ಈ ರಾಶಿಗಳ ಗೋಚರ ಜಾತಕದಲ್ಲಿ ತಾಮ್ರದ ಪಾದದಲ್ಲಿ ಶನಿಯ ಸಂಚಾರ, ಸಿಗಲಿದೆ ಅಪಾರ ಧನ-ಸಂಪತ್ತು-ಪ್ರತಿಷ್ಠೆ!

Thu, 21 Dec 2023-5:20 pm,

Shanii Gochar 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಹೊಸ ವರ್ಷದಲ್ಲಿ ಶನಿ ತಾಮ್ರದ ಪಾದದಲ್ಲಿ ತನ್ನ ಸಂಚಾರ ಆರಂಭಿಸಲಿದ್ದಾನೆ. ಇದರಿಂದ ಕೆಲ ರಾಶಿಗಳ ಜನರ ಭಾಗ್ಯ ಬದಲಾಗಲಿದೆ. (Spiritual News In Kannada)  

ವೃಷಭ ರಾಶಿ: ನಿಮ್ಮ ಗೋಚರ ಜಾತಕದಲ್ಲಿ ಶನಿ ತಾಮ್ರದ ಪಾದದಲ್ಲಿ ಸಂಚರಿಸಲಿದ್ದು, ಇದರಿಂದ ನಿಮಗೆ ಅಪಾರ ಉನ್ನತಿ ಪ್ರಾಪ್ತಿಯಾಗಲಿದೆ. ನಿಮ್ಮ ಗೋಚರ ಜಾತಕದ ದಶಮ ಭಾವದಲ್ಲಿ ಶನಿಯ ಈ ಸಂಚಾರ ನಡೆಯಲಿದೆ. ಇದರಿಂದ ನಿರುದ್ಯೋಗಿಗಳಿಗೆ ನೌಕರಿ ಭಾಗ್ಯ ಒದಗಿಬರಲಿದೆ. ಇದಲ್ಲದೆ ಈ ಅವಧಿಯಲ್ಲಿ ನಿಮ್ಮ ಆದಾಯದಲ್ಲಿಯೂ ಕೂಡ ಅಪಾ ಹೆಚ್ಚಳ ಸಂಭವಿಸಲಿದೆ. ಕುಟುಂಬದ ಎಲ್ಲ ಸದಸ್ಯರ ನಡುವಿನ ಸಂಬಂಧ ಪ್ರೇಮ ಭಾವದಿಂದ ಕೂಡರಲಿದೆ. ಮತ್ತು ನಿಮಗೆ ಈ ಅವಧಿಯಲ್ಲಿ ಸಂತಸದ ಸುದ್ದಿ ಸಿಗುವ ಸಾಧ್ಯತೆ ಇದೆ. ನೌಕರವರ್ಗದ ಜನರಿಗೆ ಪ್ರಮೋಷನ್-ಇಂಕ್ರಿಮೆಂಟ್ ಸಿಗಲಿದೆ. 

ಕನ್ಯಾ ರಾಶಿ: ಶನಿ ನಿಮ್ಮ ರಾಶಿಯ ರಾಶ್ಯಾಧಿಪನಾಗಿರುವ ಬುಧನ ಸ್ನೇಹಿತ ಹಾಗೂ ಇಡೀ ವರ್ಷ ಆತ ನಿಮ್ಮ ಗೋಚರ ಜಾತಕದ ಶಷ್ಟಮ ಭಾವದಲ್ಲಿ ಸಂಚರಿಸಲಿದ್ದಾನೆ, ಹೀಗಾಗಿ ಶನಿಯ ತಾರ್ಮದ ಪಾದದ ಮೂಲಕ ನಡೆ ನಿಮ್ಮ ಪಾಲಿಗೆ ಸಾಕಷ್ಟು ಲಾಭದಾಯಕ ಸಾಬೀತಾಗಲಿದೆ. ಈ ಅವಧಿಯಲ್ಲಿ ನಿಮಗೆ ಕೋರ್ಟ್-ಕಚೇರಿ ವ್ಯವಹಾರಗಳಲ್ಲಿ ಯಶಸ್ಸು ಸಿಗಲಿದೆ. ಶತ್ರುಗಳ ಮೇಲೆ ಜಯಸಾಧಿಸುವಲ್ಲಿ ನೀವು ಸಫಲರಾಗುವಿರಿ. ಈ ಅವಧಿಯಲ್ಲಿ ನಿಮ್ಮ ವ್ಯಾಪಾರ ಮತ್ತು ಸಂಪತ್ತಿನಲ್ಲಿ ವೃದ್ಧಿಯನ್ನು ನೀವು ನೋಡಬಹುದು, ಹೊಸ ಬಿಸ್ನೆಸ್ ಆರಂಭಿಸಲು ಇದು ಸಕಾಲವಾಗಿದೆ. 

ಕುಂಭ ರಾಶಿ: ಪ್ರಸ್ತುತ ನಿಮ್ಮ ರಾಶ್ಯಾಧಿಪನಾಗಿರುವ ಶನಿ ನಿಮ್ಮ ಗೋಚರ ಜಾತಕದ ಲಗ್ನಭಾವದಲ್ಲಿ ಸಂಚರಿಸುತ್ತಿದ್ದಾನೆ. ಹೀಗಾಗಿ ಶನಿಯ ತಾಮ್ರದ ಪಾದದ ಮೂಲಕ ನಡೆ ನಿಮ್ಮ ಪಾಲಿಗೆ ಒಂದು ವರದಾನ ಎಂದರೆ ತಪ್ಪಾಗಲಾರದು, ಈ ಅವಧಿಯಲ್ಲಿ ನಿಮ್ಮ ಆತ್ಮವಿಶ್ವಾಸ ಅಪಾರ ಹೆಚ್ಚಾಗಲಿದೆ. ಒಂದು ವೇಳೆ ನಿಮ್ಮ ವ್ಯಾಪಾರ ಲೋಹ, ಇಂಧನ, ಖನಿಜ, ಪೆಟ್ರೋಲ್ ಹಾಗೂ ಕಪ್ಪು ಬಣ್ಣದ ಸಂಗತಿಗಳಿಗೆ ಸಂಬಂಧಿಸಿದ್ದರೆ, ನಿಮಗೆ ಭಾರಿ ಲಾಭ ಸಿಗುವ ಸಂಕೇತಗಳಿವೆ. ಈ ಅವಧಿಯಲ್ಲಿ ನೀವು ಮಾಡುವ ನಿವೇಶ ನಿಮಗೆ ಭವಿಷ್ಯದಲ್ಲಿ ಭಾರಿ ಲಾಭವನ್ನು ತಂದು ಕೊಡಲಿದೆ. 

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ZEENEWS TRENDING STORIES

By continuing to use the site, you agree to the use of cookies. You can find out more by Tapping this link