ನವರಾತ್ರಿಯಂದೇ ಶನಿ ಗೋಚರ: ಈ ರಾಶಿಯವರಿಗೆ ಮುಂದಿನ ಒಂದೂವರೆ ವರ್ಷ ಹಣದ ಹೊಳೆ, ರಾಜರಂತಹ ಜೀವನ

Sun, 15 Oct 2023-6:01 am,

ಜ್ಯೋತಿಷ್ಯ ಪಂಚಾಂಗದ ಪ್ರಕಾರ, ನ್ಯಾಯದ ದೇವರು ಶನಿ ದೇವನು ನವರಾತ್ರಿಯ ಎರಡನೇ ದಿನದಂದು ಅಂದರೆ ಅಕ್ಟೋಬರ್ 17 ರಂದು ಮಧ್ಯಾಹ್ನ 01:37 ಕ್ಕೆ ಧನಿಷ್ಠ ನಕ್ಷತ್ರವನ್ನು ಪ್ರವೇಶಿಸುತ್ತಾನೆ. ಶನಿದೇವನು ನವೆಂಬರ್ 22 ರವರೆಗೆ ಈ ರಾಶಿಯಲ್ಲಿ ಇರುತ್ತಾನೆ. ಇದರ ನಂತರ, ಧನಿಷ್ಠ ನಕ್ಷತ್ರದಿಂದ ಹೊರಬಂದು ಶತಭಿಷಾ ನಕ್ಷತ್ರಕ್ಕೆ ಸಾಗುತ್ತಾನೆ.

ಶನಿದೇವನು ಧನಿಷ್ಠಾ ನಕ್ಷತ್ರಕ್ಕೆ ಪ್ರವೇಶಿಸುವುದರಿಂದ 4 ರಾಶಿಗಳ ಜನರು ಗರಿಷ್ಠ ಪ್ರಯೋಜನಗಳನ್ನು ಪಡೆಯುತ್ತಾರೆ. ಅಷ್ಟೇ ಅಲ್ಲದೆ, ಶನಿ ಮಹಾದಶಾದಿಂದ ಮುಂದಿನ ಒಂದೂವರೆ ವರ್ಷ ಭರ್ಜರಿ ಧನಲಾಭವನ್ನು ಪಡೆಯಲಿದ್ದಾರೆ. ಅಂತಹ ಅದೃಷ್ಟಶಾಲಿ ರಾಶಿಗಳು ಯಾವುವು ಎಂದು ತಿಳಿದುಕೊಳ್ಳೋಣ.

ಮೇಷ ರಾಶಿ: ಸದ್ಯ ಶನಿದೇವನು ಮೇಷ ರಾಶಿಯ ಆದಾಯದ ಮನೆಯಲ್ಲಿ ಸ್ಥಿತನಿದ್ದಾನೆ. ಧನಿಷ್ಠಾ ನಕ್ಷತ್ರದ ನಾಲ್ಕನೇ ಹಂತದಲ್ಲಿ ಮಂಗಳನ ಪ್ರಭಾವ ಹೆಚ್ಚು. ಆದ್ದರಿಂದ, ಮೇಷ ರಾಶಿಯ ಜನರು ಧನಿಷ್ಠ ನಕ್ಷತ್ರದಲ್ಲಿ ಶನಿ ದೇವನ ಸಂಚಾರದ ಸಮಯದಲ್ಲಿ ಲಾಭವನ್ನು ಪಡೆಯುತ್ತಾರೆ. ವಿಶೇಷವಾಗಿ, ಅಕ್ಟೋಬರ್ 30ರ ನಂತರ, ಮೇಷ ರಾಶಿಯ ಜನರು ತಮ್ಮ ಎಲ್ಲಾ ಕೆಲಸಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಹಣ ಗಳಿಸುವ ಅವಕಾಶವಿರುತ್ತದೆ. ಒಟ್ಟಿನಲ್ಲಿ ಮೇಷ ರಾಶಿಯವರಿಗೆ ಮುಂಬರುವ ಸಮಯವು ಶುಭಕರವಾಗಿರಲಿದೆ.

