ಕುಮಾರಾವಸ್ಥೆಯಲ್ಲಿ ಶನಿ ಸಂಚಾರ ಆರಂಭ, ಶ್ರೀಹರಿ ಲಕ್ಷ್ಮಿ ಕೃಪೆಯಿಂದ ಈ ಜನರ ಮೇಲೆ ಭಾರಿ ಕನಕವೃಷ್ಟಿ!

Tue, 21 Nov 2023-2:10 pm,

ಮೇಷ ರಾಶಿ: ನಿಮ್ಮ ರಾಶಿಯ ರಾಷ್ಯಾಧಿಪನಾಗಿರುವ ಮಂಗಳ ನವೆಂಬರ್ 16, 2023ರಂದು ವೃಶ್ಚಿಕ ರಾಶಿಗೆ ಪ್ರವೇಶಿಸಿದ್ದಾನೆ ಮತ್ತು ಆತನ ದೃಷ್ಟಿ ಶನಿಯ ಮೇಲೆ ಇರಲಿದೆ. ಹೀಗಾಗಿ ಶನಿಯ ಕುಮಾರಾವಸ್ಥೆ ನಿಮ್ಮ ಪಾಲಿಗೆ ಅತ್ಯಂತ ಶುಭ ಸಾಬೀತಾಗಲಿದೆ. ಈ ಅವಧಿಯಲ್ಲಿ ನಿಮ್ಮ ಆದಾಯ ಹೆಚ್ಚಾಗಲಿದ್ದು. ಕೆಲಸ ಕಾರ್ಯಗಳಲ್ಲಿ ಕಾರ್ಯಸಿದ್ಧಿ ಪ್ರಾಪ್ತಿಯಾಗಲಿದೆ. ಶನಿ ಗ್ರಹಕ್ಕೆ ಸಂಬಂಧಿಸಿದ ಕೆಲಸ ಕಾರ್ಯಗಳನ್ನು ಮಾಡುವವರಿಗೆ ಅತ್ಯಂತ ಲಾಭ ಉಂಟಾಗಲಿದೆ. ಒಂದು ವೇಳೆ ನಿಮ್ಮ ಕೆಲಸ ಅಥವಾ ವ್ಯಾಪಾರ ವಿದೇಶಕ್ಕೆ ಸಂಬಂಧಿಸಿದ್ದಾಗಿದ್ದರೆ, ನಿಮಗೆ ಉತ್ತಮ ಲಾಭ ಉಂಟಾಗಲಿದೆ. 

ಸಿಂಹ ರಾಶಿ: ಶನಿ ನಿಮ್ಮ ಗೋಚರ ಜಾತಕದ ದಾಂಪತ್ಯ ಜೀವನದ ಭಾವದಲ್ಲಿ ಕುಮಾರಾವಸ್ಥೆಯಲ್ಲಿ ಸಂಚರಿಸುತ್ತಿದ್ದಾನೆ. ಇದಲ್ಲದೆ ಆತ ಅಲ್ಲಿ ಶಶ ಮಹಾಪುರುಷ ರಾಜಯೋಗ ಕೂಡ ನಿರ್ಮಿಸಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಪಾರ್ಟ್ನರ್ಶಿಪ್ ವ್ಯವಹಾರದಲ್ಲಿ ಲಾಭ ಸಿಗಲಿದೆ. ವಿವಾಹಿತರ ವೈವಾಹಿಕ ಜೀವನ ಸುಖದಿಂದ ಕೂಡಿರಲಿದೆ. ಅವಿವಾಹಿತರಿಗೆ ವಿವಾಹ ಪ್ರಸ್ತಾಪ ಬರುವ ಸಾಧ್ಯತೆ ಇದೆ. 

ಮಿಥುನ ರಾಶಿ: ನಿಮ್ಮ ರಾಶಿಗೆ ಬುಧ ಅಧಿಪತಿ, ಶನಿಯ ಜೊತೆಗೆ ಬುಧನ ಸ್ನೇಹಭಾವದ ಸಂಬಂಧವಿದೆ. ಇದಲ್ಲದೆ ಶನಿ ನಿಮ್ಮ ಜಾತಕದ ಭಾಗ್ಯ ಸ್ಥಾನದಲ್ಲಿ ಸಂಚರಿಸುತ್ತಿದ್ದಾನೆ. ಇದರಿಂದ ನಿಮ್ಮ ಭಾಗ್ಯೋದಯವಾಗುವ ಎಲ್ಲಾ ಸಂಕೇತಗಳಿವೆ. ಧರ್ಮ-ಕರ್ಮ ಕಾರ್ಯಗಳಲ್ಲಿ ನಿಮ್ಮ ಸದಭಿರುಚಿ ಹೆಚ್ಚಾಗಲಿದೆ. ಆಕಾಂಕ್ಷೆಗಳು ಈಡೇರಲಿವೆ. ದೇಶ-ವಿದೇಶಗಳ ಯಾತ್ರೆಯಿಂದ ಲಾಭ ಸಿಗಲಿದೆ. ವಿದೇಶದೊಂದಿಗೆ ವ್ಯಾಪಾರ ಸಂಬಂಧ ಹೊಂದಿದವರಿಗೆ ಲಾಭ ಸಿಗಲಿದೆ. 

ಮಕರ ರಾಶಿ: ಶನಿಯ ಕುಮಾರಾವಸ್ಥೆಯಲ್ಲಿನ ಸಂಚಾರ ಆರ್ಥಿಕವಾಗಿ ನಿಮಗೆ ಲಾಭದಾಯಕ ಸಾಬೀತಾಗಲಿದೆ. ಏಕೆಂದರೆ ಒಂದು ಶನಿ ನಿಮ್ಮ ರಾಶಿಗೆ ಅಧಿಪತಿಯಾಗಿದ್ದಾನೆ ಮತ್ತು ಎರಡನೆಯದಾಗಿ ಆತ ನಿಮ್ಮ ಗೋಚರ ಜಾತಕದ ಧನ ಭಾವದಲ್ಲಿ ಸಂಚರಿಸುತ್ತಿದ್ದಾನೆ. ಇದರಿಂದ ನಿಮಗೆ ಕಾಲಕಾಲಕ್ಕೆ ಧನಲಾಭ ಉಂಟಾಗಲಿದೆ. ಕೆಲಸ ಕಾರ್ಯಗಳಲ್ಲಿ ಕಾರ್ಯಸಿದ್ಧಿ ಪ್ರಾಪ್ತಿಯಾಗಲಿದೆ. ಕೌಟುಂಬಿಕ ಕಲಹಗಳು ದೂರಾಗಲಿವೆ. ನೌಕರವರ್ಗದ ಜನರಿಗೆ ಈ ಗೋಚರ ಲಾಭದಾಯಕ ಸಾಬೀತಾಗಲಿದೆ. ಪ್ರಮೋಷನ್-ಇಂಕ್ರಿಮೆಂಟ್ ಭಾಗ್ಯ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ವ್ಯಾಪಾರದಲ್ಲಿಯೂ ಕೂಡ ಉತ್ತಮ ಲಾಭ ನಿಮ್ಮದಾಗಲಿದೆ. ಘನತೆ ಗೌರವ ಪ್ರಾಪ್ತಿಯಾಗಲಿದೆ. 

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ZEENEWS TRENDING STORIES

By continuing to use the site, you agree to the use of cookies. You can find out more by Tapping this link