Shani Gochar 2023: ಹೊಸ ವರ್ಷದಲ್ಲಿ ಶನಿ ಕಾಟದಿಂದ ಮುಕ್ತಿ ಪಡೆಯಲಿದ್ದಾರೆ ಈ ರಾಶಿಯವರು

Fri, 04 Nov 2022-12:00 pm,

ಹೊಸ ವರ್ಷದಲ್ಲಿ ಈ ದಿನ ಶನಿ ಸಂಕ್ರಮಣ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ಗ್ರಹವೂ ಒಂದು ನಿರ್ದಿಷ್ಟ ಸಮಯದಲ್ಲಿ ರಾಶಿಯನ್ನು ಬದಲಾಯಿಸುತ್ತವೆ. ಅಕ್ಟೋಬರ್ 23 ರಂದು, ಶನಿಯು ಮಕರ ರಾಶಿಯನ್ನು ಪ್ರವೇಶಿಸಿದೆ ಮತ್ತು ಜನವರಿ 16ರವರೆಗೂ ಇದೇ ರಾಶಿಯಲ್ಲಿ ಇರಲಿದ್ದಾನೆ. ಜನವರಿ 17, 2023 ರಂದು ಶನಿಯು ಮಕರ ರಾಶಿಯನ್ನು ತೊರೆದು ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜನವರಿ 17 ರಂದು ರಾತ್ರಿ 8.02 ಕ್ಕೆ ಶನಿಯ ರಾಶಿಚಕ್ರ ಬದಲಾಗಲಿದೆ. ಈ ಸಮಯದಲ್ಲಿ, ಅನೇಕ ರಾಶಿಚಕ್ರ ಚಿಹ್ನೆಗಳ ಜನರು ಶನಿಯ ಸಾಡೇ ಸಾತಿ ಮತ್ತು ಶನಿಯ ಧೈಯಾ ಪ್ರಭಾವದಿಂದ ಮುಕ್ತಿ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. 

ಜ್ಯೋತಿಷ್ಯದ ಪ್ರಕಾರ, ಶನಿಯು ಮಕರ ರಾಶಿಯಲ್ಲಿದ್ದಾಗ, ಧನು ರಾಶಿ, ಮಕರ ರಾಶಿ ಮತ್ತು ಕುಂಭ ರಾಶಿಯ ಜನರು ಶನಿ ಸಾಡೇ ಸಾತಿಯ ಪ್ರಭಾವವನ್ನು ಎದುರಿಸುತ್ತಾರೆ. ಕುಂಭ ರಾಶಿಯವರ ಮೇಲೆ 24 ಜನವರಿ 2022 ರಿಂದ ಶನಿ ಸಾಡೇ ಸಾತಿ ಆರಂಭವಾಗಿದ್ದು  3 ಜೂನ್ 2027 ಕ್ಕೆ ಕೊನೆಗೊಳ್ಳುತ್ತದೆ. 

ಶನಿ ಗ್ರಹವು ಹೊಸ ವರ್ಷ 2023 ರಲ್ಲಿ, ಜನವರಿ 17 ರಂದು ರಾಶಿ ಚಕ್ರವನ್ನು ಬದಲಾಯಿಸಿದಾಗ ಅದು ಬಹುತೇಕ ಎಲ್ಲಾ ರಾಶಿಚಕ್ರ ಚಿಹ್ನೆಗಳ ಜನರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಜನವರಿ 17, 2023 ರಂದು ಶನಿಯು ಕುಂಭ ರಾಶಿಯನ್ನೂ ಪ್ರವೇಶಿಸಿದಾಗ ಕೆಲವು ರಾಶಿಯವರು ಶನಿಯ ಧೈಯಾ ಮತ್ತು ಸಾಡೇ ಸತಿಯಿಂದ ಮುಕ್ತಿ ಹೊಂದುತ್ತಾರೆ. 

ಜನವರಿ 17, 2023 ರಿಂದ, ತುಲಾ ಮತ್ತು ಮಿಥುನ ರಾಶಿಯವರು ಶನಿಯ ಧೈಯ್ಯಾದಿಂದ ಮುಕ್ತಿ ಪಡೆಯಲಿದ್ದಾರೆ. ಮತ್ತೊಂದೆಡೆ, ಧನು ರಾಶಿಯವರಿಗೆ ಸಾಡೇಸಾತಿಯಿಂದ ಮುಕ್ತಿ ಸಿಗಲಿದೆ. ಅಂತಹ ಸಂದರ್ಭದಲ್ಲಿ ಈ ಜನರ ಕೆಟ್ಟ ಸಮಯವು ಮುಗಿದು, ಒಳ್ಳೆಯ ಸಮಯ ಆರಂಭವಾಗುತ್ತದೆ. ಇದರಿಂದ ಅವರು ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸನ್ನು ಸಾಧಿಸುವರು. ಸಮಾಜದಲ್ಲಿ ಗೌರವವನ್ನೂ ಪಡೆಯುವರು.

ಮತ್ತೊಂದೆಡೆ , ಶನಿಯು  ಕುಂಭ ರಾಶಿಯಲ್ಲಿ ಸಂಕ್ರಮಿಸಿದಾಗ,  ಮೀನ ರಾಶಿಯವರಿಗೆ ಸಾಡೇಸಾತಿ ಆರಂಭವಾಗಲಿದೆ. ಅಂದರೆ, ಜನವರಿ 2023 ರಿಂದ, ಕುಂಭ, ಮಕರ ಮತ್ತು ಮೀನ ರಾಶಿಯವರಿಗೆ ಶನಿ ಸಾಡೇಸಾತಿ ಪ್ರಾರಂಭವಾಗುತ್ತದೆ. ಮಾತ್ರವಲ್ಲ, ಜನವರಿ 2023 ರಲ್ಲಿ, ಕರ್ಕಾಟಕ ಮತ್ತು ವೃಶ್ಚಿಕ ರಾಶಿಯ ಜನರ ಮೇಲೆ ಕೂಡಾ ಶನಿ ಧೈಯ್ಯಾದ ಪರಿಣಾಮ ಗೋಚರಿಸಲಿದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಗಳು ಧಾರ್ಮಿಕ ನಂಬಿಕೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿವೆ. Zee ಮೀಡಿಯಾ ಇವುಗಳನ್ನು ಖಚಿತಪಡಿಸುವುದಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link