ವೃಷಭ ರಾಶಿ: ಕುಂಭ ರಾಶಿಯಲ್ಲಿ ಸಾಗುವ ಸಮಯದಲ್ಲಿ, ಶನಿ ದೇವನು ವೃಷಭ ರಾಶಿಯ ವೃತ್ತಿ ಮತ್ತು ವ್ಯಾಪಾರ ಮನೆಯಲ್ಲಿ ಸ್ಥಿತನಾಗಿದ್ದಾನೆ. ಈ ಮನೆಯ ಅಧಿಪತಿ ಶನಿದೇವ. ಆದ್ದರಿಂದ, ವೃಷಭ ರಾಶಿಯವರಿಗೆ ಶನಿದೇವನ ವಿಶೇಷ ಆಶೀರ್ವಾದವು ಸಿಗಲಿದೆ. ಧನಿಷ್ಠಾ ನಕ್ಷತ್ರದ ಮೂರನೇ ಹಂತದ ಅಧಿಪತಿ ಶುಕ್ರ. ವೃಷಭ ರಾಶಿಯ ಜನರ ಅಧಿಪತಿ ಕೂಡ ಶುಕ್ರ. ಆದ್ದರಿಂದ ಧನಿಷ್ಠಾ ನಕ್ಷತ್ರದಲ್ಲಿ ಶನಿದೇವನ ಸಂಕ್ರಮಣದಿಂದ ವೃಷಭ ರಾಶಿಯವರಿಗೆ ಸಂತಸ ಹೆಚ್ಚಾಗುತ್ತದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಬಡ್ತಿ ಪಡೆಯಬಹುದು. ವಿದೇಶ ಪ್ರವಾಸದ ಸಾಧ್ಯತೆಯೂ ಇದೆ.

ಮಿಥುನ ರಾಶಿ: ಈ ರಾಶಿಯ ಜನರು ಧನಿಷ್ಠಾ ನಕ್ಷತ್ರದಲ್ಲಿ ಶನಿದೇವನ ಸಂಚಾರದಿಂದ ಪ್ರಯೋಜನ ಪಡೆಯುತ್ತಾರೆ. ಧನಿಷ್ಠಾ ನಕ್ಷತ್ರದ ಎರಡನೇ ಹಂತದ ಅಧಿಪತಿ ಗ್ರಹಗಳ ರಾಜಕುಮಾರ ಬುಧದೇವ. ಆದ್ದರಿಂದ, ಮಿಥುನ ರಾಶಿಯ ಜನರು ಲಾಭವನ್ನು ಪಡೆಯುತ್ತಾರೆ. ಸದ್ಯ ಶನಿದೇವ ಮಿಥುನ ರಾಶಿಯತ್ತ ಮುಖ ಮಾಡುತ್ತಿದ್ದಾನೆ. ಮಿಥುನ ರಾಶಿಯ ಜನರು ನಕ್ಷತ್ರಪುಂಜದ ಬದಲಾವಣೆಯಿಂದ ಲಾಭವನ್ನು ಪಡೆಯುತ್ತಾರೆ.

ಮಕರ ರಾಶಿ: ಧನಿಷ್ಠಾ ನಕ್ಷತ್ರದಲ್ಲಿ ಶನಿದೇವನ ಸಂಚಾರದಿಂದ ಈ ರಾಶಿಯ ಜನರು ಸಹ ಪ್ರಯೋಜನಗಳನ್ನು ಪಡೆಯುತ್ತಾರೆ. ಈ ರಾಶಿಯ ಸಂಪತ್ತಿನ ಮನೆಯಲ್ಲಿ ಶನಿ ದೇವನು ಇರುತ್ತಾನೆ. ಇದೇ ಕಾರಣದಿಂದ ಈ ಜನರಿಗೆ ವ್ಯಾಪಾರದಲ್ಲಿ ಅಪಾರ ಧನಲಾಭವಾಗಲಿದೆ.

(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ) 

ZEENEWS TRENDING STORIES

By continuing to use the site, you agree to the use of cookies. You can find out more by Tapping this link