Shani Gochar 2023: ನಾಳೆಯಿಂದ ಈ 5 ರಾಶಿಗಳ ಜನರಿಗೆ ಶನಿಯ ಕಾಟ ಆರಂಭ, ಈ ಉಪಾಯ ಅನುಸರಿಸಿ

Mon, 16 Jan 2023-9:06 pm,

1. ಜನವರಿ 17 ರಂದು ಮಕರ ರಾಶಿಯಿಂದ ಕುಂಭ ರಾಶಿಗೆ ಶನಿಯ ಸ್ಥಾನಪಲ್ಲಟದ ನಂತರ, ಮಕರ, ಕುಂಭ, ಮೀನ ರಾಶಿಗಳ ಮೇಲೆ ಸಾಡೇಸಾತಿಯ ಪ್ರಭಾವ ಕಂಡುಬರಲಿದೆ. ಮತ್ತೊಂದೆಡೆ, ಮಿಥುನ ಮತ್ತು ತುಲಾ ರಾಶಿಯವರು ಶನಿಯ ಎರಡೂವರೆ ವರ್ಷಗಳ ಕಾಟದಿಂದ ಮುಕ್ತರಾಗಲಿದ್ದಾರೆ. ಇದಲ್ಲದೆ, ವೃಶ್ಚಿಕ ಮತ್ತು ಕರ್ಕ ರಾಶಿಯವರಿಗೆ ಎರಡೂವರೆ ವರ್ಷಗಳ ಕಾಟ ಶುರುವಾಗಲಿದೆ.  

2. ಸಾಡೆಸಾತಿ ಹಾಗೂ ಎರಡೂವರೆ ವರ್ಷಗಳ ಕಾಟ ಇರುವವರು ಯಾವ ಉಪಾಯ ಮಾಡಬೇಕು?: ಶನಿಯ ಹೊಡೆತದಿಂದ ತಪ್ಪಿಸಿಕೊಳ್ಳಲು ಬಯಸುವವರು ಶನಿವಾರ ಉಪವಾಸ ಕೈಗೊಳ್ಳಬೇಕು. ದೇವಾಧಿದೇವ ಮಹಾದೇವನಿಗೆ ಪೂಜೆ ಸಲ್ಲಿಸಬೇಕು. ಕಪ್ಪುವಸ್ತ್ರ, ಕಪ್ಪು ಉದ್ದಿನ ಬೇಳೆ ಹಾಗೂ ಸಪ್ತಧಾನ್ಯಗಳನ್ನು ದಾನವಾಗಿ ಕೊಡಬೇಕು.  

3. ಶನಿವಾರ ಹಾಲಿನಲ್ಲಿ ನೀರನ್ನು ಬೆರೆಸಿ ಅಶ್ವತ್ಥ ಮರಕ್ಕೆ ಅರ್ಪಿಸಬೇಕು. ಸಾಡೆಸಾತಿ ಹಾಗೂ ಎರಡೂವರೆ ವರ್ಷಗಳ ಕಾಟ ಇರುವವರು ಕೋಕಿಲಾ ವನ ಅಥವಾ ಶನಿಧಾಮದ ಪ್ರವಾಸ ಕೈಗೊಳ್ಳಬೇಕು.  

4. ಶನಿವಾರದಿಂದ ಆರಂಭಿಸಿ ಸತತ 43 ದಿನಗಳವರೆಗೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸಿಂಧೂರ, ಮಲ್ಲಿಗೆ ಎಣ್ಣೆ. ಲಡ್ಡೂ ಹಾಗೂ ತೆಂಗಿನ ಕಾಯಿಯನ್ನು ಅರ್ಪಿಸಬೇಕು. ಇದಲ್ಲದೆ ಸುಂದರಕಾಂಡ, ಶ್ರೀಹನುಮಾನಾಷ್ಟಕ ಹಾಗೂ ಹನುಮಾನ ಚಾಲಿಸಾ ಪಠಿಸಬೇಕು.  

5. ಸಾಡೆಸಾತಿ-ಎರಡೂವರೆ ವರ್ಷ ಕಾಟ ಇರುವವರು ಈ ಕೆಲಸಗಳನ್ನು ಮಾಡುವುದನ್ನು ತಪ್ಪಿಸಬೇಕು: ಮರೆತೂ ಕೂಡ ಮಂಗಳವಾರ ಕಪ್ಪು ವಸ್ತ್ರ ಧರಿಸಬೇಡಿ. ಶನಿವಾರ ಕಪ್ಪು ಬಟ್ಟೆ ಧರಿಸಬಹುದು ಆದರೆ, ಖರೀದಿಯನ್ನು ತಪ್ಪಿಸಿ.  

6. ಶನಿ ಸಾಡೆಸಾತಿ ಅಥವಾ ಎರಡೂವರೆ ವರ್ಷ ಕಾಟ ಇರುವವರು, ಮದ್ಯ-ಮಾಂಸದಿಂದ ದೂರ ಇರಬೇಕು. ಒಂದು ವೇಳೆ ನಿಮ್ಮಿಂದ ಬಿಡಲು ಆಗುವುದಿಲ್ಲ ಎಂದರೆ ಶನಿವಾರ ಮತ್ತು ಮಂಗಳವಾರ ಎರಡು ದಿನ ತಪ್ಪಿಸಲು ಪ್ರಯತ್ನಿಸಿ.  

7. ಸಾಡೆಸಾತಿ ಅಥವಾ ಎರಡೂವರೆ ವರ್ಷ ಕಾಟ ಇರುವಾಗ ವೃದ್ಧರನ್ನು ಅವಮಾನಿಸಬೇಡಿ, ಶನಿವಾರ ಎಣ್ಣೆ, ಲೋಹ ಖರೆದಿಯನ್ನು ತಪ್ಪಿಸಿ ಹಾಗೂ ಇತರರಿಂದ ಎರವಲು ಪಡೆಯುವುದನ್ನು ಕೂಡ ತಪ್ಪಿಸಿ. (ಹಕ್ಕುತ್ಯಾಗ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link