ಜಾತಕದಲ್ಲಿ ಮೂಲ ನಕ್ಷತ್ರ ವಿಷ್ಕುಂಭ ಯೋಗ: ಈ ರಾಶಿಗೆ ಸದಾ ಇರಲಿದೆ ಶನಿದಯೆ-ಸಂಪತ್ತು, ಯಶಸ್ಸು, ಖ್ಯಾತಿಯ ಸುರಿಮಳೆ
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಗಳು ಮತ್ತು ನಕ್ಷತ್ರಪುಂಜಗಳ ಸ್ಥಾನವು ಕಾಲಕಾಲಕ್ಕೆ ಬದಲಾಗುತ್ತಲೇ ಇರುತ್ತದೆ. ಈ ಗ್ರಹಗಳ ಬದಲಾವಣೆಯಿಂದ ಅನೇಕ ಶುಭ ಮತ್ತು ಅಶುಭ ಯೋಗಗಳು ಉಂಟಾಗುತ್ತವೆ. ಇನ್ನು ಕಳೆದ ದಿನ ಅಂದರೆ ಆಗಸ್ಟ್ 26ರಂದು ಶನಿವಾರ ಬಹಳ ವಿಶೇಷವಾದ ಯೋಗ ರೂಪುಗೊಂಡಿದ.
ಚಂದ್ರನು ವೃಶ್ಚಿಕ ರಾಶಿಯಿಂದ ಧನು ರಾಶಿಗೆ ಚಲಿಸಿದಾಗ ಮೂಲ ನಕ್ಷತ್ರದೊಂದಿಗೆ ವಿಷಕುಂಭ ಯೋಗವು ರೂಪುಗೊಂಡಿದೆ. ಈ ಯೋಗದ ಶುಭ ಪರಿಣಾಮದಿಂದಾಗಿ ಶನಿದೇವನ ವಿಶೇಷ ಆಶೀರ್ವಾದ ದೊರೆಯಲಿದೆ.
ಕನ್ಯಾ ರಾಶಿ- ಕನ್ಯಾ ರಾಶಿಯವರಿಗೆ ವಿಷ್ಕುಂಭ ಯೋಗವು ತುಂಬಾ ಅದೃಷ್ಟವನ್ನು ತರಲಿದೆ. ಈ ರಾಶಿಯವರಿಗೆ ಶನಿದೇವನ ಆಶೀರ್ವಾದ ಸಿಗುತ್ತದೆ. ಉದ್ಯೋಗಿಗಳಿಗೆ ತುಂಬಾ ಒಳ್ಳೆಯದು. ಹೊಸ ವ್ಯವಹಾರವನ್ನು ಪ್ರಾರಂಭಿಸಲು ಬಯಸುವವರಿಗೆ ತುಂಬಾ ಶುಭವಾಗಿರುತ್ತದೆ.
ವೃಶ್ಚಿಕ ರಾಶಿ- ವೃಶ್ಚಿಕ ರಾಶಿಯವರಿಗೆ ಮೂಲ ನಕ್ಷತ್ರ ಮತ್ತು ವಿಷ್ಕುಂಭ ಯೋಗದ ಕಾರಣದಿಂದ, ಹಣದ ವ್ಯವಹಾರಗಳಲ್ಲಿ ಲಾಭವಿದೆ, ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.
ಧನು ರಾಶಿ- ಧನು ರಾಶಿಯವರಿಗೆ ಶನಿದೇವನ ಕೃಪೆಯಿಂದ ಸ್ಥಗಿತಗೊಂಡ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳುತ್ತವೆ. ಸಮಸ್ಯೆಗಳೆಲ್ಲಾ ದೂರವಾಗುತ್ತದೆ. ಆದಾಯ ಮತ್ತು ವೆಚ್ಚವನ್ನು ಸಮತೋಲನಗೊಳಿಸುವುದರಿಂದ, ಆರ್ಥಿಕ ಸ್ಥಿತಿಯು ಉತ್ತಮವಾಗಿರುತ್ತದೆ.
ಮಕರ ರಾಶಿ- ಮಕರ ರಾಶಿಯವರಿಗೆ ವಿಷ್ಕುಂಭ ಯೋಗವು ಉತ್ತಮವಾಗಿದೆ. ಸ್ಥಗಿತಗೊಂಡಿರುವ ಹಳೆಯ ಕಾಮಗಾರಿಗಳು ಪೂರ್ಣಗೊಳ್ಳಲಿವೆ. ಜೀವನದಲ್ಲಿ ಯಾವುದೇ ಸಮಸ್ಯೆ ಎದುರಾದರೆ ಮನೆಯವರ ನೆರವಿನಿಂದ ಪರಿಹಾರ ಸಿಗುತ್ತದೆ.
ಕುಂಭ- ಕುಂಭ ರಾಶಿಯವರಿಗೆ ವಿಶೇಷವಾಗಿ ಉದ್ಯೋಗದಲ್ಲಿರುವ ಜನರು ಒಳ್ಳೆಯ ಸುದ್ದಿ ಪಡೆಯಬಹುದು. ಸಂಬಳ ಹೆಚ್ಚಾಗಬಹುದು, ಸಂತೋಷವನ್ನು ಅನುಭವಿಸುವಿರಿ. ಜೀವನದಲ್ಲಿ ಯಾವುದೇ ಸಮಸ್ಯೆ ಇದ್ದರೆ ಅದು ಪರಿಹಾರವಾಗುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.