Shani Gochar 2023: ಹೊಸ ವರ್ಷದಲ್ಲಿ ಈ ರಾಶಿಯವರನ್ನು ಬೆಂಬಿಡದೆ ಕಾಡಲಿದ್ದಾನೆ ಶನಿ ದೇವ

Thu, 01 Dec 2022-2:07 pm,

ಮೀನ ರಾಶಿ:  2023ರ ಜನವರಿಯಲ್ಲಿ ಶನಿಯು ಕುಂಭ ರಾಶಿಯನ್ನು ಪ್ರವೇಶಿಸಿದ ಬಳಿಕ ಕುಂಭ ರಾಶಿಯವರಿಗೆ ಮೊದಲನೇ ಘಟ್ಟದ ಶನಿ ಸಾಡೇ ಸಾತಿ ಪ್ರಭಾವ ಆರಂಭವಾಗಲಿದೆ. ಇದರೊಂದಿಗೆ ಮೀನ ರಾಶಿಯ ಜನರು ಬಹಳಷ್ಟು ತೊಂದರೆಗಳನ್ನು ಎದುರಿಸಬೇಕಾಗಬಹುದು ಎಂದು ಹೇಳಲಾಗುತ್ತಿದೆ. 

ಮಿಥುನ ರಾಶಿ: ಹೊಸ ವರ್ಷದಲ್ಲಿ ಶನಿ ರಾಶಿ ಪರಿವರ್ತನೆಯ ಪರಿಣಾಮವಾಗಿ ಮಿಥುನ ರಾಶಿಯವರಿಗೆ ಸಾಡೇ ಸಾತಿ ಶನಿಯ ಎರಡನೇ ಘಟ್ಟ ಆರಂಭವಾಗಲಿದೆ. ಇದರ ಪ್ರಭಾವದಿಂದಾಗಿ ಮಿಥುನ ರಾಶಿಯ ಜನರು ಉದ್ಯೋಗ ವ್ಯವಹಾರಗಳಲ್ಲಿ ಭಾರೀ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಇದನ್ನು ತಪ್ಪಿಸಲು ಯಾವುದೇ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಾಗ ಬಹಳ ಜಾಗರೂಕರಾಗಿರಿ.

ಮಕರ ರಾಶಿ:  2023ರ ಜನವರಿಯಲ್ಲಿ ಶನಿಯ ಸಂಚಾರದಿಂದ ಮಕರ ರಾಶಿಯವರಿಗೆ ಸಾಡೇ ಸಾತಿ ಶನಿಯ ಮೂರನೇ ಘಟ್ಟ ಆರಂಭವಾಗಲಿದೆ. ಇದರಿಂದ ಈ ರಾಶಿಯವರಿಗೆ ಆರ್ಥಿಕ ನಷ್ಟದ ಜೊತೆಗೆ ಹಲವು ರೀತಿಯ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳು ಕೂಡ ಕಾಡಬಹುದು. 

ಕರ್ಕಾಟಕ ರಾಶಿ:   ಹೊಸ ವರ್ಷದಲ್ಲಿ ಕುಂಭ ರಾಶಿಗೆ ಶನಿಯ ಪ್ರವೇಶವು ಕರ್ಕಾಟಕ ರಾಶಿಯವರಿಗೆ ಹೆಚ್ಚು ನಕಾರಾತ್ಮಕ ಪರಿಣಾಮವನ್ನು ಉಂಟು ಮಾಡಲಿದೆ. ಈ ಸಮಯದಲ್ಲಿ ಕರ್ಕಾಟಕ ರಾಶಿಯ ಜನರಿಗೆ ಶನಿಯ ಧೈಯಾ ಪ್ರಭಾವದಿಂದ ಆರ್ಥಿಕ ಸಂಕಷ್ಟಗಳು ಎದುಗಾರಬಹುದು. ಮಾತ್ರವಲ್ಲ, ಆರೋಗ್ಯವೂ ಹದಗೆಡಬಹುದು.

ವೃಶ್ಚಿಕ ರಾಶಿ: ಜನವರಿಯಲ್ಲಿ ಶನಿ ರಾಶಿ ಪರಿವರ್ತನೆಯಿಂದ ವೃಶ್ಚಿಕ ರಾಶಿಯ ಜನರಿಗೆ ಶನಿಯ ಧೈಯಾ ಪ್ರಭಾವ ಶುರುವಾಗಲಿದೆ. ಈ ಸಮಯದಲ್ಲಿ ವೃಶ್ಚಿಕ ರಾಶಿಯವರು ಉದ್ಯೋಗ-ವ್ಯವಹಾರಗಳಲ್ಲಿ ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ನಿಮ್ಮ ಕೋಪವನ್ನು ನಿಯಂತ್ರಿಸಿ, ವಾದ-ವಿವಾದಗಳಿಂದ ದೂರ ಉಳಿಯುವುದರಿಂದ ಕೊಂಚ ರಿಲೀಫ್ ಪಡೆಯಬಹುದು.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಗಳನ್ನು ಆಧರಿಸಿವೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link