದ್ದರೆ ಅಂತಹ ವ್ಯಕ್ತಿ ಜೀವನದಲ್ಲಿ ನಾನಾ ರೀತಿಯ ಸಂಕಷ್ಟಗಳನ್ನು ಎದುರಿಸುತ್ತಾನೆ ಎಂದು ಹೇಳಲಾಗುತ್ತದೆ.
ಯಾವುದೇ ವ್ಯಕ್ತಿಯ ಜಾತಕದಲ್ಲಿ ಶನಿ ದೋಷವಿದ್ದಾಗ ಕೆಲವು ಸರಳ ಪರಿಹಾರಗಳನ್ನು ಅನುಸರಿಸುವ ಮೂಲಕ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ. ಅಂತಹ 5 ಸರಳ ಪರಿಹಾರಗಳ ಬಗ್ಗೆ ತಿಳಿಯೋಣ...
ಯಾವುದೇ ರೀತಿಯ ಕಠಿಣ ಸಂದರ್ಭಗಳಲ್ಲಿಯೂ ಸಹ, ಎಲ್ಲಾ ಕೆಲಸಗಳನ್ನು ನಿಯಮಗಳ ಪ್ರಕಾರ ಮಾಡಬೇಕು. ಏಕೆಂದರೆ ಶನಿ ದೇವ್ ಎಂದಿಗೂ ಶಾರ್ಟ್ಕಟ್ಗಳನ್ನು ಇಷ್ಟಪಡುವುದಿಲ್ಲ. ಆದರೆ, ಶನಿ ದೋಷ ಇದ್ದಾಗಿಯೂ, ಶ್ರಮವಹಿಸಿ ದುಡಿಯುವವರಿಗೆ ಶನಿ ಆಶೀರ್ವಾದವನ್ನುನೀಡುತ್ತಾನೆ.
ಜಾತಕದಲ್ಲಿ ಶನಿ ದೋಷ ಇರುವವರು ಹನುಮಂತನನ್ನು ಭಕ್ತಿಯಿಂದ ಪೂಜಿಸುವುದರಿಂದ ಪರಿಹಾರವನ್ನು ಪಡೆಯಬಹುದು.
ಯಾರೊಂದಿಗೂ ಸೇಡು, ಪ್ರತೀಕಾರವನ್ನು ತೋರಬೇಡಿ. ಅಹಂಕಾರದಿಂದ ವರ್ತಿಸಬೇಡಿ. ಇದರಿಂದ ಶನಿಯ ದಯೆಗೆ ಪಾತ್ರರಾಗಬಹುದು.
ದಾನ ಮಾಡುವುದರಿಂದ ಅದರಲ್ಲೂ ಅಗತ್ಯವಿರುವವರಿಗೆ ಕಪ್ಪು ವಸ್ತುಗಳನ್ನು ದಾನ ಮಾಡುವುದರಿಂದ ಶನಿಯ ಆಶೀರ್ವಾದವನ್ನು ಪಡೆಯಬಹುದು. ಜಾತಕದಲ್ಲಿ ಶನಿ ದೋಷವೂ ನಿವಾರಣೆಯಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕಪ್ಪು ನಾಯಿಗೆ ಆಹಾರ ನೀಡುವುದರಿಂದಲೂ ಜಾತಕದಲ್ಲಿ ಶನಿ ದೋಷವನ್ನು ನಿವಾರಿಸಬಹುದು ಎಂದು ಹೇಳಲಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.