ವಕ್ರ ನಡೆಯಲ್ಲಿ ಶತಭಿಶಾ ನಕ್ಷತ್ರ ಪ್ರವೇಶಿಸಿದ ಶನಿ, ಐಶ್ವರ್ಯ ಲಕ್ಷ್ಮಿಯ ಕೃಪೆಯಿಂದ ಈ ಜನರಿಗೆ ಭಾರಿ ಧನಾಗಮನ ಯೋಗ!
ವಕ್ರ ನಡೆಯಲ್ಲಿ ಶನಿ ಮಹಾರಾಜ ಶತಭಿಶಾ ನಕ್ಷತ್ರವನ್ನು ಪ್ರವೇಶಿಸಿದ್ದಾನೆ. ಶನಿಯ ಈ ನಡೆ ಪರಿವರ್ತನೆ ಒಟ್ಟು 3 ರಾಶಿಗಳ ಜಾತಕದವರಿಗೆ ಆಕಸ್ಮಿಕ ಧನಲಾಭ ನೀಡಲಿದ್ದು. ಇದರಿಂದ ಅವರಿಗೆ ಭಾಗ್ಯೋದಯ ಹಾಗೂ ಉನ್ನತಿಯ ಯೋಗ ಪ್ರಾಪ್ತಿಯಾಗಲಿದೆ.
ಮೇಷ ರಾಶಿ: ಶನಿಯ ಶತಭಿಶಾ ನಕ್ಷತ್ರ ಪ್ರವೇಶ ನಿಮ್ಮ ಪಾಲಿಗೆ ಅತ್ಯಂತ ಶುಭ ಸಾಬೀತಾಗಲಿದೆ. ಇದರಿಂದ ನಿಮ್ಮ ಆದಾಯದಲ್ಲಿ ಭಾರಿ ಹೆಚ್ಚಳವಾಗಲಿದೆ. ನಿಮ್ಮ ಎಲ್ಲಾ ಯೋಜನೆಗಳಿಂದ ನಿಮಗೆ ಲಾಭ ಸಿಗಲಿದೆ. ಒಂದು ವೇಳೆ ನೀವು ವ್ಯಾಪಾರಿಗಳಾಗಿದ್ದರೆ, ಈ ಅವಧಿಯಲ್ಲಿ ಉತ್ತಮ ಲಾಭ ನಿಮ್ಮದಾಗಲಿದೆ. ನೌಕರವರ್ಗದ ಜನರಿಗೆ ವೃತ್ತಿಯಲ್ಲಿ ಹೊಸ ಹೊಸ ಅವಕಾಶಗಳು ಪ್ರಾಪ್ತಿಯಾಗಲಿವೆ. ಹಳೆ ಹೂಡಿಕೆಗಳಿಂದ ನಿಮಗೆ ಲಾಭ ಸಿಗಲಿದೆ. ಈ ಅವಧಿಯಲ್ಲಿ ನೀವು ಆಸ್ತಿಪಾಸ್ತಿ ಖರೀದಿಸುವ ಸಂಭವನೀಯತೆಗಳು ಹೆಚ್ಚಾಗಿವೆ. ಷೇರುಪೇಟೆ, ಲಾಟರಿ ವ್ಯವಹಾರಗಳಲ್ಲಿ ಹಣ ತೊಡಗಿಸುವವರಿಗೂ ಕೂಡ ಆರ್ಥಿಕ ಲಾಭ ಪ್ರಾಪ್ತಿಯಾಗುವ ಸಾಧ್ಯತೆ ಇದೆ.
ಮಿಥುನ ರಾಶಿ: ಶನಿಯ ಶತಭಿಶಾ ನಕ್ಷತ್ರ ಪ್ರವೇಶ ಮಿಥುನ ಜಾತಕದವರ ಭಾಗ್ಯೋದಯಕ್ಕೆ ಕಾರಣವಾಗಲಿದೆ. ಈ ಅವಧಿಯಲ್ಲಿ ನಿಮ್ಮ ಸಾಹಸ-ಪರಾಕ್ರಮ ಹೆಚ್ಚಾಗಲಿದೆ. ವಿದೇಶಕ್ಕೆ ಸಂಬಂಧಿಸಿದ ವ್ಯಾಪಾರ ಮಾಡುವ ಜನರಿಗೆ ಈ ಅವಧಿಯಲ್ಲಿ ಸಾಕಷ್ಟು ಲಾಭ ಸಿಗಲಿದೆ. ವ್ಯಾಪಾರಕ್ಕಾಗಿ ಯಾತ್ರೆ ಸಂಭವಿಸುವ ಸಾಧ್ಯತೆ ಇದ್ದು, ಅದರಿಂದ ನಿಮಗೆ ಉತ್ತಮ ಆರ್ಥಿಕ ಲಾಭ ಸಿಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ನಿಮಗೆ ಸಹೋದರ-ಸಹೋದರಿಯರ ಬೆಂಬಲ ಸಿಗಲಿದೆ. ಇನ್ನೊಂದೆಡೆ ನಿಮ್ಮ ರಾಶಿಯ ರಾಶ್ಯಾಧಿಪ ಬುಧನಾಗಿರುವ ಕಾರಣ ಬುಧ ಹಾಗೂ ಶನಿಯ ಮಧ್ಯೆ ಮಿತ್ರಭಾವದ ಸಂಬಂಧವಿದೆ. ಹೀಗಾಗಿ ಇದರಿಂದ ನಿಮಗೆ ಸಾಕಷ್ಟು ಲಾಭ ಸಿಗಲಿದೆ.
ಸಿಂಹ ರಾಶಿ: ಶನಿಯ ಶತಭಿಶಾ ನಕ್ಷತ್ರ ಪ್ರವೇಶ ನಿಮ್ಮ ಪಾಲಿಗೆ ಸಾಕಷ್ಟು ಲಾಭಪ್ರದ ಸಿದ್ಧ ಸಾಬೀತಾಗಲಿದೆ. ಏಕೆಂದರೆ ಶನಿ ನಿಮ್ಮ ಗೋಚರ ಜಾತಕದಲ್ಲಿ ಶಶ ರಾಜಯೋಗ ಕೂಡ ರೂಪಿಸಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಆದಾಯದಲ್ಲಿ ಅಪಾರ ಹೆಚ್ಚಳ ಸಂಭವಿಸುವ ಸಾಧ್ಯತೆ ಇದೆ. ಜೊತೆಗೆ ಕೆಲಸ-ವ್ಯಾಪಾರದ ವಿಸ್ತರಣೆಯಾಗುವ ಸಾಧ್ಯತೆ ಇದೆ. ನೌಕರವರ್ಗದ ಜನರಿಗೆ ವೃತ್ತಿಜೀವನದಲ್ಲಿ ಅತ್ಯುತ್ತಮ ಅವಕಾಶ ಸಿಗಲಿದೆ. ಈ ಅವಧಿಯಲ್ಲಿ ನಿಮಗೆ ನಿಮ್ಮ ಬಾಳಸಂಗಾತಿಯ ಸಂಪೂರ್ಣ ಬೆಂಬಲ ಇರಲಿದೆ. ಅವರ ಮಾಧ್ಯಮದಿಂದಲೂ ಕೂಡ ಧನಪ್ರಾಪ್ತಿಯಾಗುವ ಸಾಧ್ಯತೆ ಇದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)