ಛಾಯಾಗ್ರಹ ರಾಹುವಿನ ನಕ್ಷತ್ರದಲ್ಲಿ ಶನಿ ಪ್ರವೇಶ, 3 ರಾಶಿಗಳ ಜನರಿಗೆ ಭಾರಿ ವಿತ್ತೀಯ ಲಾಭ, ಎಲ್ಲಾ ಕ್ಷೇತ್ರದಲ್ಲೂ ಯಶಸ್ಸು!

Fri, 03 Mar 2023-5:18 pm,

ಮೇಷ ರಾಶಿ- ಶತಭಿಷಾ ನಕ್ಷತ್ರಕ್ಕೆ ಶನಿಯ ಪ್ರವೇಶವು ಮೇಷ ರಾಶಿಯವರಿಗೆ ಮಂಗಳಕರವಾಗಿರುತ್ತದೆ. ಈ ಸಮಯದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಜನರು ಯಶಸ್ವಿಯಾಗುತ್ತಾರೆ. ಕೆಲಸದ ಸ್ಥಳದಲ್ಲಿ ಮೆಚ್ಚುಗೆ ಸಿಗಲಿದೆ. ಈ ಸಮಯದಲ್ಲಿ ವ್ಯಾಪಾರಸ್ಥರು ಉತ್ತಮ ಲಾಭವನ್ನು ಪಡೆಯಬಹುದು. ಅಲ್ಲದೆ, ಸಿಕ್ಕಿಹಾಕಿಕೊಂಡಿದ್ದ ಹಣವೂ ನಿಮ್ಮತ್ತ ಮರಳಲಿದೆ. ಮತ್ತೊಂದೆಡೆ, ಶನಿದೇವನು ನಿಮ್ಮ ಸಂಕ್ರಮಣದ ಜಾತಕದ ಏಕಾದಶ ಭಾವದಲ್ಲಿ ಸಂಚಿರುತ್ತಿದ್ದಾನೆ. ಆದ್ದರಿಂದ, ನಿಮ್ಮ ಆದಾಯದಲ್ಲಿ ಭಾರಿ ಹೆಚ್ಚಳವಾಗಬಹುದು. ಸ್ಟಾಕ್ ಮಾರ್ಕೆಟ್, ಬೆಟ್ಟಿಂಗ್ ಮತ್ತು ಲಾಟರಿ ಕೂಡ ಸಾಕಷ್ಟು ಲಾಭದ ಅವಕಾಶಗಳನ್ನು ತಂದು ಕೊಡಲಿವೆ.  

ಮಿಥುನ ರಾಶಿ- ಶತಭಿಷಾ ನಕ್ಷತ್ರಕ್ಕೆ ಶನಿದೇವನ ಪ್ರವೇಶವು ನಿಮಗೆ ಲಾಭದಾಯಕವೆಂದು ಸಾಬೀತಾಗಲಿದೆ. ಈ ಅವಧಿಯಲ್ಲಿ, ನೀವು ವಿದೇಶಕ್ಕೆ ಹೋಗುವ ಅವಕಾಶವನ್ನು ಪಡೆಯಬಹುದು ಅಥವಾ ದೀರ್ಘ ಪ್ರಯಾಣಕ್ಕೆ ಹೋಗಬಹುದು. ಇದೇ ವೇಳೆ, ಧಾರ್ಮಿಕ ಕಾರ್ಯಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗಬಹುದು. ಇದರೊಂದಿಗೆ ಜನವರಿ 17 ರಿಂದ ನಿಮಗೆ ಶನಿಯ ಎರಡೂವರೆ ವರ್ಷಗಳ ಕಾಟದಿಂದ ಮುಕ್ತಿ ಸಿಕ್ಕಿದೆ. ಹೀಗಾಗಿ ನೀವು ಪ್ರತಿ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಇದರೊಂದಿಗೆ ಸಮಾಜದಲ್ಲಿ ನಿಮ್ಮ ಘನತೆ ಗೌರವ ಹೆಚ್ಚಾಗಲಿದೆ. ತಂದೆಯೊಂದಿಗಿನ ನಿಮ್ಮ ಸಂಬಂಧ ಗಟ್ಟಿಯಾಗಲಿದೆ. ಅದೃಷ್ಟ ನಿಮ್ಮೊಂದಿಗೆ ಇರುತ್ತದೆ.

ತುಲಾ ರಾಶಿ- ತುಲಾ ರಾಶಿಯ ವಿದ್ಯಾರ್ಥಿಗಳಿಗೆ ಶತಭಿಷಾ ನಕ್ಷತ್ರದಲ್ಲಿ ಶನಿಯ ಸಂಕ್ರಮಣವು ತುಂಬಾ ಫಲಪ್ರದ ಸಾಬೀತಾಗಲಿದೆ ಈ ಸಮಯದಲ್ಲಿ ನೀವು ಕೆಲಸ-ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತೀರಿ. ಅಲ್ಲದೆ, ನಿರುದ್ಯೋಗಿಗಳು ಹೊಸ ಉದ್ಯೋಗಾವಕಾಶ ಸಿಗುವ ಸಾಧ್ಯತೆ ಇದೆ. ಇದೇ ವೇಳೆ, ಈ ಅವಧಿಯಲ್ಲಿ ವ್ಯಾಪಾರಿಗಳು ತಮ್ಮ ವ್ಯವಹಾರವನ್ನು ವಿಸ್ತರಿಸಬಹುದು. ಅಲ್ಲದೆ, ಹೊಸ ವ್ಯವಹಾರ ಒಪ್ಪಂದವನ್ನು ಅಂತಿಮಗೊಳಿಸಬಹುದು. ಇದರಿಂದ ಭವಿಷ್ಯದಲ್ಲಿ ಉತ್ತಮ ಲಾಭ ನಿಮ್ಮದಾಗಲಿದೆ. ಮತ್ತೊಂದೆಡೆ, ಯಾವುದೇ ಕೆಲಸವನ್ನು ಸ್ವಂತವಾಗಿ ಮಾಡುವ ಈ ರಾಶಿಯ  ಜನರು ಭಾರಿ ಹಣವನ್ನು ಪಡೆಯಬಹುದು. ಹಠಾತ್ ಹಣದ ಲಾಭದ ಸಾಧ್ಯತೆಗಳೂ ಸೃಷ್ಟಿಯಾಗುತ್ತಿವೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ZEENEWS TRENDING STORIES

By continuing to use the site, you agree to the use of cookies. You can find out more by Tapping this link